ನವದೆಹಲಿ: ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡು ಇಡೀ ಜಗತ್ತನ್ನು ಎರಡು ವರ್ಷಗಳ ಕಾಲ ಕೋವಿಡ್ ವೈರಸ್ ತಲ್ಲಣಗೊಳಿಸಿತ್ತು. ಇಂದಿಗೂ ಕೊರೊನಾ ರೂಪಾಂತರಿ ಮೂಲಕ ಕಾಡುತ್ತಿರುವ ಬೆನ್ನಲ್ಲೇ ವುಹಾನ್ ವಿಜ್ಞಾನಿಗಳು ಇಂತಹದ್ದೇ ಮತ್ತೊಂದು ವೈರಸ್ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
NeoCov ವೈರಸ್ ಜೀವಕ್ಕೆ ಮಾರಕ!:ಕೋವಿಡ್-19 ಬಳಿಕ ಇಂತಹದ್ದೇ ಮತ್ತೊಂದು ವೈರಸ್ 'ನಿಯೋಕೋವ್' ಬಗ್ಗೆ ಎಚ್ಚರಿಕೆ ವಹಿಸುವಂತೆ ವುಹಾನ್ನ ವಿಜ್ಞಾನಿಗಳು ತಿಳಿಸಿದ್ದು, ಈ ವೈರಸ್ ಹಿಂದಿನ ಎಲ್ಲಾ ವೈರಸ್ಗಳಿಗಿಂತ ಹೆಚ್ಚಿನ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
'ನಿಯೋಕೋವ್' ಹೆಚ್ಚಿನ ಪ್ರಸರಣ ಹಾಗೂ ಮರಣ ಪ್ರಮಾಣವನ್ನು ಹೊಂದಿದೆ. ಇದುವರೆಗೆ ಅಭಿವೃದ್ಧಿಪಡಿಸಿದ ಯಾವುದೇ ಲಸಿಕೆಗಳಿಂದ ಈ ಸೋಂಕಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮೂವರು ಸೋಂಕಿತರಲ್ಲಿ ಒಬ್ಬರನ್ನು (1/3) ಬಲಿ ಪಡೆಯಲಿದೆ. ಅಷ್ಟೊಂದು ಅಪಾಯಕಾರಿ ವೈರಸ್ ಇದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.