ಕರ್ನಾಟಕ

karnataka

ETV Bharat / science-and-technology

1.3 ಬಿಲಿಯನ್ ಆದಾಯ ಗಳಿಸಲಿದೆ ಓಪನ್ ಎಐ: ಸಿಇಒ ಸ್ಯಾಮ್​ ಆಲ್ಟ್​ಮ್ಯಾನ್ ಹೇಳಿಕೆ

ಚಾಟ್​ ಜಿಪಿಟಿ ತಯಾರಿಸಿದ ಓಪನ್ ಎಐ ಕಂಪನಿ ಈ ವರ್ಷ 1.3 ಬಿಲಿಯನ್ ಲಾಭ ಗಳಿಸಲಿದೆ ಎಂದು ಹೇಳಿಕೊಂಡಿದೆ.

open ai revenue on track
open ai revenue on track

By ETV Bharat Karnataka Team

Published : Oct 13, 2023, 1:26 PM IST

ಸ್ಯಾನ್ ಫ್ರಾನ್ಸಿಸ್ಕೋ : ಚಾಟ್ ಜಿಪಿಟಿ ತಯಾರಕ ಕಂಪನಿಯಾಗಿರುವ ಓಪನ್ ಎಐ ಈ ವರ್ಷ 1.3 ಬಿಲಿಯನ್ ಡಾಲರ್ ಆದಾಯ ಗಳಿಸಲಿದೆ ಎಂದು ಅದರ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಹೇಳಿದ್ದಾರೆ. ಮೈಕ್ರೋಸಾಫ್ಟ್ ಬೆಂಬಲಿತ ಎಐ ಕಂಪನಿ ತಿಂಗಳಿಗೆ 100 ಮಿಲಿಯನ್ ಡಾಲರ್​ಗಿಂತ ಹೆಚ್ಚು ಆದಾಯ ಗಳಿಸುತ್ತಿದೆ, ಇದು ಈ ವರ್ಷದ ಆರಂಭಕ್ಕಿಂತ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

"ಓಪನ್ಎಐ ಈ ವರ್ಷದಲ್ಲಿ 1.3 ಬಿಲಿಯನ್ ಡಾಲರ್ ಆದಾಯ ಗಳಿಸುತ್ತಿದೆ" ಎಂದು ಸಿಇಒ ಸ್ಯಾಮ್ ಆಲ್ಟ್​ ಮ್ಯಾನ್ ಈ ವಾರ ಸಿಬ್ಬಂದಿಗೆ ತಿಳಿಸಿದ್ದಾರೆ. 2022 ರಲ್ಲಿ, ಕಂಪನಿಯ ಆದಾಯ ಕೇವಲ $ 28 ಮಿಲಿಯನ್ ಆಗಿತ್ತು. ಕಳೆದ ಫೆಬ್ರವರಿಯಲ್ಲಿ ಓಪನ್ ಎಐ ತನ್ನ ಚಾಟ್​ ಬಾಟ್​ ಚಾಟ್​ ಜಿಪಿಟಿಯ ಪೇಡ್ ವರ್ಷನ್ ಬಿಡುಗಡೆ ಮಾಡಿತ್ತು. ಸಂಭಾಷಣಾತ್ಮಕ ಚಾಟ್​ಬಾಟ್ ಆಗಿರುವ ಚಾಟ್​ ಜಿಪಿಟಿಯ ಚಂದಾದಾರಿಕೆಗಳಿಂದ ಸದ್ಯ ಕಂಪನಿಯ ಆದಾಯ ಬೆಳವಣಿಗೆಯ ದರ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳಿವೆ.

ಓಪನ್ ಎಐನ ಜಿಪಿಟಿ ದೊಡ್ಡ ಭಾಷಾ ಮಾದರಿಗಳು (ಎಲ್ಎಲ್ಎಂ ಗಳು) ಈಗ ಮೈಕ್ರೋಸಾಫ್ಟ್​ನ ಇತ್ತೀಚಿನ ಉತ್ಪನ್ನ ಪೋರ್ಟ್​ಫೋಲಿಯೊಗಳ ಅವಿಭಾಜ್ಯ ಅಂಗವಾಗಿವೆ. ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಆ್ಯಪ್ ಫಿಗರ್ಸ್ ಪ್ರಕಾರ, ಚಾಟ್​ ಜಿಪಿಟಿ ಕಳೆದ ಎರಡು ತಿಂಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಆದಾಯ ಬೆಳವಣಿಗೆಯನ್ನು ಕಂಡಿತ್ತು. ಆದರೆ ಈಗ ಆದಾಯವು ಬೆಳವಣಿಗೆ ದರ ಇಲ್ಲಿಯವರೆಗೆ ಅತ್ಯಂತ ಕಡಿಮೆಯಾಗಿದೆ, ಅಂದರೆ ಕೇವಲ 20 ಪ್ರತಿಶತ (ಸೆಪ್ಟೆಂಬರ್ 2023 ರ ವೇಳೆಗೆ) ದಷ್ಟಾಗಿದೆ.

ಇತ್ತೀಚಿನ ಆವೃತ್ತಿಯ ಚಾಟ್ ಜಿಪಿಟಿ + ಚಂದಾದಾರಿಕೆ ಪಡೆಯಲು ತಿಂಗಳಿಗೆ $ 19.99 ದರ ನಿಗದಿಪಡಿಸಲಾಗಿದೆ. ಚಂದಾದಾರಿಕೆಯು ವೇಗದ ಪ್ರತಿಕ್ರಿಯೆ ಸಮಯ, ಗರಿಷ್ಠ ಸಮಯದಲ್ಲಿ ಆದ್ಯತೆಯ ಪ್ರವೇಶ ಮತ್ತು ಹೊಸ ವೈಶಿಷ್ಟ್ಯಗಳನ್ನು ಬಳಸಲು ಅವಕಾಶ ನೀಡುತ್ತದೆ. ಸೆಪ್ಟೆಂಬರ್​ನಲ್ಲಿ ಸುಮಾರು 15.6 ಮಿಲಿಯನ್ ಜನರು ಓಪನ್ಎಐನ ಚಾಟ್​ ಜಿಪಿಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ಆಲ್ಟ್​ ಮ್ಯಾನ್ ನೇತೃತ್ವದ ಓಪನ್ ಎಐ ಅಸ್ತಿತ್ವದಲ್ಲಿರುವ ಷೇರುಗಳ ಮಾರಾಟದ ಮೂಲಕ 80-90 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಇದನ್ನೂ ಓದಿ :ಭಾರತದ ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ.. ಏಕೆ ಗೊತ್ತಾ?

ABOUT THE AUTHOR

...view details