ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಎಲೋನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಲ್ಲಿ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ. ಈ ವರ್ಷ ಇದುವರೆಗೆ 40 ಮಿಷನ್ಗಳನ್ನು ಪೂರ್ಣಗೊಳಿಸಿ ಬಾಹ್ಯಾಕಾಶದಲ್ಲಿ ಪ್ರಭುತ್ಬ ಮೆರೆದಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಫಾಲ್ಕನ್ 9 ರಾಕೆಟ್ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
ಇತ್ತೀಚೆಗೆ ಉಡ್ಡಯನ ಮಾಡಲಾಗಿರುವ 51 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಅದರ ಕಕ್ಷೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಈ ವರ್ಷ ಇಲ್ಲಿಯವರೆಗೆ ಸ್ಪೇಸ್‌ಎಕ್ಸ್‌ನ 40 ಕಾರ್ಯಾಚರಣೆಗಳನ್ನು ಕೈಗೊಂಡಿದ್ದು, ಅವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ಭೂಮಿಯಿಂದ 310 ಕಿಲೋಮೀಟರ್ ಎತ್ತರದಲ್ಲಿ ಶೆರ್ಪಾ-ಎಲ್‌ಟಿಸಿಗೆ ನಿಯೋಜನೆ ಗೊಳಿಸಲಾಗುತ್ತದೆ.ನಂತರ, ಶೆರ್ಪಾ-ಎಲ್‌ಟಿಸಿ ತನ್ನ ಗೊತ್ತುಪಡಿಸಿದ 1,000-ಕಿಲೋಮೀಟರ್ ವೃತ್ತಾಕಾರದ ಕಕ್ಷೆಗೆ ಸೇರಿಸಲು ಆನ್‌ಬೋರ್ಡ್ ಹೈ-ಥ್ರಸ್ಟ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಬಳಸುತ್ತದೆ. ಅಲ್ಲಿ ಅದನ್ನು 2 ವರ್ಷಗಳವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ವಾರ, ಸ್ಪೇಸ್‌ಎಕ್ಸ್ ಪ್ರತಿ ಐದು ದಿನಗಳಿಗೊಮ್ಮೆಯಂತೆ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. 2023 ರಲ್ಲಿ 100 ಉಪಗ್ರಹಗಳನ್ನು ಉಡ್ಡಯನ ಮಾಡಲು ಸ್ಪೇಸ್ ಎಕ್ಸ್ ಉದ್ದೇಶಿಸಿದೆ ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.
SpaceX ಈಗಾಗಲೇ ಅತಿ ಹೆಚ್ಚು ಉಪ್ರಗ್ರಹಗಳನ್ನು ಉಡ್ಡಯನ ಮಾಡಿ ದಾಖಲೆ ಬರೆದಿದೆ. ಅದು ವಾರ್ಷಿಕ 31 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದಿದೆ. ಮತ್ತು ಈಗ ಆ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಕಳೆದ ತಿಂಗಳ ಕೊನೆಯಲ್ಲಿ, ಸ್ಪೇಸ್‌ಎಕ್ಸ್ ತನ್ನ 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನು ಓದಿ:ಮತ್ತೆ ತಾಂತ್ರಿಕ ಸಮಸ್ಯೆಯಿಂದ ನಾಸಾದ ಆರ್ಟೆಮಿಸ್ ಉಡ್ಡಯನ ಮುಂದೂಡಿಕೆ..!