ಪ್ರತಿ ವರ್ಷ ಶೇಖರಣೆಯಾಗುವ ಹೊಸ ಪ್ಲಾಸ್ಟಿಕ್ಗಳ ನಿವಾರಣೆಗೆ ಮರುಬಳಕೆಯೊಂದೇ ಪರಿಹಾರ ಎನ್ನಲಾಗುತ್ತಿತ್ತು. ಆದರೆ, ಇದು ವಾಸ್ತವವಲ್ಲ. ಜಾಗತಿಕ ಮರುಬಳಕೆಯ ಸಾಮರ್ಥ್ಯ ಎಂದರೆ ಸುಮ್ಮನೆ ತೆಗೆದುಕೊಳ್ಳುವುದು, ಬಳಸುವುದು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ವ್ಯರ್ಥ ಮಾಡುವುದಲ್ಲ. ಪ್ಲಾಸ್ಟಿಕ್ ಮರುಬಳಕೆ ಮಾಡುವುದಾಗಿ ಬ್ರಿಟನ್ನಂತಹ ದೇಶಗಳು ಬಡ ರಾಷ್ಟ್ರಗಳಿಂದ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ, ಗುಡ್ಡೆ ಹಾಕಿ ಕುಳಿತುಕೊಂಡಿದೆ. ಇಲ್ಲಿ ಪ್ಲಾಸ್ಟಿಕ್ ಮರುಬಳಕೆಗಿಂತ ಹೆಚ್ಚಾಗಿ ವ್ಯರ್ಥವಾಗುತ್ತಿದೆ.
ಮರುಬಳಕೆಯ ಪ್ರಕ್ರಿಯೆ ಇದೀಗ ದೊಡ್ಡ ಸಮಸ್ಯೆಯಾಗಿದೆ. ಗ್ರೀನ್ಪೀಸ್ ಮತ್ತು ದಿ ಇಂಟರ್ನ್ಯಾಷನಲ್ ಪೊಲುಟ್ಯಂಟ್ಸ್ ಎಲಿಮಿನೇಷನ್ ನೆಟ್ವರ್ಕ್ ಹೊಸ ವರದಿ ಅನುಸಾರ, ಮರು ಬಳಕೆಗಿಂತ ಹೆಚ್ಚಾಗಿ ಹಾಗೆಯೇ ಸಂಗ್ರಹಕೊಂಡು ಕೊಳೆಯುತ್ತಿರುವ ಪ್ಲಾಸ್ಟಿಕ್ಗಳು ಪರಿಸರಕ್ಕೆ ಹೆಚ್ಚು ವಿಷ ರಾಸಾಯನಿಕ ಬಿಡುಗಡೆ ಮಾಡುತ್ತಿದೆ.
ವ್ಯರ್ಥವಾಗಿ ಸಂಗ್ರಹಣೆ: ಇತ್ತೀಚಿನ ಮತ್ತೊಂದು ವರದಿಯಲ್ಲಿ, ಮರುಬಳಕೆ ಸೌಲಭ್ಯವೂ ಪ್ರತಿವರ್ಷ ಪರಿಸರಕ್ಕೆ ನೂರಾರು ಟನ್ ಮೈಕ್ರೋಪ್ಲಾಸ್ಟಿಕ್ಸ್ ಬಿಡುಗಡೆ ಮಾಡುತ್ತಿದೆ. ಕೇವಲ 6-9 ರಷ್ಟು ಎಲ್ಲ ಪ್ಲಾಸ್ಟಿಕ್ಗಳನ್ನು ಜಾಗತಿಕವಾಗಿ ಮರು ಬಳಕೆ ಮಾಡಲಾಗುತ್ತಿದೆ. ಆದಾಗ್ಯೂ, ಮರುಬಳಕೆಗೆ ಅನೇಕ ದೇಶಗಳು ಪ್ಲಾಸ್ಟಿಕ್ ಮತ್ತು ಅದರ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದೆ. ಈ ಮರುಬಳಕೆಯಿಂದ ಮಾಡುತ್ತಿರುವ ಉತ್ಪನ್ನಗಳು ಗಣನೀಯ ಮಟ್ಟದಲ್ಲಿ ಕಡಿಮೆ ಇದೆ.
ಕೇವಲ ಶೇ 2ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಕ್ಲೋಸ್ಡ್ ಲೂಪ್ನಲ್ಲಿ ಮರುಬಳಕೆ ಮಾಡಲಾಗುತ್ತಿದೆ. ಅಲ್ಲದೇ, ಇದು ಕಡಿಮೆ ಗುಣಮಟ್ಟಕ್ಕೆ ತಿರುಗದಂತೆ ನೋಡಿಕೊಳ್ಳಲಾಗುತ್ತಿದೆ. ಮರು ಬಳಕೆಯಲ್ಲಿ ವರ್ಜಿನ್ ಉತ್ಪನ್ನಗಳನ್ನು ಸಂಪೂರ್ಣವಾಗಿ ಮರುಬದಲಾವಣೆ ಮಾಡುವುದಿಲ್ಲ. ಏಕೆಂದರೆ ಅಗತ್ಯ ಗುಣಲಕ್ಷಣಗಳನ್ನು ಕಳೆದುಕೊಳ್ಳುವ ಮೊದಲು ಅದನ್ನು ಎರಡು ಬಾರಿ ಮರುಬಳಕೆ ಮಾಡಬಹುದು ಮತ್ತು ಆದ್ದರಿಂದ ಹೆಚ್ಚಿನ ಮರುಬಳಕೆಯು ಅದೇ ಉದ್ದೇಶಕ್ಕಾಗಿ ಬಳಸಲಾಗದ ಡೌನ್‌ಗ್ರೇಡ್ ವಸ್ತುವಿಗೆ ಕಾರಣವಾಗುತ್ತದೆ. ಇದಕ್ಕೆ ಸುಸ್ಥಿರ ಮಾರ್ಗ ಎಂದರೆ..,