ಕೇಂಬ್ರಿಡ್ಜ್( ಲಂಡನ್): ಜಗತ್ತನ್ನು ಇಂದು ಆಳುತ್ತಿರುವ ಕೃತ್ತಕ ಬುದ್ದಿಮತ್ತೆ ಭವಿಷ್ಯದಲ್ಲಿ ತಂದೊಡ್ಡಬಹುದಾದ ಅಪಾಯಗಳ ಕುರಿತು ಎಐ ಗಾಡ್ಫಾದರ್ ಜೆಫ್ರಿ ಹಿಂಟನ್ ಈಗಾಗಲೇ ಎಚ್ಚರಿಸಿದ್ದಾರೆ. ಎಐ ಕ್ಷೇತ್ರದಲ್ಲಿನ ಅಪಾಯ ಅರಿತ ಅವರು ಗೂಗಲ್ ತೊರೆದ ಬಳಿಕ ಮೆಸಚ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಇದರ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಮನುಕುಲದ ವಿನಾಶಕ್ಕೆ ದಾರಿ: ಸ್ಮಾರ್ಟ್ ವಿಷಯಗಳು ಔಟ್ಸ್ಮಾರ್ಟ್ ಆದಾಗ ಅದು ಮನುಕುಲದ ಉಳಿಯುವಿಕೆಗೆ ಬೆದರಿಕೆ ಒಡ್ಡಬಹುದು ಎಂದಿದ್ದಾರೆ. ಈ ಎಐಗಳು ವಿದ್ಯುತ್ ಕೇಂದ್ರಗಳನ್ನು ಚಾಲನೆಯಲ್ಲಿಡಲು ನಮ್ಮನ್ನು ಕೆಲ ಕಾಲ ಬದುಕಿಸಬಹುದು. ಆದರೆ, ನಂತರ ಇದಕ್ಕೆ ನಮ್ಮ ಅವಶ್ಯಕತೆ ಇಲ್ಲದಂತೆ ಆಗಬಹುದು ಎನ್ನುವ ಮೂಲಕ ಇವು ಮಾನವ ಕುಲಕ್ಕೆ ಯಾವ ಮಟ್ಟಿನ ಅಪಾಯ ತಂದೊಡ್ಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ತಮ್ಮ ಇಡೀ ಜೀವನವನ್ನು ಕಂಪ್ಯೂಟರ್ ಸಿಸ್ಟಂಗಳ ಸಾಮರ್ಥ್ಯಗಳ ಅಭಿವೃದ್ಧಿಗೆ ಕಳೆದ ಹಿಂಟನ್, ಇದೀಗ ಎಐ ಅಪಾಯ ಅರಿತು ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದು, ಇದರ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಈ ಎಐಗಳು ಎಲ್ಲವುಗಳನ್ನು ನಮ್ಮಿಂದ ಕಲಿತಿವೆ. ಮಾಕ್ಸಿಯಾವೆಲ್ಲಿಯ ಕಾದಂಬರಿಯಲ್ಲಿ ಬರೆದ ಎಲ್ಲಾ ವಿಷಯಗಳನ್ನು ಕಲಿತಿದ್ದು, ಜನರನ್ನು ತಿರುಚುವುದನ್ನು ಅವು ತಿಳಿದಿದೆ. ಅದರ ಸನ್ಹೆಗಳನ್ನು ನಮ್ಮನ್ನು ನೇರವಾಗಿ ಎಳೆಯಲು ಸಾಧ್ಯವಾಗದಿದ್ದರೂ, ಅದು ನಿಶ್ಚಿತವಾಗಿ ನಮ್ಮ ಎಳೆಯುತ್ತದೆ. ಈ ಎಐ ಅನ್ನು ತಡೆಯಬಹುದಾದ ಪರಿಹಾರ ನನ್ನ ಬಳಿ ಹೊಂದಿದ್ದೇನೆ. ಅದನ್ನು ತಡೆಯಬೇಕು ಎಂದು ಬಯಸುತ್ತೇನೆ. ಆದರೆ, ಇದಕ್ಕೆ ಖಚಿತ ಪರಿಹಾರ ಇಲ್ಲ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ