ನವದೆಹಲಿ:ತಿಂಗಳಿಗೆ 8 ಡಾಲರ್ ಪಾವತಿಸಿದ ಟ್ವಿಟರ್ ಬ್ಲೂ ಚೆಕ್ ಆರಂಭಿಕ ಚಂದಾದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚಂದಾದಾರಿಕೆಯನ್ನು ಮತ್ತು ಬ್ಲೂ ಚೆಕ್ ಮಾರ್ಕ್‌ಗಳನ್ನು ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಮ್ಯಾಶಬಲ್ ವರದಿಯ ಪ್ರಕಾರ, ಸುಮಾರು 150,000 ಆರಂಭಿಕ ಟ್ವಿಟರ್ ಬ್ಲೂ ಚಂದಾದಾರರಲ್ಲಿ, ಕೇವಲ 68,157 ಜನರು ಏಪ್ರಿಲ್ 30 ರವರೆಗೆ ಪಾವತಿಸಿದ ಚಂದಾದಾರಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ಸ್ವತಂತ್ರ ಸಂಶೋಧಕ ಟ್ರಾವಿಸ್ ಬ್ರೌನ್ ಸ್ಕ್ರ್ಯಾಪ್ ಅವರು ಕಲೆಹಾಕಿದ ಮಾಹಿತಿಯನ್ನು ಆಧರಿಸಿ, ಹೆಚ್ಚಿನ ಟ್ವಿಟರ್ ಬ್ಲೂ ಚಂದಾದಾರರು ಬ್ಲೂ ಚೆಕ್ ಟಿಕ್ ಮಾರ್ಕ್‌ಗಳನ್ನು ತ್ಯಜಿಸಿದ್ದಾರೆ ಎಂದು ವರದಿ ಹೇಳಿದೆ. ವರದಿಯಲ್ಲಿ ಉಲ್ಲೇಖಿಸಲಾದ ಸಂಖ್ಯೆಗಳ ಬಗ್ಗೆ ಎಲಾನ್ ಮಸ್ಕ್ ಅಥವಾ ಟ್ವಿಟರ್ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ವರ್ಷದ ವರದಿಗಳ ಪ್ರಕಾರ, ನವೆಂಬರ್ನಲ್ಲಿ ಟ್ವಿಟರ್ ಬ್ಲೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಟ್ಟು 150,000 ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ತಿಳಿಸಿದೆ.
ವರದಿಯ ಪ್ರಕಾರ, ಆರಂಭದಲ್ಲಿ ಟ್ವಿಟರ್ ಬ್ಲೂಗೆ ಚಂದಾದಾರರಾಗಿದ್ದ ಸುಮಾರು 81,843 ಬಳಕೆದಾರರು ಅಥವಾ ಶೇಕಡಾ 54.5 ರಷ್ಟು ಟ್ವಿಟರ್ ಬಳಕೆದಾರರು ಚಂದಾದಾರಿಕೆಯನ್ನು ರದ್ದುಗೊಳಿಸಿದ್ದಾರೆ. ಇದು ಆನ್ಲೈನ್ ಚಂದಾದಾರಿಕೆ ಸೇವೆಯಲ್ಲಿಯೇ ಹೆಚ್ಚಿನ ದರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಏಪ್ರಿಲ್ 20 ರಿಂದ ಟ್ವಿಟರ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರು ಶುಲ್ಕ ಪಾವತಿಸಬೇಕೇಂದು ಮಸ್ಕ್ ಹೇಳಿದ್ದರು. ಹಿಂದಿನ ವರದಿಯೊಂದು ಬ್ಲೂ ಸೇವೆಯ ಅರ್ಧದಷ್ಟು ಚಂದಾದಾರರು ಪ್ಲಾಟ್‌ಫಾರ್ಮ್‌ನಲ್ಲಿ 1,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿತ್ತು.