ಮೊಬೈಲ್ ತಂತ್ರಜ್ಞಾನ ದೈತ್ಯ ಕಂಪನಿ ಸ್ಯಾಮ್‌ಸಂಗ್ ತನ್ನ M ಸರಣಿಯ ಮುಂದಿನ ಹೊಸ ಮೊಬೈಲ್ ಅನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಕಂಪನಿಯು ಅಧಿಕೃತವಾಗಿ ಘೋಷಿಸದಿದ್ದರೂ ಗ್ಯಾಲಾಕ್ಸಿ ಎಂ33 5ಜಿ ಆಗಿರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮುಂದಿನ ವಾರದಲ್ಲಿ ಕಂಪನಿ ಅಧಿಕೃತ ಘೋಷಣೆ ಮಾಡಲಿದೆ.
ಮೊಬೈಲ್ ಅನ್ನು ಭಾರತದಲ್ಲಿ ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡಲಾಗುವುದು ಎಂದು ಅಮೇಜಾನ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಂಪನಿ ಸುಳಿವು ನೀಡಿದೆ. ಮುಂಬರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬೃಹತ್ ವಿನ್ಯಾಸದೊಂದಿಗೆ ಹಸಿರು ಮತ್ತು ನೀಲಿ ಬಣ್ಣಗಳಲ್ಲಿರಲಿದೆ. Samsung Galaxy M33 5G ವೇಗದ ಈ ಮೊಬೈಲ್ 6000mAh ಬ್ಯಾಟರಿ ಹೊಂದಿದೆ. ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸ್ಪೀಕರ್ಗಳು ಮತ್ತು ಯುಎಸ್‌ಬಿ ಟೈಪ್ ಸಿ ಚಾರ್ಜರ್ ಇದು ಹೊಂದಿದೆ.
Samsung Galaxy M33 ವಿಶೇಷತೆಗಳಿವು:
- ಮೊಬೈಲ್ 6.6 ಇಂಚಿನ FHD + LCD ಡಿಸ್ಪ್ಲೇ, 120hz ಸ್ಕ್ರೀನ್ ರಿಫ್ರೆಶ್ ಹೊಂದಿದೆ.
- 8GB RAM 128 GB ROM, 6GB RAM ಮತ್ತು 128GB ಸಾಮರ್ಥ್ಯವಿದೆ.
- 50 ಎಂಪಿ ಮುಖ್ಯ ಕ್ಯಾಮೆರಾ, 5 ಎಂಪಿ, 2 ಎಂಪಿ ಸೇರಿದಂತೆ ನಾಲ್ಕು ಕ್ಯಾಮೆರಾ
- 8 ಮೆಗಾಪಿಕ್ಸೆಲ್ ಸಾಮರ್ಥ್ಯ ಸೆಲ್ಫಿ ಕ್ಯಾಮೆರಾ
Samsung Galaxy M33 ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ Galaxy M32 5G ಗಳಂತೆಯೇ ಇದೂ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ ಬೆಲೆಯು 6GB RAM + 128GB ಸ್ಟೋರೇಜ್‌ಗಾಗಿ 16,999 ಇರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಈ ಮೊಬೈಲ್ ಜೊತೆ ಬಾಕ್ಸ್ನಲ್ಲಿ ಚಾರ್ಜರ್ ಇರುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಬಿಎಸ್ಎನ್ಎಲ್ ಇನ್ನಾಗಲಿದೆ 4ಜಿ, 5ಜಿ: ಇದೇ ವರ್ಷ ಸ್ವದೇಶಿ ಸ್ಪೀಡ್ ನೆಟ್‌ವರ್ಕ್ ಕಾರ್ಯರೂಪ