ನವದೆಹಲಿ: 50MP ಟ್ರಿಪಲ್ ಕ್ಯಾಮರಾ, 6000mAh ಬ್ಯಾಟರಿ, 5nm ಪ್ರೊಸೆಸರ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ Galaxy M14 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ಸೋಮವಾರ ಘೋಷಿಸಿದೆ. ಪೂರ್ಣ HD+ 90Hz ಡಿಸ್ಪ್ಲೇ ಹೊಂದಿರುವ 6.6-ಇಂಚಿನ Galaxy M14 5G ಬೆಲೆಗಳು 13,490 (4+128GB) ಮತ್ತು 14,990 (6+128GB) ಆಗಿವೆ. ಐಸಿ ಸಿಲ್ವರ್, ಬೆರ್ರಿ ಬ್ಲೂ ಮತ್ತು ಸ್ಮೋಕಿ ಟೀಲ್ ಹೀಗೆ ಮೂರು ಬಣ್ಣಗಳಲ್ಲಿ ಇದು ಲಭ್ಯವಾಗಲಿದೆ. Galaxy M14 5G ಇದರ ಮಾರಾಟ ಭಾರತದಲ್ಲಿ ಏಪ್ರಿಲ್ 21 ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಲಿದೆ.
2019 ರಲ್ಲಿ ಲಾಂಚ್ ಆದಾಗಿನಿಂದ Galaxy M ಸರಣಿಯು ಭಾರತದಲ್ಲಿ ಲಕ್ಷಾಂತರ ಗ್ರಾಹಕರ ಮೆಚ್ಚುಗೆ ಪಡೆದಿದೆ. ಈ ಪರಂಪರೆಯನ್ನು ನಿರ್ಮಿಸುವ ಮೂಲಕ ನಾವು Galaxy M14 5G ಪರಿಚಯಿಸಲು ಹೆಮ್ಮೆಪಡುತ್ತೇವೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರ ವಿಭಾಗದ ನಿರ್ದೇಶಕ ರಾಹುಲ್ ಪಹ್ವಾ ಹೇಳಿದ್ದಾರೆ.
ವೈಶಿಷ್ಟ್ಯತೆಗಳು: F1.8 ಲೆನ್ಸ್ ಉತ್ತಮ ಸ್ಪಷ್ಟತೆಯೊಂದಿಗೆ ಕಡಿಮೆ-ಬೆಳಕಿನಲ್ಲಿ ಛಾಯಾಗ್ರಹಣಕ್ಕೆ ಸಹಕಾರಿಯಾಗಿದೆ. ಸೆಲ್ಫಿಗಳಿಗಾಗಿ 13 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 6000mAh ಬ್ಯಾಟರಿಯೊಂದಿಗೆ Galaxy M14 5G ಚಾರ್ಜ್ ಮಾಡದೆಯೇ ಎರಡು ದಿನಗಳವರೆಗೆ ಬಳಸಬಹುದು. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಮೂಲಕ ಫೋನ್ ಅನ್ನು ತ್ವರಿತ ಸಮಯದಲ್ಲಿ ರೀಚಾರ್ಜ್ ಮಾಡಬಹುದು. ಮಲ್ಟಿಟಾಸ್ಕಿಂಗ್ಗಾಗಿ ಸೆಗ್ಮೆಂಟ್ ಲೀಡಿಂಗ್ 5nm Exynos 1330 ಪ್ರೊಸೆಸರ್ ಅನ್ನು ಹೊಂದಿದೆ.