ಕರ್ನಾಟಕ

karnataka

ETV Bharat / science-and-technology

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್ ವಿನ್ಯಾಸ ಹೇಗಿದೆ ಗೊತ್ತಾ.. - Galaxy S23 Ultra

ಗ್ಯಾಲಕ್ಸಿ S22 ಸರಣಿಯಲ್ಲಿ S22 ಆಲ್ಟ್ರಾ ಸ್ಮಾರ್ಟ್​​ಫೋನ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಗೊತ್ತೇ ಇದೆ. ಈಗ ಸ್ಯಾಮ್​ಸಂಗ್​ ಗ್ಯಾಲಕ್ಸಿ S23 ಸರದಿಯಾಗಿದ್ದು ಹೆಚ್ಚು ಕಡಿಮೆ ಇದು ಗ್ಯಾಲಕ್ಸಿ ಎಸ್​ 22 ವಿನ್ಯಾಸವನ್ನೇ ಹೊಂದಿದೆ ಎಂದು ಕಂಪನಿ ಹೇಳಿದೆ.

Samsung Galaxy S23 Ultra smartphone  Samsung Galaxy S23 Ultra camera design  Samsung Galaxy S22 design  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್  ಸ್ಯಾಮ್​ಸಂಗ್​ ಗ್ಯಾಲಕ್ಸಿ S23  Samsung Galaxy S23 Series  Galaxy S23 Ultra  200MP Camera samsung Phone
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್ ವಿನ್ಯಾಸ

By

Published : Aug 29, 2022, 2:21 PM IST

ಸ್ಯಾಮ್​ಸಂಗ್​ ಕಂಪನಿ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S23 (Samsung Galaxy S23 Series) ಸರಣಿಯ ಸ್ಮಾರ್ಟ್​​ಫೋನ್ ಅನ್ನು ತಯಾರಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದು ಈ ವರ್ಷ ಫೆಬ್ರವರಿಯಲ್ಲಿ ಅನಾವರಣಗೊಂಡ ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಯ ಮುಂದಿನ ಆವೃತ್ತಿಯಾಗಿದೆ. ಈ ಸ್ಮಾರ್ಟ್​ಫೋನ್​ ಡಿಸೈನ್​​ ಸಹಿತ ಹೆಚ್ಚ ಕಡಿಮೆ ಗ್ಯಾಲಕ್ಸಿ ಎಸ್​ 22 ರೀತಿಯಲ್ಲೇ ಇದ್ದು, ಹಿಂಬದಿಯ ಕ್ಯಾಮೆರಾದಲ್ಲಿ ಸ್ವಲ್ಪ ವಿನ್ಯಾಸ ಬದಲಾಗಿದೆ ಎಂದು ಕಂಪನಿ ಹೇಳಿದೆ.

ಇನ್ನು ಗ್ಯಾಲಕ್ಸಿ ಎಸ್​ 22 ಫೀಚರ್ಸ್, ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಗ್ಯಾಲಕ್ಸಿ S23 ಆಲ್ಟ್ರಾ (Galaxy S23 Ultra) ಬಗ್ಗೆ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ. ಈ ಫೋನ್ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ (200MP Camera samsung Phone) ಲಾಂಚ್ ಆಗಲಿದೆಯಂತೆ. ಅಷ್ಟೇ ಅಲ್ಲ ಐಸ್ ಯೂನಿವರ್ಸ್ ಈ ಫೋನ್​ನ ವಿನ್ಯಾಸದಲ್ಲಿ ಕಾರ್ಯಗತವಾಗಿದ್ದು, ಇದು ಸಹ ಗ್ಯಾಲಕ್ಸಿ S22 ಅಲ್ಟ್ರಾದಂತೆಯೇ ಇರುತ್ತದೆ ಎಂದು GSM ಅರೆನಾ ಹೇಳಿದೆ.

ಗ್ಯಾಲಕ್ಸಿ S22 ಅಲ್ಟ್ರಾ ಗ್ರಾಹಕರು ಇಷ್ಟಪಟ್ಟಿದ್ದು, ಗ್ಯಾಲಕ್ಸಿ ಎಸ್​22 ಅರ್ಥಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ ಎಸ್​22 ಅನುಗುಣವಾಗಿರುವಂತೆ ವಿನ್ಯಾಸ ಮತ್ತು ಆಯಾಮಗಳು ಬದಲಾಗದೆ ಮುಂದುವರಿಯುವಂತೆ ಗ್ಯಾಲಕ್ಸಿ ಎಸ್​23 ಡಿಸೈನ್ ಇರುತ್ತದೆ. ಆದರೆ ಉಳಿದ Galaxy S23 ಲೈನ್-ಅಪ್ S23 ಅಲ್ಟ್ರಾದ ಕ್ಯಾಮೆರಾ ನೋಟ ಗ್ಯಾಲಕ್ಸಿ ಎಸ್​22 ರೀತಿಯಲ್ಲೇ ಇರತ್ತದೆ ಎಂದು ಕಂಪನಿ ಹೇಳಿದೆ.

ಈ ಬಾರಿ ಫೋನ್‌ನ ಯಾವುದೇ ಎಕ್ಸಿನೋಸ್ ಆವೃತ್ತಿ ಇರುವುದಿಲ್ಲ: ಗ್ಯಾಲಕ್ಸಿ S23 ಸರಣಿಯು ಪ್ರಮುಖ ಸ್ನಾಪ್‌ಡ್ರಾಗನ್ ಚಿಪ್ ಅನ್ನು ಮಾತ್ರ ಹೊಂದಿರುತ್ತದೆ ಮತ್ತು ಈ ಬಾರಿ ಫೋನ್‌ನ ಯಾವುದೇ ಎಕ್ಸಿನೋಸ್ ಆವೃತ್ತಿ ಇರುವುದಿಲ್ಲ ಎಂದು TF ಇಂಟರ್ನ್ಯಾಷನಲ್ ಸೆಕ್ಯುರಿಟೀಸ್ ವಿಶ್ಲೇಷಕ ಮಿಂಗ್-ಚಿ ಕುವೊ ಬಹಿರಂಗಪಡಿಸಿದ್ದಾರೆ. ಮುಂಬರುವ Galaxy S23 ಸರಣಿಯು ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಕುವೋ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ತಿಳಿಸಿದ್ದಾರೆ.

TSMC 4nm ಪ್ರಕ್ರಿಯೆಯಲ್ಲಿ ಅಭಿವೃದ್ಧಿ:ಕುವೋ ಪ್ರಕಾರ, Galaxy S23 ಸರಣಿಯು ಕ್ವಾಲ್ಕಾಮ್​ನ ಪ್ರಮುಖ 5G ಚಿಪ್ SM8550 ನಿಂದ ರನ್ನಿಂಗ್​ ಆಗುತ್ತದೆ. ಇದನ್ನು TSMC 4nm ಪ್ರಕ್ರಿಯೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೇ, ಸ್ಯಾಮ್‌ಸಂಗ್‌ನ ಪ್ರಮುಖ ಸರಣಿಯು ಆಂತರಿಕ ಎಕ್ಸಿನೋಸ್ 2300 ಚಿಪ್‌ಸೆಟ್ ಅನ್ನು ಅವಲಂಬಿಸಿರುವುದಿಲ್ಲ ಎಂದು ತಜ್ಞರು ಸೂಚಿಸುತ್ತಾರೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​22 ಬಗ್ಗೆ ಕಿರು ಮಾಹಿತಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇ ಹೊಂದಿದ್ದು, ಜೊತೆಗೆ ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇದರೊಂದಿಗೆ ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದೆ. ಈ ಫೋನ್ ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ.

ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 12MP+ 10MP+ 10MP ಸ್ಪೋರ್ಟ್ಸ್ ಕ್ಯಾಮೆರಾ ನೀಡಲಾಗಿದೆ. 40 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಇದೇ ಮಾದರಿಯನ್ನು ಗ್ಯಾಲಕ್ಸಿ ಎಸ್​23 ಒಳಗೊಂಡಿರುತ್ತದೆ ಎಂದು ಹೇಳುತ್ತದೆ ಕಂಪನಿ.

ಓದಿ:24 ಬಿಟ್​ ಹೈ ಫೈ ಸೌಂಡ್​ನ ಸ್ಯಾಮ್​ಸಂಗ್ ಗ್ಯಾಲಾಕ್ಸಿ​ ಬಡ್ಸ್​ 2 ಪ್ರೋ.. ಆ.26 ರಿಂದ ಭಾರತದಲ್ಲಿ ಲಭ್ಯ

ABOUT THE AUTHOR

...view details