ಕರ್ನಾಟಕ

karnataka

ETV Bharat / science-and-technology

ಭಾರಿ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್.. ಈ ಬಾರಿ 6000 ಉದ್ಯೋಗಗಳು ವಜಾ - ಇತ್ತೀಚಿನ ವಜಾಗೊಳಿಸುವಿಕೆಯ ಭಾಗ

ಭಾರೀ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್ ಮತ್ತೊಮ್ಮೆ ಉದ್ಯೋಗ ಕಡಿತ ಘೋಷಿಸಿದೆ. ಇನ್ನೂ 6000 ಮಂದಿಯನ್ನು ವಜಾ ಮಾಡಲಾಗುವುದು ಎಂದು ತಿಳಿದು ಬಂದಿದೆ.

Sleep Device Recall Losses  Philips announces around 6000 job cuts  Philips layoffs 2023  ಭಾರೀ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್  6000 ಉದ್ಯೋಗಗಳು ವಜಾ  ಪ್ರಸಿದ್ಧ ಅಂತಾರಾಷ್ಟ್ರೀಯ ಕಂಪನಿ ಫಿಲಿಪ್ಸ್  ಸ್ಲೀಪ್ ರೆಸ್ಪಿರೇಟರ್‌ಗಳಲ್ಲಿನ ದೋಷ  ಸ್ಲೀಪ್ ರೆಸ್ಪಿರೇಟರ್‌ಗಳಲ್ಲಿನ ದೋಷಗಳಿಂದಾಗಿ ಭಾರಿ ನಷ್ಟ  ಇತ್ತೀಚಿನ ವಜಾಗೊಳಿಸುವಿಕೆಯ ಭಾಗ  ಫಿಲಿಪ್ಸ್ ಮತ್ತೊಮ್ಮೆ ಉದ್ಯೋಗ ಕಡಿತವನ್ನು ಘೋಷಿಸಿದೆ
ಭಾರೀ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್

By

Published : Jan 30, 2023, 2:50 PM IST

ಪ್ರಸಿದ್ಧ ಅಂತಾರಾಷ್ಟ್ರೀಯ ಕಂಪನಿ ಫಿಲಿಪ್ಸ್ ಮತ್ತೊಮ್ಮೆ ಉದ್ಯೋಗ ಕಡಿತವನ್ನು ಘೋಷಿಸಿದೆ. ವಿಶ್ವಾದ್ಯಂತ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 6,000 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯ ಉತ್ಪನ್ನಗಳಲ್ಲಿ ಒಂದಾದ ಸ್ಲೀಪ್ ರೆಸ್ಪಿರೇಟರ್‌ಗಳಲ್ಲಿನ ದೋಷಗಳಿಂದಾಗಿ ಭಾರಿ ನಷ್ಟ ಉಂಟಾಗಿದೆ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಮೂರು ತಿಂಗಳ ಅವಧಿಯಲ್ಲಿ ಕಂಪನಿಯು ಸಾವಿರಾರು ಉದ್ಯೋಗಿಗಳನ್ನು ಕಡಿತಗೊಳಿಸಿರುವುದು ಇದು ಎರಡನೇ ಬಾರಿ ಎಂಬುದು ಗಮನಾರ್ಹ.

ಭಾರೀ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್

ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ರಾಯ್ ಜೇಕಬ್ಸ್ ಇತ್ತೀಚಿನ ಉದ್ಯೋಗ ಕಡಿತಗಳನ್ನು ಘೋಷಿಸಿದರು. ಇದು ಕಠಿಣ ನಿರ್ಧಾರವಾಗಿದ್ದರೂ ಉದ್ಯೋಗಿಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡಬೇಕಿತ್ತು ಎಂದು ಹೇಳಿದ್ದರು. ನಮ್ಮ ಕಾರ್ಯಕ್ಷಮತೆ ಸುಧಾರಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು, ನಮ್ಮ ಕೆಲಸದ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈಗ ಅತ್ಯಗತ್ಯವಾಗಿದೆ. ಆದ್ದರಿಂದಲೇ ಎಷ್ಟೇ ಕಷ್ಟವಾದರೂ ಸರಿ 2025ರ ವೇಳೆಗೆ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಬೇಕಾಗಿದೆ ಎಂದು ಜೇಕಬ್ಸ್ ಹೇಳಿದರು.

ಇತ್ತೀಚಿನ ವಜಾಗೊಳಿಸುವಿಕೆಯ ಭಾಗವಾಗಿ 2023 ರಲ್ಲಿ ಸುಮಾರು 3 ಸಾವಿರ ಜನರನ್ನು ತಮ್ಮ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ತೋರುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 4,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಸಿಇಒ ಜೇಕಬ್ಸ್ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವಾಗ ಈ ನಿರ್ಧಾರವನ್ನು ಪ್ರಕಟಿಸಿದರು. ಅಂದರೆ ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯು ಒಟ್ಟು 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ.

ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ ಜನರಿಗಾಗಿ ಫಿಲಿಪ್ಸ್ 'ಸ್ಲೀಪ್ ರೆಸ್ಪಿರೇಟರ್'ಗಳನ್ನು ತಯಾರಿಸಿದೆ. ಆದಾಗ್ಯೂ, ಈ ಯಂತ್ರಗಳಲ್ಲಿನ ದೋಷಗಳು ಕಂಡು ಬಂದಿತ್ತು. ರೋಗಿಗಳನ್ನು ವಿಷಕಾರಿ ಮತ್ತು ಕಾರ್ಸಿನೋಜೆನಿಕ್ ಪರಿಣಾಮಗಳ ಅಪಾಯಕ್ಕೆ ಒಳಪಡಿಸಬಹುದು ಎಂಬ ಕಳವಳ ವ್ಯಕ್ತವಾಗಿತ್ತು. ಇದರ ಪರಿಣಾಮವಾಗಿ, 2021 ರಲ್ಲಿ ಫಿಲಿಪ್ಸ್ ಈ ಯಂತ್ರಗಳನ್ನು ವಿಶ್ವಾದ್ಯಂತ ಹಿಂತೆಗೆದುಕೊಂಡಿತ್ತು. ಇದರಿಂದ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿತ್ತು. ಈ ಮರು ಸ್ಥಾಪನೆಯಿಂದಾಗಿ.. 2022 ರಲ್ಲಿ ಫಿಲಿಪ್ಸ್ 1.605 ಬಿಲಿಯನ್ ಯುರೋಗಳನ್ನು ಕಳೆದುಕೊಂಡಿತು. ಈ ಹಿನ್ನೆಲೆ ಉದ್ಯೋಗ ಕಡಿತ ನಿರ್ಧಾರವನ್ನು ಕಂಪನಿ ತೆಗೆದುಕೊಂಡಿದೆ.

ಅಮೆರಿಕದಲ್ಲಿ ಉದ್ಯೋಗ ಕಡಿತ: ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ ಕಂಪನಿಗಳು ಸಿಬ್ಬಂದಿ ಕಡಿತ ಹೆಚ್ಚಿಸಿದ್ದು, ಇದರಲ್ಲಿ ಶೇಕಡಾ 40 ರಷ್ಟು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಜಾಬ್​ ವೀಸಾದಡಿ ಆ ದೇಶಗಳಲ್ಲಿರುವ ಭಾರತೀಯರು ಉದ್ಯೋಗ ನಷ್ಟದಿಂದ, ಭಾರತಕ್ಕೆ ವಾಪಸ್ಸಾಗುವ ಸ್ಥಿತಿ ಎದುರಾಗಿದೆ. ಅಲ್ಲಿಯೇ ಉಳಿದುಕೊಳ್ಳಲು ಅವರು ಮತ್ತೊಂದು ನೌಕರಿ ಗಿಟ್ಟಿಸಿಕೊಳ್ಳಬೇಕಿದೆ.

ಇಲ್ಲವಾದಲ್ಲಿ ಸಾವಿರಾರು ಟೆಕ್ಕಿಗಳು ಉದ್ಯೋಗ ವೀಸಾ ಕಳೆದುಕೊಳ್ಳಲ್ಲಿದ್ದಾರೆ. ಇದು ಟೆಕ್ಕಿಗಳನ್ನು ಸಂಕಷ್ಟಕ್ಕೆ ದೂಡಿದ್ದು, ಹೊಸ ಉದ್ಯೋಗ ಪಡೆಯುವುದು ಸವಾಲಾಗಿದೆ. ಕಳೆದ ವರ್ಷ ನವೆಂಬರ್‌ನಿಂದ ಸುಮಾರು 2 ಲಕ್ಷ ಐಟಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಇದರಲ್ಲಿ ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅಮೆಜಾನ್‌ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಕೈಬಿಟ್ಟಿವೆ. ಇದರಲ್ಲಿ 30 ರಿಂದ 40 ಪ್ರತಿಶತದಷ್ಟು ಭಾರತೀಯ ಟೆಕ್ಕಿಗಳು ಇರುವುದು ಗಮನಾರ್ಹ..

ಓದಿ:ಅಮೆರಿಕದಲ್ಲಿರುವ ಶೇ 40 ರಷ್ಟು ಭಾರತೀಯರ ಉದ್ಯೋಗ ನಷ್ಟ: ವರ್ಕಿಂಗ್ ವೀಸಾ ಉಳಿಸಿಕೊಳ್ಳಲು ಪರದಾಟ

ABOUT THE AUTHOR

...view details