ನವದೆಹಲಿ:ಎಲೋನ್ ಮಸ್ಕ್ ಒಡೆತನದ ಪ್ಲಾಟ್‌ಫಾರ್ಮ್‌ನಲ್ಲಿ ದ್ವೇಷಪೂರಿತ, ಹಿಂಸಾತ್ಮಕ ಮತ್ತು ತಪ್ಪಾದ ಮಾಹಿತಿಯ ಹರಡುವಿಕೆ ಹೆಚ್ಚಾಗಿ ಕಂಡುಬಂದಿದೆ ಎಂಬ ವರದಿಯನ್ನು ಟ್ವಿಟರ್ ಸಿಇಒ ಲಿಂಡಾ ಯಾಕರಿನೊ ನಿರಾಕರಿಸಿದ್ದಾರೆ. ಟ್ವಿಟರ್ "ಪ್ರಗತಿ ಸಾಧಿಸುತ್ತಿದೆ" ಮತ್ತು ಬಳಕೆದಾರರ ಫೀಡ್‌ನಲ್ಲಿನ ಹೆಚ್ಚಿನ ಟ್ವೀಟ್‌ಗಳು ಈಗ ಉತ್ತಮ ರೀತಿಯಲ್ಲೇ ಮೂಡಿಬರುತ್ತಿವೆ ಎಂದು ಯಾಕರಿನೊ ಸಮರ್ಥಿಸಿಕೊಂಡಿದ್ದಾರೆ.
ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು ಟ್ವಿಟರ್ನಲ್ಲಿ ಹಾನಿಕಾರಕ ವಿಷಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ನಿಜವಲ್ಲ. ಶೇಕಡ 99 ರಷ್ಟು ಹೆಚ್ಚು ಕಂಟೆಂಟ್ ಬಳಕೆದಾರರು ಮತ್ತು ಜಾಹೀರಾತುದಾರರು ಟ್ವಿಟರ್ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಏನೇ ಇರಲಿ.. ಈ ಪ್ಲಾಟ್‌ಫಾರ್ಮ್ ಅನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೆಲವೊಂದು ಲೇಖನಗಳು ತಪ್ಪು ದಾರಿಗೆಳೆಯುತ್ತಿವೆ ಎಂಬ ಮಾಹಿತಿ ಬಂದಿದೆ, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಯಾಕರಿನೊ ಹೇಳಿದ್ದಾರೆ. ಕಳೆದ 8 ತಿಂಗಳುಗಳಲ್ಲಿ ದ್ವೇಷದ ಭಾಷಣದ ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಮಕ್ಕಳ ಶೋಷಣೆಯನ್ನು ಪೂರ್ವಭಾವಿಯಾಗಿ ತಡೆಗಟ್ಟುತ್ತೇವೆ ಮತ್ತು ಬ್ರ್ಯಾಂಡ್‌ಗಳಿಗೆ ಅವರ ಜಾಹೀರಾತುಗಳು ಎಲ್ಲಿ ಗೋಚರಿಸುತ್ತವೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೇರುತ್ತೇವೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಬಳಕೆಯ ಪ್ರಚಂಡ ಬೆಳವಣಿಗೆಯನ್ನು ಕಾಣಲಿದ್ದೇವೆ. ನಾವು ಟ್ವಿಟ್ಟರ್ನಲ್ಲಿ ಪೂರ್ವ - ಬಿಡ್ ಇನ್ವೆಂಟರಿ ಫಿಲ್ಟರಿಂಗ್ ಅನ್ನು ಸಕ್ರಿಯವಾಗಿ ನಿರ್ಮಿಸುತ್ತಿದ್ದೇವೆ. ಅದು ವಿಷಯದ ಅಡ್ಜೆನ್ಸಿಗಳ ಮೇಲೆ ಇನ್ನಷ್ಟು ನಿಯಂತ್ರಣವನ್ನು ಅನುಮತಿಸುತ್ತದೆ" ಎಂದು ಯಾಕರಿನೊ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.