ಕರ್ನಾಟಕ

karnataka

ETV Bharat / science-and-technology

ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ? ಪತ್ತೆ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆವಿಷ್ಕರಿಸಿದ ವಿಜ್ಞಾನಿಗಳು - ಆಧುನಿಕ ಮತ್ತು ಪ್ರಾಚೀನ ಜೈವಿಕ ಮಾದರಿಗಳನ್ನು

ಇತರ ಗ್ರಹಗಳ ಮೇಲಿರಬಹುದಾದ ಜೀವ ಸಂಕುಲದ ಚಿಹ್ನೆಗಳನ್ನು ನಿಖರವಾಗಿ ಕಂಡು ಹಿಡಿಯಬಹುದಾದ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

AI may help find life on Mars, other planets with 90% accuracy
AI may help find life on Mars, other planets with 90% accuracy

By ETV Bharat Karnataka Team

Published : Sep 27, 2023, 12:45 PM IST

ನ್ಯೂಯಾರ್ಕ್ (ಅಮೆರಿಕ) : ಮಂಗಳ ಮತ್ತು ಇತರ ಗ್ರಹಗಳಲ್ಲಿ ಹಿಂದೆ ಇದ್ದ ಅಥವಾ ಈಗ ಇರಬಹುದಾದ ಜೀವಿಗಳ ಕುರುಹುಗಳನ್ನು ಪತ್ತೆ ಹಚ್ಚಲು ನೆರವಾಗುವಂಥ ಕೃತಕ ಬುದ್ಧಿಮತ್ತೆ ಆಧಾರಿತ ವಿಧಾನವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. 'ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' (ಪಿಎನ್ಎಎಸ್) ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ, "ನಾವು ತಯಾರಿಸಿರುವ ಕೃತಕ ಬುದ್ಧಿಮತ್ತೆ (ಎಐ) ಆಧರಿತ ವಿಧಾನವು ಆಧುನಿಕ ಮತ್ತು ಪ್ರಾಚೀನ ಜೈವಿಕ ಮಾದರಿಗಳನ್ನು ಅಜೈವಿಕ ಮೂಲದಿಂದ ಶೇಕಡಾ 90 ರಷ್ಟು ನಿಖರತೆಯೊಂದಿಗೆ ಪ್ರತ್ಯೇಕಿಸುವ ಸಾಮರ್ಥ್ಯ ಹೊಂದಿದೆ." ಎಂದು ಸಂಶೋಧಕರ ತಂಡ ಹೇಳಿದೆ.

"ಭೂಮಿಯಿಂದ ಆಚೆ ಅನ್ಯಗ್ರಹಗಳಲ್ಲಿರಬಹುದಾದ ಜೀವಿಗಳ ಹುಡುಕಾಟವು ಆಧುನಿಕ ವಿಜ್ಞಾನದ ಅತ್ಯಂತ ಅದ್ಭುತ ಪ್ರಯತ್ನಗಳಲ್ಲಿ ಒಂದಾಗಿದೆ" ಎಂದು ವಾಷಿಂಗ್ಟನ್ ಡಿಸಿಯ ಕಾರ್ನೆಗೀ ಇನ್​ಸ್ಟಿಟ್ಯೂಟ್​ ಫಾರ್ ಸೈನ್ಸ್​ನ ಅರ್ಥ್ ಅಂಡ್ ಪ್ಲಾನೆಟ್ಸ್ ಲ್ಯಾಬೊರೇಟರಿಯ ಪ್ರಮುಖ ಲೇಖಕ ಜಿಮ್ ಕ್ಲೀವ್ಸ್ ಹೇಳಿದರು.

"ಈ ಹೊಸ ಸಂಶೋಧನೆಯು ಹಲವಾರು ಫಲಿತಾಂಶಗಳನ್ನು ನೀಡಿದೆ. ಅದರಲ್ಲಿ ಪ್ರಮುಖ ಮೂರು ಫಲಿತಾಂಶಗಳೆಂದರೆ- ಮೊದಲನೆಯದಾಗಿ, ಆಳವಾದ ಮಟ್ಟದಲ್ಲಿ ಜೀವರಸಾಯನಶಾಸ್ತ್ರವು ಅಜೈವಿಕ ಸಾವಯವ ರಸಾಯನಶಾಸ್ತ್ರದಿಂದ ಭಿನ್ನವಾಗಿದೆ; ಎರಡನೆಯದಾಗಿ, ನಾವು ಮಂಗಳ ಮತ್ತು ಪ್ರಾಚೀನ ಭೂಮಿಯ ಮಾದರಿಗಳನ್ನು ಪರೀಕ್ಷಿಸಿ ಇವುಗಳಲ್ಲಿ ಯಾವತ್ತಾದರೂ ಜೀವಸಂಕುಲ ಇತ್ತಾ ಎಂಬುದನ್ನು ನಿರ್ಧರಿಸಬಹುದು; ಮತ್ತು ಮೂರನೆಯದಾಗಿ, ಈ ಹೊಸ ವಿಧಾನವು ಪರ್ಯಾಯ ಜೀವಗೋಳಗಳನ್ನು ಭೂಮಿಯಿಂದ ಪ್ರತ್ಯೇಕಿಸುವ ಸಾಮರ್ಥ್ಯ ಹೊಂದಿದೆ. ಇದು ಭವಿಷ್ಯದ ಖಗೋಳ ಜೀವಶಾಸ್ತ್ರ ಕಾರ್ಯಾಚರಣೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ" ಎಂದು ಕ್ಲೀವ್ಸ್ ಹೇಳಿದರು.

ನವೀನ ವಿಶ್ಲೇಷಣಾತ್ಮಕ ವಿಧಾನವು ಕೇವಲ ಒಂದು ಮಾದರಿಯಲ್ಲಿರುವ ನಿರ್ದಿಷ್ಟ ಅಣು ಅಥವಾ ಸಂಯುಕ್ತಗಳ ಗುಂಪನ್ನು ಗುರುತಿಸುವುದರ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪೈರೋಲಿಸಿಸ್ ಗ್ಯಾಸ್ ಕ್ರೊಮ್ಯಾಟೋಗ್ರಫಿ ವಿಶ್ಲೇಷಣೆಯಿಂದ (ಇದು ಮಾದರಿಯ ಘಟಕ ಭಾಗಗಳನ್ನು ಬೇರ್ಪಡಿಸುತ್ತದೆ ಮತ್ತು ಗುರುತಿಸುತ್ತದೆ) ಮಾಸ್ ಸ್ಪೆಕ್ಟ್ರೋಮೆಟ್ರಿ (ಇದು ಆ ಘಟಕಗಳ ಆಣ್ವಿಕ ತೂಕವನ್ನು ನಿರ್ಧರಿಸುತ್ತದೆ) ಮೂಲಕ ಬಹಿರಂಗಪಡಿಸಿದಂತೆ ಮಾದರಿಗಳ ಆಣ್ವಿಕ ಮಾದರಿಗಳೊಳಗಿನ ಸೂಕ್ಷ್ಮ ವ್ಯತ್ಯಾಸಗಳನ್ನು ಕಂಡುಹಿಡಿಯುವ ಮೂಲಕ ಜೈವಿಕವನ್ನು ಅಜೈವಿಕ ಮಾದರಿಗಳಿಂದ ಪ್ರತ್ಯೇಕಿಸಬಹುದು ಎಂಬುದನ್ನು ಸಂಶೋಧಕರು ತೋರಿಸಿದ್ದಾರೆ.

ಈ ಸಂಶೋಧನೆಯಲ್ಲಿ ಬಳಸಲಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ನಮಗೆ ತಿಳಿದಿರುವ 134 ಅಜೈವಿಕ ಅಥವಾ ಜೈವಿಕ ಇಂಗಾಲ-ಸಮೃದ್ಧ ಮಾದರಿಗಳ ಆಣ್ವಿಕ ವಿಶ್ಲೇಷಣೆಯಿಂದ ವಿಶಾಲವಾದ ಬಹು ಆಯಾಮದ ಡೇಟಾ ಬಳಸಿಕೊಂಡು ಹೊಸ ಮಾದರಿಯ ಮೂಲವನ್ನು ಗ್ರಹಿಸಲು ತರಬೇತಿ ನೀಡಲಾಗಿದೆ.

ಸರಿಸುಮಾರು 90 ಪ್ರತಿಶತ ನಿಖರತೆಯೊಂದಿಗೆ, ಎಐ ಈ ಕೆಳಗಿನವುಗಳಿಂದ ಪಡೆದ ಮಾದರಿಗಳನ್ನು ಯಶಸ್ವಿಯಾಗಿ ಗುರುತಿಸಿದೆ: ಆಧುನಿಕ ಚಿಪ್ಪುಗಳು, ಹಲ್ಲುಗಳು, ಮೂಳೆಗಳು, ಕೀಟಗಳು, ಎಲೆಗಳು, ಅಕ್ಕಿ, ಮಾನವ ಕೂದಲು ಮತ್ತು ಸೂಕ್ಷ್ಮ- ಬಂಡೆಯಲ್ಲಿ ಸಂರಕ್ಷಿಸಲಾದ ಜೀವಕೋಶಗಳು; ಭೂವೈಜ್ಞಾನಿಕ ಸಂಸ್ಕರಣೆಯಿಂದ (ಉದಾ. ಕಲ್ಲಿದ್ದಲು, ತೈಲ, ಅಂಬರ್ ಮತ್ತು ಇಂಗಾಲ-ಸಮೃದ್ಧ ಪಳೆಯುಳಿಕೆಗಳು) ಅಥವಾ ಶುದ್ಧ ಪ್ರಯೋಗಾಲಯ ರಾಸಾಯನಿಕಗಳು (ಉದಾ. ಅಮೈನೋ ಆಮ್ಲಗಳು) ಮತ್ತು ಇಂಗಾಲ-ಸಮೃದ್ಧ ಉಲ್ಕಾಶಿಲೆಗಳಂತಹ ಅಜೈವಿಕ ಮೂಲದ ಮಾದರಿಗಳಿಂದ ಬದಲಾದ ಪ್ರಾಚೀನ ಜೀವನದ ಅವಶೇಷಗಳು.

ಗಮನಾರ್ಹ ಅವನತಿ ಮತ್ತು ಬದಲಾವಣೆಯ ಹೊರತಾಗಿಯೂ, ಹೊಸ ವಿಶ್ಲೇಷಣಾತ್ಮಕ ವಿಧಾನವು ನೂರಾರು ಮಿಲಿಯನ್ ವರ್ಷಗಳಿಂದ ಕೆಲ ಸಂದರ್ಭಗಳಲ್ಲಿ ಸಂರಕ್ಷಿಸಲಾದ ಜೀವಶಾಸ್ತ್ರದ ಚಿಹ್ನೆಗಳನ್ನು ಕಂಡುಹಿಡಿದಿರುವುದು ಆಶ್ಚರ್ಯಕರವಾಗಿದೆ.

"ಭೂಮಿಯ ಮೇಲಿನ ನಮಗೆ ತಿಳಿದಿರುವ ಜೀವಿಗಳಿಗಿಂತ ತುಂಬಾ ಭಿನ್ನವಾಗಿದ್ದರೂ ಸಹ ನಾವು ಮತ್ತೊಂದು ಗ್ರಹದಲ್ಲಿ ಅಥವಾ ಜೀವಗೋಳದಲ್ಲಿ ಇರಬಹುದಾದ ಜೀವಿಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂಬುದನ್ನು ಈ ಸಂಶೋಧನೆಗಳು ತೋರಿಸಿವೆ. ನಮಗೆ ಬೇರೆ ಗ್ರಹದಲ್ಲಿ ಜೀವಿಗಳು ಕಂಡು ಬಂದಿದ್ದೇ ಆದಲ್ಲಿ ಭೂಮಿ ಮತ್ತು ಆ ಇತರ ಗ್ರಹಗಳ ಮೇಲಿನ ಜೀವಸಂಕುಲವು ಒಂದೇ ಮೂಲದಿಂದ ಬಂದಿದ್ದಾ ಅಥವಾ ಅವು ವಿಭಿನ್ನವಾ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ." ಎಂದು ಪ್ರಯೋಗಾಲಯದ ವಿಜ್ಞಾನಿ ಡಾ. ರಾಬರ್ಟ್​​ ಹೆಜೆನ್ ಹೇಳಿದರು.

ಇದನ್ನೂ ಓದಿ :ಮನುಷ್ಯರಂತೆ ಕೆಲಸ ಮಾಡುವ 'ಆಪ್ಟಿಮಸ್​'; ಇದು ಟೆಸ್ಲಾದ ಹ್ಯೂಮನಾಯ್ಡ್ ರೋಬೋಟ್

ABOUT THE AUTHOR

...view details