ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಸ್ಯಾಮ್‌ಸಂಗ್ ಹೆಲ್ತ್ ಮಾನಿಟರ್ ಅಪ್ಲಿಕೇಶನ್‌ನಲ್ಲಿನ 'ಅನಿಯಮಿತ ಹಾರ್ಟ್ ರಿದಮ್ ನೋಟಿಫಿಕೇಶನ್' IHRN ವೈಶಿಷ್ಟ್ಯವು ಈ ವರ್ಷದ ಬೇಸಿಗೆಯಲ್ಲಿ ಆದಷ್ಟು ಶೀಘ್ರ 13 ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಪ್ರಕಟಿಸಿದೆ.
ಏನಿದು IHRN ವೈಶಿಷ್ಟ್ಯ?: ಐಎಚ್ಆರ್ಎನ್ ಅಪ್ಲಿಕೇಶನ್‌ನ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾನಿಟರಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಗ್ಯಾಲಕ್ಸಿ ವಾಚ್ ಬಳಕೆದಾರರಿಗೆ ಹೃತ್ಕರ್ಣದ ಕಂಪನ (AFib) ಸೂಚಿಸುವ ಹೃದಯದ ಲಯವನ್ನು ಪತ್ತೆಹಚ್ಚುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಪನಿ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಹೊಸ ವೈಶಿಷ್ಟ್ಯವನ್ನು ಕೊರಿಯಾದ ಆಹಾರ ಮತ್ತು ಔಷಧ ಸುರಕ್ಷತೆ ಸಚಿವಾಲಯ (MFDS) ಕಳೆದ ವಾರವಷ್ಟೇ ಅನುಮೋದಿಸಿದೆ. US ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ಅನುಮತಿ ನೀಡಿತ್ತು.ಈ ಅನುಮತಿ ಸಿಕ್ಕ ಬಳಿಕ ಈಗ ಕೊರಿಯಾದ ಎಂಎಫ್ಡಿಎಸ್ ಸಹ ಅಸ್ತು ಎಂದಿದೆ.
"ಅರ್ಜೆಂಟೀನಾ, ಅಜೆರ್ಬೈಜಾನ್, ಕೋಸ್ಟರಿಕಾ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಜಾರ್ಜಿಯಾ, ಗ್ವಾಟೆಮಾಲಾ, ಹಾಂಕಾಂಗ್, ಇಂಡೋನೇಷ್ಯಾ, ಪನಾಮ, ಯುಎಇ, ಹಾಗೆಯೇ ಕೊರಿಯಾ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಈ ವಾಚ್ ಅನ್ನು ಪರಿಚಯಿಸಲಾಗುವುದು‘‘ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಬ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿದೆ.