ಸ್ಯಾನ್ ಫ್ರಾನ್ಸಿಸ್ಕೋ:ಟೆಕ್ ಜಗತ್ತಿನಲ್ಲಿ ಕಳೆದ ಒಂದು ವಾರದಿಂದ ಜಾಗತಿಕವಾಗಿ ಸದ್ದು ಮಾಡುತ್ತಿರುವ ಹೆಸರು ಸ್ಯಾಮ್ ಆಲ್ಟ್ಮನ್. ಓಪನ್ಎಐನಿಂದ ವಜಾಗೊಂಡಿದ್ದ ಚಾಟ್ಜಿಪಿಟಿ ಸೃಷ್ಟಿಕರ್ತ ಆಲ್ಟಮನ್ ಇದೀಗ ಮತ್ತೆ ತಮ್ಮ ಗೂಡಿಗೆ ಮರಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವಾರದಲ್ಲಿ ಅವರು ಹೊಸ ಮಂಡಳಿಯೊಂದಿಗೆ ತಮ್ಮ ಓಪನ್ ಎಐ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ.
ಸ್ಯಾಮ್ ಆಲ್ಟಮನ್ ಓಪನ್ಎಐ ಮಂಡಳಿ ನಡುವಿನ ಹಗ್ಗ ಜಗ್ಗಾಟ ಕೊನೆಯ ಹಂತದಲ್ಲಿದೆ. ಅವರನ್ನು ಮರಳಿ ತರುವ ಎಲ್ಲಾ ಯತ್ನಕ್ಕೆ ಮಂಡಳಿಯ ನಿರ್ದೇಶಕರು ಪ್ರಯತ್ನಿಸಿದ್ದರು. ಇದೀಗ ಹೊಸ ಮಂಡಳಿ ರಚನೆ ಮಾಡುವ ಮೂಲಕ ಅವರನ್ನು ಮತ್ತೆ ಸಂಸ್ಥೆಗೆ ಸ್ವಾಗತಿಸಲಾಗುತ್ತಿದೆ.
ಹೊಸ ಮಂಡಳಿಯೊಂದಿಗೆ ಬರಲಿರುವ ಆಲ್ಟಮನ್:ವರದಿಗಳ ಅನುಸಾರ, ಕ್ವಾರ ಸಿಇಒ ಆ್ಯಡಂ ಡಿ ಎಂಜೆಲೊ, ಓಪನ್ ಎಐನ ಪ್ರಸ್ತುತ ಸದಸ್ಯರು ಮತ್ತು ಆಲ್ಟಮನ್ ಮತ್ತು ಇತರೆ ಮಂಡಳಿ ಸದಸ್ಯರ ಜೊತೆಗೆ ಚರ್ಚೆಗಳು ಮುಂದುವರೆದಿವೆ. ಮಂಡಳಿ ಮತ್ತು ಆಲ್ಟಮನ್ ಕಂಪನಿಗೆ ಮರಳುವ ಸಂಭಾವ್ಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದ್ದು, ಆಲ್ಟಮನ್ ಹೊಸ ಮಂಡಳಿ ನಿರ್ದೇಶಕರಾಗಿ ಮತ್ತೆ ಬರುವ ಸಾಧ್ಯತೆ ಇದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಅಂದರಂತೆ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಂಸ್ಥೆ, ಓಪನ್ಎಐಗೆ ಮರಳುವ ಹೊಸ ಒಪ್ಪಂದ ಕುರಿತು ಸ್ಯಾಮ್ ಅವರೊಂದಿಗೆ ಮಾತನಾಡಲಾಗಿದೆ. ಅದರ ಅನುಸಾರ ಹೊಸ ಮಂಡಳಿಯಲ್ಲಿ ಲ್ಯಾರಿ ಸಮರ್ಸ್, ಆ್ಯಡಂ ಡಿ ಎಂಜೆಲೊ, ಬ್ರೆಟ್ ಟೈಲರ್ಯೊಂದಿಗೆ ಸ್ಯಾಮ್ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತು ಅಂತಿಮ ಚರ್ಚೆ ಸಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.