ಕರ್ನಾಟಕ

karnataka

ETV Bharat / science-and-technology

ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

ಸ್ಯಾಮ್​ಸಂಗ್ ತನ್ನ ಮಧ್ಯಮ ಶ್ರೇಣಿಯ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Samsung Galaxy A25 5G, Galaxy A15 5G now available in India
Samsung Galaxy A25 5G, Galaxy A15 5G now available in India

By ETV Bharat Karnataka Team

Published : Dec 27, 2023, 12:49 PM IST

ನವದೆಹಲಿ : ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಮಧ್ಯಮ ಶ್ರೇಣಿಯ ಗ್ಯಾಲಕ್ಸಿ ಎ15 5ಜಿ (Galaxy A15 5G) ಮತ್ತು ಗ್ಯಾಲಕ್ಸಿ ಎ25 5ಜಿ (Galaxy A25 5G) ಸ್ಮಾರ್ಟ್ ಫೋನ್ ಗಳನ್ನು ಸ್ಯಾಮ್​ಸಂಗ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗ್ಯಾಲಕ್ಸಿ ಎ 15 5 ಜಿ ಬ್ಲೂ ಬ್ಲ್ಯಾಕ್, ಬ್ಲೂ ಮತ್ತು ಲೈಟ್ ಬ್ಲೂ ವರ್ಣಗಳಲ್ಲಿ ಲಭ್ಯವಿದ್ದು, 8 ಜಿಬಿ + 256 ಜಿಬಿ ಮಾದರಿ 22,499 ರೂ. ಮತ್ತು 8 ಜಿಬಿ + 128 ಜಿಬಿ ಮಾದರಿ 19,499 ರೂ.ಗಳ ಆರಂಭಿಕ ಬೆಲೆಗಳಲ್ಲಿ ಸಿಗಲಿವೆ. ಹಾಗೆಯೇ ಗ್ಯಾಲಕ್ಸಿ ಎ 25 5 ಜಿ ಬ್ಲೂ ಬ್ಲ್ಯಾಕ್, ಬ್ಲೂ ಮತ್ತು ಹಳದಿ ವರ್ಣಗಳಲ್ಲಿ ಲಭ್ಯವಿದ್ದು, 8 ಜಿಬಿ + 256 ಜಿಬಿ ಮಾದರಿ 29,999 ರೂ. ಮತ್ತು 8 ಜಿಬಿ + 128 ಜಿಬಿ ಮಾದರಿ 26,999 ರೂ.ಗಳ ಆರಂಭಿಕ ಬೆಲೆಗಳಲ್ಲಿ ಸಿಗಲಿವೆ.

ಎಸ್​ಬಿಐ ಕಾರ್ಡ್​ ಬಳಸಿ ಕೊಂಡರೆ ಎರಡೂ ಮಾದರಿಗಳ ಮೇಲೆ ಕ್ಯಾಶ್​ಬ್ಯಾಕ್ ಆಫರ್ ಪಡೆಯಬಹುದು. ಗ್ಯಾಲಕ್ಸಿ ಎ 25 5 ಜಿ ವಿಷನ್ ಬೂಸ್ಟರ್ ತಂತ್ರಜ್ಞಾನದೊಂದಿಗೆ ಸೂಪರ್ - ಅಮೋಲೆಡ್ ಡಿಸ್​ಪ್ಲೇ, ಎಕ್ಸಿನೋಸ್ 1280 ಪ್ರೊಸೆಸರ್, ಫೋಟೋ-ಎಡಿಟಿಂಗ್ ವೈಶಿಷ್ಟ್ಯಗಳ 50 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್, 5000 ಎಂಎಎಚ್ ಬ್ಯಾಟರಿ ಮತ್ತು ನಾಕ್ಸ್ ವಾಲ್ಟ್​ನಂಥ (Knox Vault) ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಗ್ಯಾಲಕ್ಸಿ ಎ 14 5 ಜಿಯ ಸುಧಾರಿತ ಸ್ಮಾರ್ಟ್​ಫೋನ್ ಆಗಿರುವ ಗ್ಯಾಲಕ್ಸಿ ಎ 15 5 ಜಿ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ ಎ 15 5 ಜಿ ಮಬ್ಬಾದ ಫಿನಿಶ್​ನ ಗ್ಲಾಸ್ಟಿಕ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದ್ದರೆ, ಗ್ಯಾಲಕ್ಸಿ ಎ 25 5 ಜಿ ಗ್ಲಾಸಿ ಪ್ರಿಸ್ಮ್ ಪ್ಯಾಟರ್ನ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದೆ.

ಈ ಸಾಧನವು 6.5-ಇಂಚಿನ ಸೂಪರ್ ಅಮೋಲೆಡ್ ಡಿಸ್​ಪ್ಲೇ ಒಳಗೊಂಡಿದ್ದು, ವಿಷನ್ ಬೂಸ್ಟರ್​ ಕೂಡ ಇದರಲ್ಲಿದೆ. 90 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು ದೃಷ್ಟಿಯ ಆರಾಮಕ್ಕಾಗಿ ಕಡಿಮೆ ನೀಲಿ ಬೆಳಕಿನ ಡಿಸ್​ಪ್ಲೇಯೊಂದಿಗೆ ನಯವಾದ ಮತ್ತು ಸ್ಪಷ್ಟ ವೀಕ್ಷಣೆಯ ಅನುಭವ ನೀಡುತ್ತದೆ.

ಗ್ಯಾಲಕ್ಸಿ ಎ 15 5 ಜಿ ವಿಡಿಐಎಸ್​ ನೊಂದಿಗೆ 50 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ವೀಡಿಯೊಗಳಲ್ಲಿನ ಮಸುಕನ್ನು ಕಡಿಮೆ ಮಾಡುತ್ತದೆ. ಗ್ಯಾಲಕ್ಸಿ ಎ 25 5 ಜಿ ಹೆಚ್ಚಿನ ರೆಸಲ್ಯೂಶನ್ ಮತ್ತು ಶೇಕ್-ಫ್ರೀ ಫೋಟೋಗಳು ಮತ್ತು ವೀಡಿಯೊಗಳನ್ನು ಶೂಟ್ ಮಾಡಲು 50 ಎಂಪಿ (ಒಐಎಸ್) ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಇದನ್ನೂ ಓದಿ : ಜಿಯೋ ₹2,999 ಪ್ಲಾನ್ ವ್ಯಾಲಿಡಿಟಿ ಹೆಚ್ಚಳ: 389 ದಿನಗಳವರೆಗೆ ಪ್ರತಿದಿನ 2.5 ಜಿಬಿ ಡೇಟಾ ಆಫರ್

ABOUT THE AUTHOR

...view details