ನವದೆಹಲಿ:ಮುಂದಿನ ತಿಂಗಳ ಅಂತ್ಯದ ವೇಳೆಗೆ ದೇಶದಲ್ಲಿ 5G ಸ್ಮಾರ್ಟ್ಪೋನ್ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಆಗಲಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾ ಬುಧವಾರ ಹೇಳಿದೆ. ಗ್ರಾಹಕರಿಗೆ 5G ಅನುಭವದ ತಡೆರಹಿತ ರೋಲ್ - ಔಟ್‌ಗಾಗಿ ಪ್ರಸ್ತುತ ಆಪರೇಟರ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಕಂಪನಿಯು ತಿಳಿಸಿದೆ.
ನಾವು ನಮ್ಮ ಆಪರೇಟರ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ನವೆಂಬರ್ 2022 ರ ಅಂತ್ಯದ ವೇಳೆಗೆ ನಮ್ಮ ಎಲ್ಲ 5G ಸಾಧನಗಳಲ್ಲಿ OTA ನವೀಕರಣಗಳನ್ನು ಹೊರತರಲು ಬದ್ಧರಾಗಿದ್ದೇವೆ. ಇದು ಭಾರತೀಯ ಗ್ರಾಹಕರು 5G ಅನ್ನು ಯಾವುದೇ ತೊಂದರೆ ಇಲ್ಲದೇ ಅನುಭವಿಸಲು ಅನುವು ಮಾಡಿಕೊಡುತ್ತದೆ ಎಂದು ಸ್ಯಾಮ್‌ಸಂಗ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
2009 ರಿಂದ ಸ್ಯಾಮ್‌ಸಂಗ್ 5G ತಂತ್ರಜ್ಞಾನ ಅಭಿವೃದ್ಧಿಯ ಪ್ರವರ್ತಕವಾಗಿದೆ ಮತ್ತು ಜಾಗತಿಕವಾಗಿ ಈ ತಂತ್ರಜ್ಞಾನವನ್ನು ಪ್ರಮಾಣೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಭಾರತದಲ್ಲಿ ಸ್ಯಾಮ್‌ಸಂಗ್ 5G ವಿಶಾಲವಾದ ಪೋರ್ಟ್ಫೋಲಿಯೊವನ್ನು ಹೊಂದಿದೆ. ಸರ್ಕಾರ ಬುಧವಾರ ಹ್ಯಾಂಡ್‌ಸೆಟ್ ತಯಾರಕರು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಸಭೆಯನ್ನು ಕರೆದಿರುವಾಗ ಈ ಪ್ರಕಟಣೆ ಹೊರಬಿದ್ದಿದೆ.