ಸಿಂಗಪುರ್ :ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ದಿ ಏಷಿಯನ್ ಆಫ್ ದಿ ಇಯರ್ಗೆ ಭಾಜನರಾಗಿದ್ದಾರೆ. ವಿವಿಧ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ತಯಾರಿಸುತ್ತಿರುವ ಏಷ್ಯನ್ನ ಆರು ಜನರಲ್ಲಿ ಇವರೂ ಒಬ್ಬರು ಎಂದು ಸಿಂಗಪುರ್ನ ದಿ ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವೀಡಿಷ್ ಔಷಧೀಯ ಕಂಪನಿ ಆಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆಯನ್ನು ಸೀರಮ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.
ಸಾರ್ಸ್ ಕೋವ್-2 ವೈರಸ್ ರಚನೆಯನ್ನು ತಳಿವಿಜ್ಞಾನ ಆಧಾರದಲ್ಲಿ ವಿಶ್ಲೇಷಿಸಿ, ಆನ್ಲೈನ್ನಲ್ಲಿ ಪ್ರಕಟಿಸಿದ ಚೀನಾದ ಸಂಶೋಧಕ ಜಾಂಗ್ ಯಾಂಗ್ ಜೆನ್, ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ತಜ್ಞರಾದ ಚೆನ್ವಿ, ಜಪಾನಿನ ಡಾ.ರಿಯಿಚಿ ಮೋರಿಶಿಟ, ಸಿಂಗಾಪುರದ ಪ್ರೊ.ಊಯಿ ಎಂಗ್ ಇಯಾಂಗ್, ದಕ್ಷಿಣ ಕೊರಿಯಾದ ಉದ್ಯಮಿ ಸಿಯೊ ಜಂಗ್-ಜಿನ್ ಕೂಡ ಏಷಿಯನ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.