ಕರ್ನಾಟಕ

karnataka

ETV Bharat / science-and-technology

ನೋಕಿಯಾ ಪೇಟೆಂಟ್​ ಉಲ್ಲಂಘನೆ ಪ್ರಕರಣ; ಒಪ್ಪೊ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​​

ಚೀನಾದ ಸ್ಮಾರ್ಟ್ ​​ಫೋನ್​ ಬ್ರಾಂಡ್​ ಆಗಿರುವ ಒಪ್ಪೋ ನೋಕಿಯೋ ತಂತ್ರಜ್ಞಾನವನ್ನು ಅದರ ಪರವಾನಿಗೆ ಇಲ್ಲದೇ ಬಳಕೆ ಮಾಡುತ್ತಿತ್ತು

http://10.10.50.85:6060/reg-lowres/05-August-2023/oppo_0508newsroom_1691223671_467.jpeg
http://10.10.50.85:6060/reg-lowres/05-August-2023/oppo_0508newsroom_1691223671_467.jpeg

By

Published : Aug 5, 2023, 2:20 PM IST

ನವದೆಹಲಿ: ನೋಕಿಯೋ ಪೇಟೆಂಟ್​ ಉಲ್ಲಂಘನೆ ಪ್ರಕರಣದಲ್ಲಿ ಶೇ 23 ರಷ್ಟು ರಾಯಲ್ಟಿ ಠೇವಣಿ ಮಾಡಲು ನಿರ್ದೇಶಿಸಿ ದೆಹಲಿ ಹೈಕೋರ್ಟ್​ ಆದೇಶ ಪ್ರಶ್ನಿಸಿದ್ದ ಚೀನಾ ಸ್ಮಾರ್ಟ್​ ಫೋನ್​ ಒಪ್ಪೋ (oppo) ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಕಳೆದ ತಿಂಗಳು ಜುಲೈನಲ್ಲಿ ದೆಹಲಿ ಹೈ ಕೋರ್ಟ್​ನ ವಿಭಾಗೀಯ ಪೀಠ, ನೋಕಿಯಾ ಪರ ಆದೇಶ ನೀಡಿತ್ತು.

ಚೀನಾದ ಸ್ಮಾರ್ಟ್ ​​ಫೋನ್​ ಬ್ರಾಂಡ್​ ಆಗಿರುವ ಒಪ್ಪೋ ನೋಕಿಯೋ ತಂತ್ರಜ್ಞಾನವನ್ನು ಅದರ ಪರವಾನಗಿ ಇಲ್ಲದೇ ಬಳಕೆ ಮಾಡುತ್ತಿದೆ ಎಂಬುದು ಪತ್ತೆಯಾಗಿತ್ತು. ಭಾರತದಲ್ಲಿ ಒಪ್ಪೋ ಮಾರಾಟ ವಹಿವಾಟಿನ ಹಿನ್ನಲೆ ಜಾಗತಿಕ ಮಾರಾಟದಲ್ಲಿ ಶೇ 23ರಷ್ಟು ದಂಡವನ್ನು ವಿಧಿಸುವಂತೆ ದೆಹಲಿ ಹೈ ಕೋರ್ಟ್​ ನಿರ್ದೇಶನ ನೀಡಿತ್ತು.

ಸುಪ್ರೀಂ ಆದೇಶ ಸ್ವಾಗತಿಸಿದ ನೋಕಿಯಾ:ಇದೀಗ ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ಮಾತನಾಡಿರುವ ನೋಕಿಯಾ ತಂತ್ರಜ್ಞಾನದ ವಕ್ತಾರರು, ನಾವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಒಪ್ಪೊ ಕಳೆದೆರಡು ವರ್ಷಗಳಿಂದ ಯಾವುದೇ ರಾಯಲ್ಟಿಯನ್ನು ನೀಡದೇ ಮತ್ತು ನೋಕಿಯಾದ ಜೊತೆಗಿನ ಲೈಸೆನ್ಸ್​ ಅನ್ನು ಮರು ನವೀಕರಿಸದೇ ನಮ್ಮ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ವಿಷಯವನ್ನು ಸಂಸ್ಥೆ ಸೌಹರ್ದಯುತವಾಗಿ ಪರಿಹರಿಸುತ್ತಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಒಪ್ಪೊ ಈ ರೀತಿ ಅಕ್ರಮವಾಗಿ ನೋಕಿಯಾ ಪೆಟೆಂಟ್​ ಉಲ್ಲಂಘನೆ ಮಾಡುತ್ತಿದ್ದು, ಈ ಸಂಬಂಧ ಭಾರತ, ಜರ್ಮನಿ, ಅಮೆರಿಕ, ನೆದರಲ್ಯಾಂಡ್​ ಮತ್ತು ಬ್ರೆಸಿಲ್​ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದ್ದು, ಈ ಎಲ್ಲಾ ನ್ಯಾಯಾಲಯದಲ್ಲಿ ನೋಕಿಯಾ ಪರವಾಗಿ ತೀರ್ಪು ಬಂದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೋಕಿಯಾ, ಒಪ್ಪೋಗೆ ನಿಯಮ ಬದ್ಧವಾಗಿರುವಂತೆ ನಾವು ಉತ್ತೇಜಿಸುತ್ತೇವೆ. ನಮ್ಮ ಪ್ರತಿಸ್ಪರ್ಧಿಯಾಗಿ ಕಾರ್ಯ ನಿರ್ವಹಿಸುವ ಬದಲಿ ನ್ಯಾಯಯತ ನಿಯಮದ ಮೇಲೆ ಪರವಾನಗಿಯನ್ನು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದೆ.

ಮೂರು ವರ್ಷದಿಂದ ನಿಯಮ ಉಲ್ಲಂಘನೆ: 2018ರಿಂದ ಒಪ್ಪೊ- ನೋಕಿಯಾ ಲೈಸೆನ್ಸ್ ಮುಕ್ತಾಯವಾಗಿದೆ. ಆದರೂ, ಅದು ಮೂರು ವರ್ಷಗಳ ಕಾಲ ಫಿನಿಷ್​ ಟೆಲಿಕಾಂ ಗೇರ್​ ಕಂಪನಿ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ವರದಿ ಪ್ರಕಾರ ನೋಕಿಯಾ ಒಪ್ಪಂದ ಅವಧಿ ಮುಗಿದ ಬಳಿಕ ಒಪ್ಪೋ ಒಂದು ನಯಾ ಪೈಸೆ ರಾಯಲ್ಟಿಯನ್ನು ನೀಡದೇ ಭಾರತದಲ್ಲಿ 77 ಮಿಲಿಯನ್​ ಹ್ಯಾಂಡ್​ಸೆಟ್​ ಮಾರಾಟ ಮಾಡಿದೆ.

ಕಳೆದ ಜುಲೈ 2022ರಲ್ಲಿ ಜರ್ಮನ್​ ನ್ಯಾಯಾಲಯ ಕೂಡ 4ಜಿ/5ಜಿ ಪೆಟೆಂಟ್​​ ಕುರಿತು ನೋಕಿಯಾ ಒಪ್ಪೊ ಜೊತೆಗಿನ ವ್ಯಾಜ್ಯದಲ್ಲಿ ನೋಕಿಯಾ ಪರವಾಗಿ ತೀರ್ಪು ನೀಡಿತ್ತು. ಜಿಸ್ಮೊಚೀನಾ ಪ್ರಕಾರ, ಈ ಮೊಕದ್ದಮೆಯಲ್ಲಿ ಒಪ್ಪೋ 9 ಸ್ಟಾಂಡರ್ಡ್​​ ಎಸೆನ್ಷಿಯಲ್​ ಪೆಟೆಂಟ್ (ಎಸ್​ಇಪಿ)​ ಮತ್ತು ಐದು ಅಳವಡಿಸಬಹುದಾದ ಪೇಟೆಂಟ್​ ನಿಯಮವನ್ನು ಉಲ್ಲಂಘಿಸಿತು. ಭಾರತದಲ್ಲೂ ಕೂಡ ಟೆಲಿಕಾಂ ಮಾನದಂಡಗಳಾ ಸ್ಟಾಂಡರ್ಡ್​​ ಎಸೆನ್ಷಿಯಲ್​​ ಪೆಟೆಂಟ್ (ಎಸ್​ಇಪಿ) ಸೇರಿದಂತೆ​ ಮೂರು ಲೈಸೆನ್ಸ್​ ಅನ್ನು ಆಧಾರಿಸಿ, ನೋಕಿಯಾ ಒಪ್ಪೊ ಮೇಲೆ ಪ್ರಕರಣ ಹೂಡಿತ್ತು.

ಇದನ್ನೂ ಓದಿ: ಕೈಗೆಟುಕುವ ದರದ Lava 'Yuva-2' ಬಿಡುಗಡೆ; ಬೆಲೆ 6,999ರಿಂದ ಆರಂಭ

ABOUT THE AUTHOR

...view details