ಮಾಸ್ಕೋ (ರಷ್ಯಾ):ಸುಮಾರು ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದ ಮೂವರು ಗಗನಯಾತ್ರಿಗಳು ಗುರುವಾರ ಬೆಳಗ್ಗೆ ಭೂಮಿಗೆ ಯಶಸ್ವಿಯಾಗಿ ಹಿಂದಿರುಗಿದ್ದಾರೆ.
ನಾಸಾದ ಗಗನಯಾತ್ರಿಗಳಾದ ಕ್ರಿಸ್ ಕ್ಯಾಸ್ಸಿಡಿ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ನ ಅನಾಟೊಲಿ ಇವಾನಿಶಿನ್, ಇವಾನ್ ವ್ಯಾಗ್ನರ್ ಯಶಸ್ವಿಯಾಗಿ ಭೂಮಿಗೆ ಬಂದಿಳಿದರು. ಬೆಳಗ್ಗೆ 7.54ಕ್ಕೆ ಕಜಕಿಸ್ತಾನದ ಡೆಜ್ಕಜ್ಗಾನ್ಗೆ ತಲುಪಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಅವರ ನಿವಾಸಗಳಿಗೆ ಕಳುಹಿಸಲಾಗುತ್ತದೆ.