ಹೈದರಾಬಾದ್(ತೆಲಂಗಾಣ): ಭಾರತದ ಸ್ಕೈರೂಟ್ ಏರೋಸ್ಪೇಸ್ ಕಂಪನಿಯು ಇತ್ತೀಚಿಗೆ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಉಡಾವಣೆ ಮಾಡಿದೆ, ಹಾಗೆಯೇ ಮುಂದಿನ ವರ್ಷದಲ್ಲಿ ಉಪಗ್ರಹಗಳನ್ನು ಹೊತ್ತುಕೊಂಡು ಹೋಗುವ ದೊಡ್ಡ ರಾಕೆಟ್ ವಿಕ್ರಂ-1 ಉಡಾವಣೆ ಮಾಡಲು ಯೋಚಿಸಿದೆ. ಹೈದರಾಬಾದ್ ಮೂಲದ ಬಾಹ್ಯಕಾಶ ಆರಂಭಿಕ ಕಂಪನಿಯು ಭವಿಷ್ಯದಲ್ಲಿ ಬಾಹ್ಯಕಾಶ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.
"ಮೊದಲು ನಾವು ವಿಕ್ರಮ್-ಎಸ್ ರಾಕೆಟ್ ಉಡಾವಣೆ ಮಾದಿದ್ದೇವೆ, ನಮ್ಮ ಮುಂದಿನ ಯೋಜನೆ ಉಪಗ್ರಹವನ್ನು ಕಕ್ಷೆಗೆ ಸಾಗಿಸುವ ದೊಡ್ಡ ರಾಕೆಟ್ ಆದ ವಿಕ್ರಮ್-1 ಈಗಿನಿಂದ ಒಂದು ವರ್ಷದೊಳಗೆ ಸಿದ್ದಪಡಿಸುವ ಯೋಜನೆ ಹೊಂದಿದ್ದೇವೆ" ಎಂದು ಸ್ಕೈರೂಟ್ ಏರೋಸ್ಪೇಸ್ ಸಹ-ಸಂಸ್ಥಾಪಕ ಪವನ್ ಚಂದನಾ ತಿಳಿಸಿದರು.
ಅತಿ ಹೆಚ್ಚು ಬಂಡವಾಳ ಸಂಗ್ರಹ: ಸ್ಕೈರೂಟ್ ಕಂಪನಿಯು ವಿಶ್ವದಲ್ಲೆ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಕೆಲವು ಕಂಪನಿಗಳಲ್ಲಿ ಒಂದಾಗಿದೆ. ಸಂಸ್ಥೆಯು ಸುಮಾರು 68ಮಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿದೆ. ಇದು ಭಾರತದ ಸ್ಟಾರ್ಟ್ಅಪ್ ಇತಿಹಾಸದಲ್ಲೇ ಅತಿ ಹೆಚ್ಚು ಬಂಡವಾಳ ಹೊಂದಿದ ಕಂಪನಿ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.