ಆಕಾಶದಲ್ಲಿರುವ ವಿಸ್ಮಯಗಳಿಗೆ ಮಿತಿಯೇ ಇಲ್ಲ. ಅಲ್ಲಿ ಯಾವಾಗಲೂ ಒಂದೊಂದು ರೀತಿಯ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಹೊಸ ಗ್ರಹಗಳೂ ಪತ್ತೆಯಾಗುತ್ತಿವೆ. ಇತ್ತೀಚೆಗಷ್ಟೇ ಆಲೂಗಡ್ಡೆಯಾಕಾರದ ಗ್ರಹವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಸುಮಾರು 1,500 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹ ಅಂಡಾಕಾರವಾಗಿ ಅಥವಾ ಆಲೂಗಡ್ಡೆಯಾಕಾರದಲ್ಲಿದೆ. ಇಲ್ಲಿ ಕುತೂಹಲಕಾರಿಯಾದ ಅಂಶವೆಂದರೆ, ಈವರೆಗೆ ಪತ್ತೆಯಾದ ಎಲ್ಲಾ ಗ್ರಹಗಳು ಗೋಳಾಕಾರವಾಗಿದ್ದು, ಈ ಗ್ರಹ ಮಾತ್ರ ಆಕಾರದಲ್ಲಿ ಭಿನ್ನವಾಗಿದೆ.
ತನ್ನ ಆಕೃತಿಯಿಂದಲೇ ವಿಜ್ಞಾನಿಗಳನ್ನು ಆಕರ್ಷಿಸಿರುವ ಈ ಗ್ರಹಕ್ಕೆ ಡಬ್ಲ್ಯೂಎಎಸ್ಪಿ-103ಬಿ (WASP-103B) ಎಂದು ನಾಮಕರಣ ಮಾಡಲಾಗಿದೆ. ಯಾವುದೋ ನಕ್ಷತ್ರದಿಂದ ಒತ್ತಡಕ್ಕೆ ಗುರಿಯಾಗಿ ಇದರ ಆಕೃತಿ ಭಿನ್ನವಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಭೂಮಿ ಸೂರ್ಯನನ್ನು ಸುತ್ತಲು ಒಂದು ವರ್ಷ ತೆಗದುಕೊಂಡರೆ, ಈ ಗ್ರಹ ಕೇವಲ 22 ಗಂಟೆಯಲ್ಲಿ ಸೂರ್ಯನನ್ನು ಸುತ್ತುಹಾಕುತ್ತದೆ ಎಂದು ತಿಳಿದುಬಂದಿದೆ. ಯೂರೋಪಿಯನ್ ಯೂನಿಯನ್ ಮತ್ತು ನಾಸಾಗೆ ಸೇರಿದ ವಿಜ್ಞಾನಿಗಳು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:7 ವಾಣಿಜ್ಯ ಉಪಗ್ರಹಗಳನ್ನ ಉಡ್ಡಯನ ಮಾಡಿದ ವರ್ಜಿನ್ ಆರ್ಬಿಟ್!