ಬೆಂಗಳೂರು:ಈ ವರ್ಷದ ಜುಲೈ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿರುವ ಗಗನಯಾನ ಕಾರ್ಯಕ್ರಮಕ್ಕಾಗಿ ಬಳಸುವ ಕ್ರಯೋಜೆನಿಕ್ ಎಂಜಿನ್‌ನ ಅರ್ಹತಾ ಪರೀಕ್ಷೆಯನ್ನು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ 720 ಸೆಕೆಂಡುಗಳ ಕಾಲ ಯಶಸ್ವಿಯಾಗಿ ನಡೆಸಲಾಗಿದೆ.
ಈ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ್ದು, ಎಂಜಿನ್‌ನ ಕಾರ್ಯಕ್ಷಮತೆಯು ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ ಮತ್ತು ಸಂಪೂರ್ಣ ಪರೀಕ್ಷೆಯ ಅವಧಿಯಲ್ಲಿ ಸಕಾರಾತ್ಮಕ ಫಲಿತಾಂಶ ಹೊರ ಬಂದಿದೆ ಎಂದು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿ ಮಾಹಿತಿ ನೀಡಿದೆ.
ದೀರ್ಘಾವಧಿಯಲ್ಲಿ ನಡೆದ ಈ ಪರೀಕ್ಷೆಯು ಮಾನವ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನಕ್ಕೆ ಪ್ರಮುಖ ಮೈಲಿಗಲ್ಲು. ಇದು ಗಗನಯಾನಕ್ಕಾಗಿ ಈ ಕ್ರಯೋಜೆನಿಕ್ ಎಂಜಿನ್ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.