ಮಂಗಳ ಗ್ರಹವನ್ನು ಕೆಂಪು ಗ್ರಹ (Red Planet)ವೆಂದು ಸಹ ಕರೆಯಲಾಗುತ್ತದೆ. ಇದು ಮಣ್ಣಿನ ಬಣ್ಣವನ್ನು ಹೊಂದಿದ್ದಕ್ಕಾಗಿ ಹೀಗೆಂದು ಕರೆಯುವರು. ಈ ಗ್ರಹದಲ್ಲಿ ಮನುಷ್ಯರು ಜೀವಿಸಲು ಬೇಕಾದ ವಾತಾವರಣವಿದೆ ಎಂದೂ ಸಹ ಹೇಳಲಾಗುತ್ತಿದೆ. ಮಂಗಳನ ಒಡಲಿನ ಮತ್ತಷ್ಟು ರಹಸ್ಯವನ್ನು ಅನ್ವೇಷಿಸಲು ಮನುಷ್ಯ ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾನೆ.
ನವೆಂಬರ್ 28,1964 ರಂದು ಮಂಗಳ ಗ್ರಹಕ್ಕೆ ಮ್ಯಾರಿನರ್4 ಎಂಬ ಮೊದಲ ಬಾಹ್ಯಾಕಾಶ ನೌಕೆ ಕಳುಹಿಸಲಾಯಿತು. ಇದರ ನೆನಪಿಗಾಗಿ ರೆಡ್ ಪ್ಲಾನೆಟ್ ಡೇಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.
ಫ್ಲೈ-ಬೈಸ್ ಸಮಯದಲ್ಲಿ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಆ ಮಾಹಿತಿಯನ್ನು ಭೂಮಿಗೆ ರವಾನಿಸಲು ಮ್ಯಾರಿನರ್ 4 ಬಾಹ್ಯಾಕಾಶ ನೌಕೆಯನ್ನು ನಿರ್ಮಿಸಲಾಗಿದೆ. ಬಾಹ್ಯಾಕಾಶ ನೌಕೆಯು ಸುಮಾರು ಎಂಟು ತಿಂಗಳ ಕಾಲದ ಪ್ರಯಾಣದ ನಂತರ ಜುಲೈ 14,1965 ರಂದು ಮಂಗಳ ಗ್ರಹ ತಲುಪಿದೆ. 'ರೋಮನ್ ಗಾಡ್ ಆಫ್ ವಾರ್' ಎಂದು ಈ ಗ್ರಹಕ್ಕೆ ಹೆಸರಿಸಲಾಯಿತು. ಪ್ರಾಥಮಿಕವಾಗಿ ಇಂಗಾಲದ ಡೈಆಕ್ಸೈಡ್‌ನಿಂದ ಸಂಯೋಜಿಸಲ್ಪಟ್ಟ ತೆಳುವಾದ ವಾತಾವರಣವನ್ನು ಮಂಗಳ ಹೊಂದಿದೆ. ಕೆಂಪು ಗ್ರಹದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿದುಕೊಳ್ಳೋಣ.
ಎತ್ತರದ ಪರ್ವತ: ಒಲಿಂಪಸ್ ಮಾನ್ಸ್, ಇದು ಮಂಗಳದ ಅತಿದೊಡ್ಡ ಜ್ವಾಲಾಮುಖಿ ಮತ್ತು ಸೌರವ್ಯೂಹದ ಅತಿ ಎತ್ತರದ ಪರ್ವತವಾಗಿದೆ. ಈ ಅಗಾಧವಾದ ಪರ್ವತವು ಸರಿಸುಮಾರು 16 miles (25 km) ಎತ್ತರ ಮತ್ತು 373 miles (600 km) ವ್ಯಾಸ ಹೊಂದಿದೆ. ಇದು ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿರಬಹುದಾದರೂ ಅದರ ಜ್ವಾಲಾಮುಖಿ ಲಾವಾದ ಪುರಾವೆಗಳು ತೀರಾ ಇತ್ತೀಚಿನಂತಿದೆ. ಅದು ಇನ್ನೂ ಸಕ್ರಿಯವಾಗಿರಬಹುದು ಎಂದು ಅನೇಕ ವಿಜ್ಞಾನಿಗಳು ನಂಬಿದ್ದಾರೆ.