ನವದೆಹಲಿ:ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಚಾಟ್ ಬುಧವಾರ ಭಾರತದ ಬಳಕೆದಾರರಿಗಾಗಿ ಎರಡು ಹೊಸ ನಿಕ್ ನೇಮ್ ಥೀಮ್ ಆಧರಿತ ವರ್ಧಿತ ರಿಯಾಲಿಟಿ (ವರ್ಚ್ಯುಯಲ್ ರಿಯಾಲಿಟಿ -ಎಆರ್) ಲೆನ್ಸ್‌ಗಳನ್ನು ಪರಿಚಯಿಸಿದೆ. ‘India’s Top Nicknames’ ಮತ್ತು ‘My Nickname’ ಎಂದು ಇವುಗಳನ್ನು ಹೆಸರಿಸಲಾಗಿದೆ. 'ಭಾರತದ ಟಾಪ್ ನಿಕ್ ನೇಮ್ಸ್' ಲೆನ್ಸ್ ದೇಶದ ನೆಚ್ಚಿನ ಅಡ್ಡಹೆಸರುಗಳನ್ನು ಒಳಗೊಂಡ ಐದು ಬೆಸ್ಪೋಕ್ ವಿನ್ಯಾಸಗಳನ್ನು ಒಳಗೊಂಡಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಇದು ಮಾತ್ರವಲ್ಲದೇ ಮೊದಲ ಬಾರಿಗೆ ಭಾರತೀಯರು ಬಳಕೆದಾರರು ತಮ್ಮದೇ ಆದ ನಿಕ್ ನೇಮ್ ಅನ್ನು ರಚಿಸಲು 'ಮೈ ನಿಕ್ ನೇಮ್' ಲೆನ್ಸ್ ಅನ್ನು ಕಸ್ಟಮೈಸ್ ಮಾಡಬಹುದು. ಹೊಸ ಕಸ್ಟಮ್ ನಿಕ್ ನೇಮ್ AR ಸೌಲಭ್ಯವು ಬಳಕೆದಾರರು ತಮ್ಮ ನಿಕ್ ನೇಮ್ಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಮತ್ತು ತಮ್ಮ ಗೆಳೆಯರು, ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ.
ಕಂಪನಿಯು ಭಾರತೀಯರ ನಿಕ್ ನೇಮ್ ಸಂಸ್ಕೃತಿಯ ಕುರಿತು YouGov ಸಹಭಾಗಿತ್ವದಲ್ಲಿ ಹೊಸ ಸಂಶೋಧನೆಯೊಂದನ್ನು ಮಾಡಿದ್ದು, ಅದರ ವರದಿ ಬಿಡುಗಡೆ ಮಾಡಿದೆ. ನಿಕ್ ನೇಮ್ಗಳ ಬಗ್ಗೆ ದೇಶದಲ್ಲಿ ಇರುವ ವ್ಯಾಮೋಹವನ್ನು ಈ ವರದಿ ಬಹಿರಂಗಪಡಿಸಿದೆ. ಭಾರತೀಯ Gen Zs ಮತ್ತು ಯುವ ಮಿಲೇನಿಯಲ್ಸ್ ತಮ್ಮ ನಿಕ್ ನೇಮ್ಗಳನ್ನು ಆನ್‌ಲೈನ್‌ನಲ್ಲಿ ಬಳಸಲು ಇಷ್ಟಪಡುತ್ತಾರೆ ಎಂದು ಸಂಶೋಧನೆ ತಿಳಿಸಿದೆ.
ಶೇಕಡಾ 96 ರಷ್ಟು ಭಾರತೀಯರು ತಮ್ಮ ಜೀವನದಲ್ಲಿ ಕನಿಷ್ಠ ಒಂದಾದರೂ ನಿಕ್ ನೇಮ್ ಹೊಂದಿರುತ್ತಾರೆ ಎಂದು ಡೇಟಾ ಬಹಿರಂಗಪಡಿಸಿದೆ. "ನಿಕ್ ನೇಮ್ಗಳು ಭಾರತೀಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅವು ನಮಗೆ ನಮ್ಮ ನಿಜವಾದ ಸ್ನೇಹಿತರು ಅಥವಾ ಕುಟುಂಬದವರು ನೀಡಿದ ಹೆಸರುಗಳಾಗಿವೆ" APAC, Snap ನ ಎಂದು ಮಾಧ್ಯಮ ಪಾಲುದಾರಿಕೆಗಳ ನಿರ್ದೇಶಕ ಕನಿಷ್ಕ್ ಖನ್ನಾ ಹೇಳಿದರು.