ನವದೆಹಲಿ: ಹೊಸ ಅನುಭವ ನೀಡುವ ಅದ್ಬುತ ಆಫರ್ ಹೊಂದಿರುವ ಹೊಸ ಸ್ಮಾರ್ಟ್ಫೋನ್ಗಳತ್ತ ಸದ್ಯ ಭಾರತೀಯ ಯುವಕರ ಚಿತ್ತ ಇದೆ. ಭಾರತೀಯ ಬಳಕೆದಾರರ ಅವಶ್ಯಕತೆ ಮತ್ತು ಮನ್ನೆಣೆಗೆ ಅನುಗುಣವಾಗಿ ಇದೀಗ ರಿಯಲ್ಮೀ ಝನ್ರೌಯಿ ಜೊತೆಗೂಡಿ ರಿಯಲ್ಮಿ ಸಿ53 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ರಿಯಲ್ಮಿ ಸಿ53 ಯುನಿಸೊಕ್ ಟಿ612 ಚಿಪ್ಸೆಟ್ ಹೊಂದಿದೆ. ಈ ಸ್ಮಾರ್ಟ್ಫೋನ್ನ ಸಾಮರ್ಥ್ಯ ಪ್ರದರ್ಶನದಲ್ಲಿ ಇನ್ನು ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಅದರಲ್ಲಿ ಮುಖ್ಯವಾಗಿರುವುದು ಈ ಚಿಪ್ ಸೆಟ್ ಆಗಿದೆ. ಈ ಚಿಪ್ಸೆಟ್ ವೇಗ, ಬಹು ಹಂತದ ಕೆಲಸದ ಸಾಮರ್ಥ್ಯ ಹೊಂದಿದ್ದು, ಇದರ ಬ್ಯಾಟರಿ ಲೈಫ್ ಕೂಡ ಅದ್ಬುತವಾಗಿದೆ.
ಪ್ರವೇಶ ಹಂತದಲ್ಲೇ ಗೇಮ್ ಚೇಂಜರ್ ಆದ ರಿಯಲ್ಮಿ ಸಿ23: ತನ್ನ ಸಂಪ್ರದಾಯ ಮುಂದುವರೆಸಿದೆ ಈ ರಿಯಲ್ಮಿ ಸಿ 53. ಉತ್ತಮ ಗುಣಮಟ್ಟ ಮತ್ತು ಆವಿಷ್ಕಾರ ಹೊಂದಿದೆ. ರಿಯಲ್ಮಿ ಸಿ ಸರಣಿಯ ಈ ಸಿ 53 ಪ್ರವೇಶದ ಹಂತದಲ್ಲೇ ಗೇಮ್ ಚೇಂಜರ್ ಆಗುವ ಭರವಸೆ ನೀಡಿದೆ. ಸಿ55 ಮತ್ತು ಸಿ 55 ಗಮನಾರ್ಹ ತಂತ್ರಜ್ಞಾನದ ಗುಣಲಕ್ಷಣವನ್ನು ಹೊಂದಿದೆ. ಇದು ಬಳಕೆದಾರರಿಗೆ ಉತ್ತಮ ಅನುಭೂತಿ ನೀಡುತ್ತದೆ.
10 ಸಾವಿರದೊಳಗೆ ಅದ್ಬುತ ಕ್ಯಾಮೆರಾ: ರಿಯಲ್ಮಿ ಸಿ 53 ಅದ್ಬುತ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದೆ. 108 ಎಂಪಿ ರೆಸೆಲ್ಯೂಷನ್, 10,000 ಸೆಗ್ಮೆಂಟ್ಸ್ ಹೊಂದಿದ್ದು, ಅದ್ಬುತ ಪೋಟೋಗ್ರಾಫಿಕ್ ಅನುಭವ ನೀಡುತ್ತದೆ. ಇದರಲ್ಲಿ ಟಿ 612 ಚಿಪ್ಸೆಟ್ ಹೊಂದಿದೆ. ಇದರಿಂದ ಪೋಟೋಗಳ ಗುಣಮಟ್ಟ ಅದ್ಬುತವಾಗಿರಲಿದೆ. ಈ ಚಿಪ್ಸೆಟ್ ಸ್ಮಾರ್ಟ್ಫೋನ್ನಲ್ಲಿ ಲಭ್ಯವಿದ್ದು, ಇದು ಮಿಲಿಯನ್ ಪಿಕ್ಸೆಲ್ಗಳನ್ನು ಬೆಂಲಿಸುತ್ತದೆ.