ಬೀಜಿಂಗ್ (ಚೀನಾ):ಗಾಲ್ವಾನ್ ಸಂಘರ್ಷದ ನಂತರ ಭಾರತದೊಂದಿಗೆ ಸಂಬಂಧ ಕೆಡಿಸಿಕೊಂಡಿರುವ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸಾಧಿಸಿದೆ. ಉಪಗ್ರಹವೊಂದನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಆಗು-ಹೋಗುಗಳ ಮೇಲೆ ಕಣ್ಣಿಡಲು ಮುಂದಾಗಿದೆ.
ಅಂತರಿಕ್ಷದಿಂದ ಭೂಮಿಯ ಮೇಲಿನ ಛಾಯಾಚಿತ್ರಗಳನ್ನು ಸ್ಪಷ್ಟವಾಗಿ ಹಾಗೂ ಉತ್ತಮವಾಗಿ ತೆಗೆಯಬಲ್ಲ ಭೂ-ವೀಕ್ಷಣಾ ಉಪಗ್ರಹವನ್ನು ಚೀನಾ ನಭಕ್ಕೆ ಉಡಾಯಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸಿದೆ.
ಜಿಯೋಫೆನ್-14 ಎಂಬುದು ಚೀನಾ ಉಡಾವಣೆ ಮಾಡಿರುವ ಉಪಗ್ರಹವಾಗಿದ್ದು, ಲಾಂಗ್ ಮಾರ್ಚ್-3ಬಿ ಎಂಬ ರಾಕೆಟ್ನ ಸಹಾಯದಿಂದ ಉಪಗ್ರಹದ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್ ಕೇಳಿದ್ರೆ ತಲೆ ತಿರುಗುತ್ತೆ!
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್ ಉಡಾವಣಾ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ ಎಂದು ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಕ್ಸಿನುವಾ ನ್ಯೂಸ್ ಏಜೆನ್ಸಿ ಮಾಹಿತಿ ನೀಡಿದೆ.