ವಾಷಿಂಗ್ಟನ್ :ಗುರು ಮತ್ತು ಮಂಗಳ ಗ್ರಹಗಳ ಮಧ್ಯೆ ಇರುವ ಕ್ಷುದ್ರಗ್ರಹ ಸಿರಿಸ್ನಲ್ಲಿ ಈವರೆಗೆ ಈ ಕ್ಷುದ್ರಗ್ರಹದಲ್ಲಿ ಕಲ್ಲುಬಂಡೆಗಳಿವೆ ಎಂದು ನಂಬಲಾಗಿದ್ದು, ಅಪಾರ ಜಲಸಂಪತ್ತು ಇದೆ ಎಂದು ನಾಸಾದ ಡಾನ್ ಆಕಾಶನೌಕೆಯ ಸಂಶೋಧನೆಯಿಂದ ತಿಳಿದುಬಂದಿದೆ.
ಡಾನ್ ಆಕಾಶನೌಕೆ ಕಳುಹಿಸಿದ ಛಾಯಾಚಿತ್ರಗಳನ್ನು ವಿಜ್ಞಾನಿಗಳು ಪರಿಶೀಲನೆ ನಡೆಸಿದಾಗ ಕ್ಷುದ್ರಗ್ರಹದ 40 ಕಿಲೋಮೀಟರ್ ಆಳ ಹಾಗೂ ನೂರಾರು ಕಿಲೋಮೀಟರ್ ಅಗಲವಿರುವ ಉಪ್ಪು ನೀರಿನ ಜಲಮೂಲ ಇದ್ದಿರಬಹುದೆಂದು ಊಹಿಸಿದ್ದಾರೆ.
ನಾವು ಭಾವಿಸಿದ್ದಕ್ಕಿಂತ ಹೆಚ್ಚಿನ ಫಲಿತಾಂಶಗಳನ್ನು ಡಾನ್ ಆಕಾಶ ನೌಕೆ ನೀಡಿದೆ. ಭೂಮಿಯಿಂದ ಹೊರಗಡೆಯ ಸಂಶೋಧನೆಯ ವಿಚಾರದಲ್ಲಿ ಮಹತ್ತರವಾದುದನ್ನು ಡಾನ್ ಸಾಧಿಸಿದೆ. ಅಂತರಗ್ರಹ ಸಂಶೋಧನೆಯಲ್ಲಿ ಇದೊಂದು ಮೈಲುಗಲ್ಲು ಎಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮಿಷನ್ ಡೈರೆಕ್ಟರ್ ಮಾರ್ಕ್ ರೇಮನ್ ಹೇಳಿದ್ದಾರೆ.