ಬೆಂಗಳೂರು: ಭಾರತದ ಪೋಲಾರ್ ಉಪಗ್ರಹ ಉಡಾವಣಾ ವಾಹನವು ತನ್ನ 51ನೇ ಕಾರ್ಯಾಚರಣೆಯಲ್ಲಿ (ಪಿಎಸ್‌ಎಲ್‌ವಿ-ಸಿ 49) ಇಒಎಸ್ -01ಅನ್ನು ಪ್ರಾಥಮಿಕ ಉಪಗ್ರಹವಾಗಿ ಉಡಾಯಿಸಲಿದ್ದು, ಜೊತೆಗೆ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಶಾರ್‌ನಿಂದ ಉಡಾವಣೆ ಮಾಡಲಿದೆ.
ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ನವೆಂಬರ್ 7ರ ಮಧ್ಯಾಹ್ನ 03:02ಕ್ಕೆ ಉಡಾವಣೆಯನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.