ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಒಡೆತನದ OpenAI ತನ್ನ ಚಾಟ್‌ಜಿಪಿಟಿಗಾಗಿ ಹೊಸ ಪ್ಲಗಿನ್‌ಗಳನ್ನು ಅಳವಡಿಸಿದೆ. ಈ ಹೊಸ ಪ್ಲಗಿನ್‌ಗಳು ವೆಬ್ ಸೇರಿದಂತೆ ಯಾವುದೇ ಥರ್ಡ್ ಪಾರ್ಟಿ ಮಾಹಿತಿ ತಾಣಗಳು ಮತ್ತು ಡೇಟಾಬೇಸ್‌ಗಳನ್ನು ಬ್ರೌಸ್ ಮಾಡಲು ಚಾಟ್ಬಾಟ್ಗೆ ಅವಕಾಶ ಮಾಡಿಕೊಡುತ್ತವೆ. ಆರಂಭದಲ್ಲಿ ಸಣ್ಣ ಗುಂಪಿನ ಬಳಕೆದಾರರಿಗೆ ಈ ಪ್ಲಗಿನ್‌ಗಳನ್ನು ಬಳಸಲು ಅವಕಾಶ ನೀಡಲಾಗುವುದು ಮತ್ತು ಅವರು ಈ ಬಗ್ಗೆ ಹೆಚ್ಚಾಗಿ ತಿಳಿದುಕೊಂಡ ನಂತರ ಇತರರಿಗೆ ಇದನ್ನು ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ.
ಇಂದು ನಾವು ನಮ್ಮ ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಅಲ್ಫಾ ಪ್ಲಗಿನ್ ಬಳಕೆಗೆ ಅವಕಾಶ ನೀಡುತ್ತಿದ್ದೇವೆ. ನಾವು ಆರಂಭದಲ್ಲಿ ಕಡಿಮೆ ಸಂಖ್ಯೆಯ ಡೆವಲಪರ್‌ಗಳು ಮತ್ತು ಚಾಟ್‌ಜಿಪಿಟಿ ಪ್ಲಸ್ ಬಳಕೆದಾರರಿಗೆ ಆದ್ಯತೆ ನೀಡಲಿದ್ದೇವೆ. ಕಾಲಾನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು OpenAI ಬ್ಲಾಗ್ ಪೋಸ್ಟ್ ಒಂದರಲ್ಲಿ ಹೇಳಿದೆ. ಕಂಪನಿಯ ಪ್ರಕಾರ, ಪ್ಲಗಿನ್‌ಗಳು ಭಾಷೆಯ ಮಾದರಿಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ ಮತ್ತು ಸುರಕ್ಷತೆ ಇವುಗಳ ಮೂಲ ತತ್ವವಾಗಿದೆ. ChatGPT ಹೊಸ ಮಾಹಿತಿಯನ್ನು ಪಡೆಯಲು, ಲೆಕ್ಕಾಚಾರ ಮಾಡಲು ಅಥವಾ ಥರ್ಡ್ ಪಾರ್ಟಿ ಸೇವೆಗಳನ್ನು ಬಳಸಲು ಇವು ಸಹಾಯ ಮಾಡುತ್ತವೆ.
ಪ್ಲಗಿನ್‌ಗಳು ಭಾಷಾ ಮಾದರಿಗಳಿಗೆ ಕಣ್ಣು ಮತ್ತು ಕಿವಿಗಳಾಗಬಹುದು. ತರಬೇತಿ ಡೇಟಾದಲ್ಲಿ ಸೇರಿಸಲು ತೀರಾ ಇತ್ತೀಚಿನ, ತೀರಾ ವೈಯಕ್ತಿಕ ಅಥವಾ ತುಂಬಾ ನಿರ್ದಿಷ್ಟವಾದ ಮಾಹಿತಿಗೆ ಇವು ಪ್ರವೇಶ ನೀಡುತ್ತವೆ. ಸ್ಪಷ್ಟವಾದ ವಿನಂತಿಗೆ ಪ್ರತಿಕ್ರಿಯೆಯಾಗಿ ಬಳಕೆದಾರರ ಪರವಾಗಿ ಸುರಕ್ಷಿತ, ನಿರ್ಬಂಧಿತ ಕ್ರಿಯೆಗಳನ್ನು ನಿರ್ವಹಿಸಲು ಪ್ಲಗಿನ್‌ಗಳು ಭಾಷಾ ಮಾದರಿಗಳನ್ನು ಸಕ್ರಿಯಗೊಳಿಸಬಹುದು. ಇದು ಸಿಸ್ಟಮ್‌ನ ಒಟ್ಟಾರೆ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಚಾಟ್‌ಜಿಪಿಟಿಗಾಗಿ ಡೆವಲಪರ್‌ಗಳು ತಮ್ಮದೇ ಆದ ಪ್ಲಗ್‌ಇನ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಇದು ಹೊರತರಲಿದೆ ಎಂದು OpenAI ಉಲ್ಲೇಖಿಸಿದೆ.