ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ):ಸ್ಯಾಮ್‌ಸಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ತನ್ನ ಹೊಸ 83 ಇಂಚಿನ OLED ಟಿವಿಯನ್ನು ಬಿಡುಗಡೆ ಮಾಡಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಹೊಸ ಟಿವಿಯು ಎಲ್‌ಜಿ ಡಿಸ್‌ಪ್ಲೇಯ ಡಬ್ಲ್ಯುಆರ್‌ಜಿಬಿ ಒಎಲ್‌ಇಡಿ ಪ್ಯಾನೆಲ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಮುಂಬರುವ ಹೊಸ ಟಿವಿ (KQ83SC90A) ಗಾಗಿ ಕಂಪನಿಯು ರಾಷ್ಟ್ರೀಯ ರೇಡಿಯೊ ಸಂಶೋಧನಾ ಸಂಸ್ಥೆಯಲ್ಲಿ ಕಂಪ್ಯಾಟಿಬಿಲಿಟಿ ನೋಂದಣಿಯನ್ನು ಪೂರ್ಣಗೊಳಿಸಿದೆ.
ಟಿವಿಯಂಥ ಪ್ರಸಾರ ಮತ್ತು ಸಂವಹನ ಸಾಧನಗಳನ್ನು ತಯಾರಿಸಲು, ಮಾರಾಟ ಮಾಡಲು ಮತ್ತು ಆಮದು ಮಾಡಿಕೊಳ್ಳಲು ಕಂಪ್ಯಾಟಿಬಿಲಿಟಿ ನೋಂದಣಿ ಅಗತ್ಯವಾಗಿರುತ್ತದೆ.ಈ ಪ್ರಕ್ರಿಯೆ ಮುಗಿದ ಮೂರು ತಿಂಗಳ ನಂತರ ಉತ್ಪನ್ನವು ಸಾಮಾನ್ಯವಾಗಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡುತ್ತದೆ. ಎಲ್ ಡಿಸ್ಪ್ಲೇ ಕಂಪನಿ ಮಾತ್ರ ಪ್ರಸ್ತುತ 83 ಇಂಚಿನ OLED ಪ್ಯಾನೆಲ್ಗಳನ್ನು ತಯಾರಿಸುತ್ತದೆ. ಎಲ್‌ಜಿ ಮತ್ತು ಸೋನಿ ಟಿವಿಗಳಲ್ಲಿ ಇವನ್ನು ಬಳಸಲಾಗುತ್ತದೆ. ಹಾಗಾಗಿ, ಸ್ಯಾಮ್‌ಸಂಗ್ 83 ಇಂಚಿನ OLED ಟಿವಿ ಮಾರುಕಟ್ಟೆಯಲ್ಲಿನ ಮೂರನೇ ಬ್ರಾಂಡ್ ಆಗಲಿದೆ ಎಂದು ವರದಿ ಹೇಳಿದೆ.
ಏತನ್ಮಧ್ಯೆ, ಈ ತಿಂಗಳ ಆರಂಭದಲ್ಲಿ ದಕ್ಷಿಣ ಕೊರಿಯಾದ ಸಂಸ್ಥೆಯು ತನ್ನ ಹೊಸ OLED ಟಿವಿ ಶ್ರೇಣಿಯನ್ನು ಭಾರತದಲ್ಲಿ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 4K ಯೊಂದಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಹೊಸ ಟಿವಿಗಳು ಸ್ಮಾರ್ಟ್ 'ಐ ಕಂಫರ್ಟ್ ಮೋಡ್' ಅನ್ನು ಹೊಂದಿರಲಿವೆ. ಇದು ಸುತ್ತಮುತ್ತಲಿನ ಬೆಳಕಿಗೆ ಅನುಗುಣವಾಗಿ ಹೊಳಪಿನ ಮಟ್ಟವನ್ನು ಸರಿಹೊಂದಿಸುತ್ತದೆ ಮತ್ತು 144Hz ರಿಫ್ರೆಶ್ ದರವನ್ನು ಸಹ ಹೊಂದಿದೆ. ಇದಲ್ಲದೆ, ಹೊಸ ಶ್ರೇಣಿಯು ವೈರ್‌ಲೆಸ್ ಡಾಲ್ಬಿ ಅಟ್ಮಾಸ್ ಮತ್ತು OTS+ ಅನ್ನು ಪರದೆಯ ಮೇಲಿನ ಧ್ವನಿಯನ್ನು ಸಕ್ರಿಯಗೊಳಿಸುತ್ತದೆ.