ಬಲಂಗೀರ್:ಒಡಿಶಾದ ಬಲಂಗೀರ್ ಪಟ್ಟಣದ ಏಳು ವರ್ಷದ ಬಾಲಕ ಮೈಕ್ರೋಸಾಫ್ಟ್ ಟೆಕ್ನಾಲಜಿ ಅಸೋಸಿಯೇಟ್ (ಎಂಟಿಎ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ.
ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವೆಂಕಟ್ ರಾಮನ್ ಪಟ್ನಾಯಕ್, ಮೈಕ್ರೋಸಾಫ್ಟ್ ಕಂಪನಿ ನಡೆಸಿದ ಎಂಟಿಎ ಪರೀಕ್ಷೆ ಪಾಸ್ ಮಾಡಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಈ ಬಾಲಕಿ ಐದು ವರ್ಷವಿದ್ದಾಗಿನಿಂದಲೇ ಕೋಡಿಂಗ್ ಮಾಡುವುದರಲ್ಲಿ ಆಸಕ್ತಿ ತೋರಿಸುತ್ತಾ ಬಂದಿದ್ದನು. 250 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ರಚಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾನೆ. ಈ ಸಾಧನೆಯನ್ನು ಅನೇಕ ಜಾಗತಿಕ ಸಂಸ್ಥೆಗಳು ಗುರುತಿಸಿವೆ.
ಇದನ್ನೂ ಓದಿ:ಎನ್‌ಡಿಆರ್‌ಎಫ್‌ಗೆ ವರ್ಷಾಂತ್ಯದಲ್ಲಿ ವಿಶ್ವಸಂಸ್ಥೆ ಮಾನ್ಯತೆ
ಐದು ಪ್ರೋಗ್ರಾಮಿಂಗ್ ಭಾಷೆಗಳ ವೆಂಕಟ್ ರಾಮನ್ ಪರಿಣತಿ ಹೊಂದಿದ್ದು, ಎಂಟಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಹಾಯವಾಗಿದೆ. 2020ರ ನವೆಂಬರ್ನಲ್ಲಿ ಎಂಟಿಎ ಪರೀಕ್ಷೆ ನಡೆದಿದ್ದು, ಇದಕ್ಕಾಗಿ ಪ್ರತಿನಿತ್ಯ 7 ಗಂಟೆಗಳನ್ನು ಈ ಪೋರ ತನ್ನ ಕಲಿಕೆಗಾಗಿ ಮೀಸಲಿಡುತ್ತಿದ್ದನು ಎಂದು ಪೋಷಕರು ಹೇಳುತ್ತಾರೆ.
ಕೋಡಿಂಗ್‌ನಲ್ಲಿ ತಮ್ಮ ಮಗನ ತೀವ್ರ ಆಸಕ್ತಿಯನ್ನು ಗಮನಿಸಿದ ಪೋಷಕರು ಬೆಂಗಳೂರು ಮೂಲದ ಕೋಡಿಂಗ್ ಶಾಲೆಯೊಂದನ್ನು ಸಂಪರ್ಕಿಸಿದ್ದರು. ಈತನದ್ದು ಇನ್ನೂ ಚಿಕ್ಕ ವಯಸ್ಸೆಂದು ಶಾಲಾ ಆಡಳಿತಾಧಿಕಾರಿಗಳು ಪ್ರವೇಶ ನೀಡಲು ಹಿಂದೆ ಸರಿದಿದ್ದರು. ಆದರೆ ಪ್ರವೇಶಾತಿ ಪರೀಕ್ಷೆಯಲ್ಲಿ ಈತನ ಫಲಿತಾಂಶ ನೋಡಿ ಅಧಿಕಾರಿಗಳೇ ಬೆರಗಾಗಿದ್ದರು.