ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ಝಡ್ ಫೋಲ್ಡ್ 5 (Galaxy Z Fold 5), ಫ್ಲಿಪ್ 5 (Flip 5) ಮತ್ತು ಟ್ಯಾಬ್ ಎಸ್9 (Tab S9) ಸಾಧನಗಳನ್ನು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತನ್ನ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಬಹಿರಂಗಪಡಿಸಲಿದೆ ಎಂದು ವರದಿಯಾಗಿದೆ. ಕಂಪನಿಯು ಜುಲೈ 26 ರಂದು ಅನ್‌ಪ್ಯಾಕ್ಡ್ ಈವೆಂಟ್ ಅನ್ನು ನಡೆಸುವ ನಿರೀಕ್ಷೆಯಿದೆ ಮತ್ತು ಹೊಸ ಡಿವೈಸ್ಗಳು ಆಗಸ್ಟ್ 11 ರಂದು ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು ಎಂದು ವರದಿ ಮಾಡಿದೆ.
ಗ್ಯಾಲಕ್ಸಿ ಝಡ್ ಫೋಲ್ಡ್ 5 ಸ್ಮಾರ್ಟ್ಫೋನ್ ತೆಳುವಾದ ವಿನ್ಯಾಸ ಹೊಂದಿರಲಿದ್ದು, 6.2 ಇಂಚು ಕವರ್ ಡಿಸ್ಪ್ಲೇ ಮತ್ತು 7.6 ಇಂಚು ಇನ್ನರ್ ಡಿಸ್ಪ್ಲೇ ಇರಲಿದೆ. ಗ್ಯಾಲಕ್ಸಿ S9 ಅಲ್ಟ್ರಾ 16GB RAM ಮತ್ತು 512GB ಮೆಮೊರಿ ಮತ್ತು ಟ್ಯಾಬ್ S9 12GB RAM ಮಾದರಿಗಳಲ್ಲಿ ಲಭ್ಯವಾಗಲಿವೆ. ಮೇಲಾಗಿ ಗ್ಯಾಲಕ್ಸಿ ಝಡ್ ಫೋಲ್ಡ್ 5 ಮತ್ತು ಫ್ಲಿಪ್ 5 ಎರಡೂ ಹೊಸ ವಾಟರ್ ಡ್ರಾಪ್ ಹಿಂಜ್ ವಿನ್ಯಾಸ ಹೊಂದಿರಲಿವೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ದ ಬ್ಯಾಟರಿ ಲೈಫ್ ಹೆಚ್ಚಿಸಲು ಸ್ಯಾಮ್‌ಸಂಗ್ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುವ ತಂತ್ರಜ್ಞಾನವನ್ನು ಉಪಯೋಗಿಸಲಿದೆ ಎಂದು ಹೇಳಲಾಗಿದೆ.
ಏಸಸ್ ಹೊಸ ಲ್ಯಾಪ್‌ಟಾಪ್ ಶ್ರೇಣಿ ಬಿಡುಗಡೆ: ರಿಪಬ್ಲಿಕ್ ಆಫ್ ಗೇಮರ್ಸ್ (ROG) ಮತ್ತು TUF ಸರಣಿಯ ಲ್ಯಾಪ್‌ಟಾಪ್ ಶ್ರೇಣಿಯ ಅಡಿ ಐದು ಹೊಸ ಮೋಡ್‌ಗಳನ್ನು ಪ್ರಾರಂಭಿಸುವುದರೊಂದಿಗೆ ಏಸಸ್ (Asus) ತನ್ನ ಗೇಮಿಂಗ್ ಲ್ಯಾಪ್‌ಟಾಪ್ ಶ್ರೇಣಿಯನ್ನು ವಿಸ್ತರಿಸಿದೆ. ಹೊಸ ಲ್ಯಾಪ್‌ಟಾಪ್ ಶ್ರೇಣಿಯು ಫ್ಲೋ Z13 ಅಕ್ರೋನಿಮ್ ಆವೃತ್ತಿ, TUF A16 ಅಡ್ವಾಂಟೇಜ್ ಆವೃತ್ತಿ, ಜೆಫೈರಸ್ G16, ಸ್ಟ್ರಿಕ್ಸ್ G16 ಮತ್ತು ಸ್ಟ್ರಿಕ್ಸ್ G18 ಅನ್ನು ಒಳಗೊಂಡಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು ಇತ್ತೀಚಿನ ಪೀಳಿಗೆಯ ಇಂಟೆಲ್ ಮತ್ತು ಎಎಮ್‌ಡಿ ಪ್ರೊಸೆಸರ್‌ಗಳು, ಎನ್‌ವಿಡಿಯಾದಿಂದ ಇತ್ತೀಚಿನ ಆರ್‌ಟಿಎಕ್ಸ್ 40 ಸರಣಿಯ ಗ್ರಾಫಿಕ್ಸ್, ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್, ಗೇಮಿಂಗ್ ವೈಶಿಷ್ಟ್ಯಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿವೆ.