ನವದೆಹಲಿ: ತಾಂತ್ರಿಕ ಕಾರಣದಿಂದ ಭಾರತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಮತ್ತೆ ಕಾರ್ಯ ನಡೆಸುತ್ತಿದೆ.
ETV Bharat / science-and-technology
ಭಾರತದಲ್ಲಿ ಗಂಟೆಗೂ ಹೆಚ್ಚುಕಾಲ ಕೈಕೊಟ್ಟ ಯೂಟ್ಯೂಬ್: ಸಮಸ್ಯೆ ಸರಿಪಡಿಸಿರುವುದಾಗಿ ಸಂಸ್ಥೆಯ ಸ್ಪಷ್ಟನೆ - ಯೂಟ್ಯೂಬ್ ಲೇಟೆಸ್ಟ್ ನ್ಯೂಸ್
ಗೂಗಲ್ ಮಾಲೀಕತ್ವದ ಯೂಟ್ಯೂಬ್, ಭಾರತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಇದೀಗ ಸಮಸ್ಯೆಗಳನ್ನು ಸರಿಪಡಿಸಲಾಗಿದ್ದು, ಮತ್ತೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.
"ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುವುದರಲ್ಲಿ ತೊಂದರೆ ಹೊಂದಿದ್ದರೆ, ನೀವು ಒಬ್ಬಂಟಿಯಾಲ್ಲ, ನಮ್ಮ ತಂಡವು ಈ ವಿಷಯದ ಬಗ್ಗೆ ತಿಳಿದಿದ್ದು, ಪರಿಹಾರಕ್ಕಾಗಿ ಕೆಲಸ ಮಾಡುತ್ತಿದೆ" ಎಂದು ಯೂಟ್ಯೂಬ್ ಟ್ವೀಟ್ ಮಾಡಿತ್ತು.
ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಉಂಟಾಗಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯೂಟ್ಯೂಬ್, 'ನಾವು ಹಿಂದಿರುಗಿದ್ದೇವೆ ಅಡ್ಡಿಪಡಿಸಿದ್ದಕ್ಕಾಗಿ ವಿಷಾದಿಸುತ್ತೇವೆ. ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗಿದ್ದು, ನಮ್ಮೊಂದಿಗೆ ತಾಳ್ಮೆಯಿಂದಿರುವುದಕ್ಕೆ ಧನ್ಯವಾದಗಳು "ಎಂದು ಟ್ವೀಟ್ ಮಾಡಿದೆ.