ನವದೆಹಲಿ:ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ನಾಳೆ (ಮೇ 26ರಂದು) ನಡೆಯಲಿದೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ದೇಶದ ಕೆಲವೇ ಸ್ಥಳಗಳಲ್ಲಿ ಮಾತ್ರ ಭಾಗಶಃ ಚಂದ್ರ ಗ್ರಹಣ ಕಾಣಿಸಿಕೊಳ್ಳಲಿದೆ.
ಭಾಗಶಃ ಚಂದ್ರ ಗ್ರಹಣವು ಈಶಾನ್ಯ ಪ್ರದೇಶ (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಕರಾವಳಿ ಭಾಗಗಳಲ್ಲಿ ಅಲ್ಪಾವಧಿಗೆ ಗೋಚರಿಸುತ್ತದೆ ಎಂದು ಐಎಂಡಿ ತಿಳಿಸಿದೆ.