ನವದೆಹಲಿ : ಮಾರ್ಚ್ 15 ರಂದು ಗ್ಯಾಲಕ್ಸಿ ಎ 34 5 ಜಿ ಮತ್ತು ಗ್ಯಾಲಕ್ಸಿ ಎ 54 5 ಜಿ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಕಂಪನಿ ಸಿದ್ಧವಾಗಿದೆ ಸ್ಯಾಮ್‌ಸಂಗ್ ಹೇಳಿದೆ. ಅಲ್ಲದೆ ಈ ಫೋನ್ಗಳು ಮುಂದಿನ ವಾರ ಭಾರತದಲ್ಲಿಯೂ ಬಿಡುಗಡೆಯಾಗಲಿವೆ ಎಂದು ಉದ್ಯಮ ಮೂಲಗಳು ಗುರುವಾರ ತಿಳಿಸಿವೆ. Galaxy A34 ಮತ್ತು Galaxy A54 ಎರಡೂ ಸ್ಯಾಮ್‌ಸಂಗ್‌ನ 5G ಸರಣಿಯ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ಇನ್ನಷ್ಟು ವಿಸ್ತರಿಸಲಿವೆ. ಜೊತೆಗೆ ಕಂಪನಿಯು ಭಾರತದಲ್ಲಿ ತನ್ನ 5G ಅಧಿಪತ್ಯ ಉಳಿಸಿಕೊಳ್ಳಲು ಸಹಾಯ ಮಾಡಲಿವೆ.
ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಬೆಲೆ 30,000 ರಿಂದ 40,000 ರೂ.ಗಳ ನಡುವೆ ಇರಬಹುದು ಎಂದು ಮೂಲಗಳು ತಿಳಿಸಿವೆ. ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಕಳೆದ ವರ್ಷದ ಗ್ಯಾಲಕ್ಸಿ A53 ಮತ್ತು ಗ್ಯಾಲಕ್ಸಿ A3 2 ಮಾಡೆಲ್ಗಳ ಮುಂದಿನ ಮಾಡೆಲ್ಗಳಾಗಿರುತ್ತವೆ. ಕಳೆದ ವರ್ಷದ ಮಾಡೆಲ್ಗಳಿಗಿಂತ ಈ ವರ್ಷದ ಮಾಡೆಲ್ಗಳ ಬೆಲೆಗಳು ಸ್ವಲ್ಪ ಹೆಚ್ಚಾಗಿರಲಿವೆ. ಮೆಮೊರಿ ಸಾಮರ್ಥ್ಯ ಹೆಚ್ಚಾಗಿರುವ ಕಾರಣದಿಂದ ಬೆಲೆ ಹೆಚ್ಚಾಗಿರಬಹುದು ಎನ್ನಲಾಗಿದೆ.
ಗ್ಯಾಲಕ್ಸಿ A34 5G 8GB RAM ಮತ್ತು 256GB ಸ್ಟೋರೇಜ್ ಕೆಪಾಸಿಟಿ ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 1080 ಚಿಪ್‌ಸೆಟ್ ಅನ್ನು ಹೊಂದಿದೆ. ಗ್ಯಾಲಕ್ಸಿ A54 5G ಇದರಲ್ಲಿ Exynos 1380 ಚಿಪ್‌ಸೆಟ್ ಅಳವಡಿಸಲಾಗಿದೆ. ಜೊತೆಗೆ 8GB RAM ಮತ್ತು 256GB ವರೆಗೆ ಸ್ಟೋರೇಜ್ ಕೆಪಾಸಿಟಿ ಇರುತ್ತದೆ. ಎರಡೂ ಸ್ಮಾರ್ಟ್ಫೋನ್ಗಳು ಸೂಪರ್ AMOLED ಡಿಸ್ಪ್ಲೇ, 5,000mAh ಬ್ಯಾಟರಿ ಮತ್ತು 25W ಹೈ ಸ್ಪೀಡ್ ಚಾರ್ಜಿಂಗ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಎರಡೂ ಸಾಧನಗಳು ಮಾರುಕಟ್ಟೆಗೆ ಬಂದಾಗ Android 13 ಆಪರೇಟಿಂಗ್ ಸಿಸ್ಟಂ ಹೊಂದಿರುವ ನಿರೀಕ್ಷೆ ಇದೆ.