ಸಿಯೋಲ್, ದಕ್ಷಿಣ ಕೊರಿಯಾ :ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಹೊಸ ಮೆಟ್ರೋ ರೈಲುಗಳನ್ನು ಮುಂದಿನ ತಿಂಗಳಿಂದ ಅಲ್ಲಿನ ಸರ್ಕಾರ ಪರಿಚಯಿಸಲಿದೆ. ಈ ರೈಲುಗಳ ಮೂಲಕ ಜನರ ಮೇಲಿನ ಕಾಳಜಿಯನ್ನು ಅಲ್ಲಿನ ಸರ್ಕಾರ ಪ್ರದರ್ಶಿಸಿದೆ.
ಹೊಸ ರೈಲುಗಳಲ್ಲಿ ಗರ್ಭಿಣಿಯರಿಗಾಗಿಯೇ ಹೊಸ ವಿನ್ಯಾಸದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮೊಬೈಲ್ ಚಾರ್ಜಿಂಗ್ಗೆ ಪೋರ್ಟ್‌ಗಳನ್ನು ಕೂಡ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ 5 ಮೆಟ್ರೋ ರೈಲುಗಳನ್ನು ಪರಿಚಯಿಸಲಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ 20ಕ್ಕೂ ಹೆಚ್ಚು ರೈಲುಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿದೆ.