ಕರ್ನಾಟಕ

karnataka

ETV Bharat / science-and-technology

ಚಂದ್ರಯಾನ -2 ಮಿಷನ್‌ನ ಡೇಟಾ ಬಿಡುಗಡೆ ಮಾಡಿದ ಇಸ್ರೋ - country's second mission to the Moon

ಭಾರತ ವಿಜ್ಞಾನ ಲೋಕದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ- 2ಗೆ ಸಂಬಂಧಿಸಿದ ದತ್ತಾಂಶವನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗಿದೆ.

Chandrayaan-2
ಚಂದ್ರಯಾನ -2 ಮಿಷನ್

By

Published : Dec 25, 2020, 3:09 PM IST

Updated : Feb 16, 2021, 7:31 PM IST

ಬೆಂಗಳೂರು: ಚಂದ್ರನಲ್ಲಿಗೆ ಭಾರತದ ಎರಡನೇ ಯೋಜನೆಯಾಗಿರುವ ಚಂದ್ರಯಾನ -2 ರ ಆರಂಭಿಕ ದತ್ತಾಂಶವನ್ನು ಸಾಮಾನ್ಯ ಜನರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -2 ಉಪಕರಣಗಳನ್ನು ಹೊತ್ತ ರಾಕೆಟ್​ ಅನ್ನು 2019ರ ಜುಲೈ 22 ರಂದು ಉಡಾವಣೆ ಮಾಡಲಾಗಿತ್ತು. 2019ರ ಸೆಪ್ಟೆಂಬರ್ 2 ರಂದು ಚಂದ್ರನ ಕಕ್ಷೆ ಸೇರಿದ ಆರ್ಬಿಟರ್, ಚಂದ್ರನ ಕುರಿತ ಅನೇಕ ಮುಕ್ತ ಪ್ರಶ್ನೆಗಳನ್ನು ಪರಿಹರಿಸಲು ಎಂಟು ರೀತಿಯ ಪ್ರಯೋಗಗಳನ್ನು ನಡೆಸುತ್ತಿದೆ. ಆರ್ಬಿಟರ್​​​​ನಲ್ಲಿ 7 ವರ್ಷಕ್ಕಾಗುವಷ್ಟು ಇಂಧನ ಕೂಡ ಇದೆ.

"ಎಲ್ಲಾ ಪ್ರಯೋಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಈಗ ಲಭ್ಯವಿರುವ ದತ್ತಾಂಶವು ಉಡಾವಣೆಯ ಪೂರ್ವದಲ್ಲಿದ್ದ ಭರವಸೆಗಳನ್ನು ಈಡೇರಿಸುವ ಅತ್ಯುತ್ತಮ ಸಾಮರ್ಥ್ಯವನ್ನು ಸೂಚಿಸುತ್ತದೆ" ಎಂದು ಇಸ್ರೋ ಹೇಳಿದೆ.

ಓದಿ:2020ರಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಹೇಗಿತ್ತು?: 2021ರ ಯೋಜನೆಗಳೇನು..?

ಬೆಂಗಳೂರಿನ ಬಳಿಯ ಬ್ಯಾಲಾಳುನಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರ (ISSDC)ದಲ್ಲಿ ಚಂದ್ರಯಾನ -2 ಮಿಷನ್‌ನ ಡೇಟಾ ಸಂಗ್ರಹಿಸಿಡಲಾಗಿದೆ. ಈ ಕೇಂದ್ರದ PRADAN ಪೋರ್ಟಲ್​ನಲ್ಲಿ ದತ್ತಾಂಶವನ್ನು ಸಾರ್ವಜನಿಕರಿಗಾಗಿ ಬಿಡುಗಡೆಮಾಡಲಾಗಿದೆ.

ಚಂದ್ರಯಾನ- 2, ಭಾರತ ವಿಜ್ಞಾನ ಲೋಕದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಯೋಜನೆ ಸಫಲಗೊಳಿಸಲು ಇಸ್ರೋ ವಿಜ್ಞಾನಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಭಾರತವು 'ಚಂದ್ರಯಾನ್ -3' ಪ್ರಾರಂಭಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

Last Updated : Feb 16, 2021, 7:31 PM IST

ABOUT THE AUTHOR

...view details