ಕರ್ನಾಟಕ

karnataka

ETV Bharat / science-and-technology

SpaceX: ಮೊದಲ ಸಂಪೂರ್ಣ ನಾಗರಿಕ ಮಿಷನ್ ಉಡಾವಣೆಗೆ ಸಜ್ಜು - ಉದ್ಯಮಿ ಜಾರೆಡ್ ಐಸಾಕ್‌ಮ್ಯಾನ್

ಸ್ಪೇಸ್ ಎಕ್ಸ್​ ಕಂಪನಿಯು AX-1 ಮಿಷನ್ ಅನ್ನು 2021ರ ಅಂತ್ಯಕ್ಕೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಾಲ್ಕು ಖಾಸಗಿ ಗಗನಯಾತ್ರಿಗಳು ಎಂಟು ದಿನಗಳ ಕಾಲ ಬಾಹ್ಯಾಕಾಶ ಸಂಚಾರ ನಡೆಸಲಿದ್ದು, ತಲಾ 55 ಮಿಲಿಯನ್ ಡಾಲರ್ ಪಾವತಿಬೇಕಾಗುತ್ತದೆ.

SPACEX FIRST ALL CIVILIAN MISSION
SpaceX: ಮೊದಲ ಸಂಪೂರ್ಣ ನಾಗರಿಕ ಮಿಷನ್ ಉಡಾವಣೆಗೆ ಸಜ್ಜು

By

Published : Sep 15, 2021, 10:08 AM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ) : ಎಲಾನ್ ಮಸ್ಕ್ ಕಂಪನಿಯಾದ ಸ್ಪೇಸ್ ಎಕ್ಸ್ ತನ್ನ ಮೊದಲಸಂಪೂರ್ಣ ನಾಗರಿಕ ಮಿಷನ್ (ಇಲ್ಲಿ ಯಾರೂ ವೃತ್ತಿಪರ ಗಗನ ಯಾತ್ರಿಗಳು ಇರುವುದಿಲ್ಲ) 'ಇನ್​ಸ್ಪಿರೇಷನ್- 4' ಅನ್ನು ಸೆಪ್ಟೆಂಬರ್ 15 ರಂದು ಕಕ್ಷೆಗೆ ಕಳುಹಿಸಲು ಸಿದ್ಧವಾಗಿದೆ. ಈ ಕುರಿತು ಇನ್​ಸ್ಪಿರೇಷನ್ - 4 ಮಿಷನ್ ತಂಡವು ಟ್ವೀಟ್‌ ಮಾಡಿದ್ದು, ಈಗಾಗಲೇ ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಉಡಾವಣೆಗೆ ಇನ್​ಸ್ಪಿರೇಷನ್ ಸಜ್ಜಾಗಿದೆ ಎಂದಿದೆ.

ನಾಲ್ಕು ಪ್ರವಾಸಿಗರನ್ನು ಹೊತ್ತೊಯ್ಯಲಿರುವ ಇನ್​ಸ್ಪಿರೇಷನ್- 4 ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ಇಂದ ಉಡಾವಣೆಯಾಗಲು ಸಜ್ಜಾಗಿದೆ. ಬಾಹ್ಯಾಕಾಶ ಇತಿಹಾಸದಲ್ಲಿ ವೃತ್ತಿಪರ ಗಗನಯಾನಿಗಳಿಲ್ಲದೇ ಇದೇ ಮೊದಲ ಬಾರಿಗೆ ರಾಕೆಟ್​​ ಬಾಹ್ಯಾಕಾಶಕ್ಕೆ ತೆರಳಲಿದೆ. ಮೂರು ದಿನಗಳ ಪ್ರವಾಸ ಇದಾಗಲಿದೆ.

ಬುಧವಾರ ರಾತ್ರಿ ಈ ರಾಕೆಟ್ ನಭಕ್ಕೆ ಹಾರಲಿದ್ದು, ಉದ್ಯಮಿ ಜಾರೆಡ್ ಐಸಾಕ್‌ಮ್ಯಾನ್ ಅವರೊಂದಿಗೆ ಇಬ್ಬರು ಕ್ಯಾನ್ಸರ್​ನಿಂದ ಗುಣಮುಖರಾದ ಓರ್ವ ಆರೋಗ್ಯ ಕಾರ್ಯಕರ್ತರು ಮತ್ತು ಇನ್ನಿಬ್ಬರು ವ್ಯಕ್ತಿಗಳಿರುತ್ತಾರೆ ಎಂಬ ವಿಚಾರ ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಸುಮಾರು 160 ಕಿಲೋಮೀಟರ್ ದೂರದಲ್ಲಿ ಗಗನಯಾತ್ರಿಗಳು ಸಂಚಾರ ನಡೆಸಲಿದ್ದಾರೆ.

ಇನ್​ಸ್ಪಿರೇಷನ್- 4 ತಂಡದ ಪ್ರಕಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ಸ್ಪೇಸ್ ಎಕ್ಸ್ ಕಂಪನಿಯ ಖಾಸಗಿ ಪ್ರಯಾಣವಾಗಿದ್ದು, ಇದಕ್ಕೆ ಈಗಾಗಲೇ ನೂರು ಮಿಲಿಯನ್ ಡಾಲರ್ ಸ್ಪೇಸ್​ ಎಕ್ಸ್​ಗೆ ಒಪ್ಪಿಸಲಾಗಿದೆ.

ಇನ್ನು ಸ್ಪೇಸ್ ಎಕ್ಸ್​ ಕಂಪನಿಯು AX-1 ಮಿಷನ್ ಅನ್ನು 2021ರ ಅಂತ್ಯಕ್ಕೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಾಲ್ಕು ಖಾಸಗಿ ಗಗನಯಾತ್ರಿಗಳು ಎಂಟು ದಿನಗಳ ಕಾಲ ಬಾಹ್ಯಾಕಾಶ ಸಂಚಾರ ನಡೆಸಲಿದ್ದು, ತಲಾ 55 ಮಿಲಿಯನ್ ಡಾಲರ್ ಪಾವತಿಬೇಕಾಗುತ್ತದೆ.

ಇದನ್ನೂ ಓದಿ:ಕಾಬೂಲ್ ಏರ್​ಪೋರ್ಟ್​ನಲ್ಲಿ ವಿಮಾನಸೇವೆ ಶೀಘ್ರ ಆರಂಭ: ವರದಿ

ABOUT THE AUTHOR

...view details