ಕರ್ನಾಟಕ

karnataka

ETV Bharat / science-and-technology

ನಕ್ಷತ್ರ ಲೋಕ ವಿಶ್ಲೇಷಿಸಿದ ಫ್ರೆಡ್ ಹೊಯ್ಲ್ ಜನ್ಮದಿನ.. BIG BANG ಥಿಯರಿ ಒಪ್ಪದ ಖಗೋಳಶಾಸ್ತ್ರಜ್ಞ

24 ಜೂನ್ 1915 ರಂದು ಜನಿಸಿದ ಫ್ರೆಡ್ ಹೊಯ್ಲ್ ಇಂಗ್ಲಿಷ್ ಖಗೋಳ ವಿಜ್ಞಾನಿಯಾಗಿದ್ದು, ಅವರು ನಕ್ಷತ್ರಗಳ ಹೊಳೆಯುವಿಕೆ ಹಾಗೂ ನಕ್ಷತ್ರಗಳ ಹುಟ್ಟಿನ ಕುರಿತು ಅಧ್ಯಯನ ನಡೆಸಿದ್ದಾರೆ. ಅವರು ವೈಜ್ಞಾನಿಕ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ರೇಡಿಯೊ ನಾಟಕಗಳನ್ನು ಬರೆದಿದ್ದು, ಇಂದು ಅವರ ಜನ್ಮದಿನವಾಗಿದೆ.

ಫ್ರೆಡ್ ಹೊಯ್ಲ್
ಫ್ರೆಡ್ ಹೊಯ್ಲ್

By

Published : Jun 24, 2021, 7:21 PM IST

ಹೈದರಾಬಾದ್: ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್​​ನಂತಹ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಇನ್ನೋರ್ವ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್​ ಇಂಗ್ಲೆಂಡ್​ನಲ್ಲಿ ಜನಿಸಿ, ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ದ ಖ್ಯಾತನಾಮರು. ಖಗೋಳ ವಿಸ್ಮಯದ ಕುರಿತು ಸ್ವವಿವರವಾಗಿ ಸಂಶೋಧನೆ ನಡೆಸಿದವರಲ್ಲಿ ಹಾಯ್ಲ್​ ಮೊದಲಿಗರು. ಇವರನ್ನ ಸ್ಥಿಮಿತ ಸ್ಥಿತಿ ವಾದದ ಪಿತಮಹಾ ಅಂತಲೂ ಕರೆಯಲಾಗುತ್ತದೆ.

1993ರಲ್ಲಿ ಕೇಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಇವರು, ಗಣಿತಶಾಸ್ತ್ರದಲ್ಲಿ ನಿಸ್ಸೀಮರಾಗಿದ್ದರು. ಚಿತ್ರಕಲೆಯಲ್ಲಿ ಲಿಯೊನಾರ್ಡೊರಂತೆ ಇವರು ಖಗೋಳಶಾಸ್ತ್ರದ ಅಪರಿಮಿತ ಯೋಚನಾ ಶಕ್ತಿ ಹೊಂದಿದವರು. ಅವರು ಖಗೋಳ ಭೌತಶಾಸ್ತ್ರ ಮತ್ತು ವಿಶ್ವ ವಿಜ್ಞಾನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು. ಅಲ್ಲದೇ ತಮ್ಮ ಜೀವನದ ಬಹುಕಾಲ ಅವರು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದರು.

ಫ್ರೆಡ್ ಹೊಯ್ಲ್

ಬಿಗ್​ ಬ್ಯಾಂಗ್ ಥಿಯರಿಯನ್ನು ವಿರೋಧಿಸಿದವರಲ್ಲಿ ಇವರು ಮೊದಲಿಗರಾಗಿದ್ದರು. ಅಲ್ಲದೇ ನೋಬೆಲ್ ಪ್ರಶಸ್ತಿ ತಿರಸ್ಕರಿಸಿ ವಿವಾದ ಹುಟ್ಟುಹಾಕಿದ್ದರು. ಶಿಕ್ಷಣ ನಂತರ ರುಡಾಲ್ಫ್ ಪಿಯರ್ಲ್ಸ್ ಅವರ ಮೇಲ್ವಿಚಾರಕರಾಗಿದ್ದರು. ನಕ್ಷತ್ರದ ಪ್ರಕಾಶಮಾನತೆಯನ್ನು ಅದರ ದ್ರವ್ಯರಾಶಿಯ ಅಳತೆಯಿಂದ ಹೇಗೆ ಲೆಕ್ಕ ಹಾಕಬೇಕು ಎಂಬುದನ್ನು ತೋರಿಸಿದರು

ಆವರ್ತಕ ಕೋಷ್ಟಕದಲ್ಲಿನ ಬಹುಪಾಲು ನೈಸರ್ಗಿಕ ಅಂಶಗಳನ್ನು ನಕ್ಷತ್ರಗಳ ಒಳಗೆ ತಯಾರಿಸಲಾಗುತ್ತದೆ ಮತ್ತು ಸೂಪರ್ನೋವಾ ಸ್ಫೋಟಗಳಿಂದ ಬಾಹ್ಯಾಕಾಶದ ಮೂಲಕ ವಿತರಿಸಲಾಗುತ್ತದೆ ಎಂದು ಫ್ರೆಡ್ ಹೊಯ್ಲ್ ಸಾಬೀತುಪಡಿಸಿದರು.

ವಿಜ್ಞಾನದ ಅನೇಕ ದೊಡ್ಡ ಪ್ರಶ್ನೆಗಳ ಬಗ್ಗೆ ಭಿನ್ನಾಭಿಪ್ರಾಯದ ಕುರಿತು ಪ್ರಶ್ನೆ ಎತ್ತಿದ್ದರು. ಬ್ರಹ್ಮಾಂಡದ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಭೂಮಿಯ ಮೇಲಿನ ಜೀವ ಸಂಕುಲವು ಬಾಹ್ಯಾಕಾಶದಿಂದಲೇ ಉದ್ಭವವಾಗಿದ್ದಾನೆ ಎಂದು ವಾದಿಸಿದ್ದರು.

ಸಣ್ಣ ಗ್ರಹ #8077 ಹೊಯ್ಲ್

ಫ್ರೆಡ್ ಹೊಯ್ಲ್ 1915ರಲ್ಲಿ ಜನಿಸಿದ್ದರು. ಅವರು ಇಂಗಾಲದ ಪರಮಾಣುವಿನಲ್ಲಿ ಅಣುವಿನ ಸ್ಥಿತಿ ನಿರೂಪಿಸಿದ್ದರು. ಹಾಗೆಯೇ ನಕ್ಷತ್ರಗಳಲ್ಲಿನ ನ್ಯೂಕ್ಲಿಯೋಸೈಂಥೆಸಿಸ್​​​​ ಅಧ್ಯಯನಕ್ಕಾಗಿ ಅವರ ಕೊಡುಗೆ ಅಪಾರವಾಗಿದೆ. ಹೊಯ್ಲ್ 1971 ರಿಂದ 1973ರ ವರೆಗೆ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಹೀಗಾಗಿ ಗ್ರಹವೊಂದಕ್ಕೆ ಹೊಯ್ಲ್​ ಹೆಸರಿಡಲಾಯಿತು.

ಫ್ರೆಡ್ ಹೊಯ್ಲ್

ವಿಶೇಷ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಅಡುಗೆ ಮನೆಯಲ್ಲಿ ವಿಷಾನಿಲ ತಯಾರಿಸಿದ್ದರು. ಮನೆಯಲ್ಲಿಯೇ ಇದ್ದ ರಸಾಯನಶಾಸ್ತ್ರ ಪುಸ್ತಕ ಓದಿಕೊಂಡು ಮನೆಯಲ್ಲಿ ಗನ್​ ಪೌಡರ್ ತಯಾರಿಸಿದರು. ಅಲ್ಲದೇ ನಾನೊಬ್ಬ ನಿಜವಾದ ರಸಾಯನಾಶಾಸ್ತ್ರಜ್ಞ ಎಂದು ನಿರೂಪಿಸಲು ಮುಂದಾದರು. ಜೊತೆಗೆ ಅಡುಗೆ ಮನೆಯಲ್ಲೇ ವಿಷಕಾರಿ ಫಾಸ್ಫೈನ್ ಅನಿಲವನ್ನೂ ಸಹ ತಯಾರಿಸಿ ಬಳಕೆ ಮಾಡುತ್ತಿದ್ದರು.

ಮನುಕುಲ ಯಾವುದೇ ಕಾಲದಲ್ಲಿ ಊಹಿಸಬಹುದಾದ ಎಲ್ಲ ವಿಸ್ಮಯಗಳನ್ನೂ ಮೀರುವ ಮಹಾವಿಸ್ಮಯಗಳ ನಿರಂತರ ನಿಧಿ ಈ ವಿಶ್ವ ಎಂಬ ವಾದ ಮಂಡಿಸಿದ್ದರು. ಇವರು ಆಗಸ್ಟ್ 20 2001ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.

ABOUT THE AUTHOR

...view details