ಸ್ಯಾನ್ ಪ್ರಾನ್ಸಿಸ್ಕೋ: ಮಿಲಿಟರಿ ಮತ್ತು ಯುದ್ದದ ಚಟುವಟಿಕೆಗಳಿಗಾಗಿ ಎಐ ತಂತ್ರಜ್ಞಾನದ ಅಪ್ಲಿಕೇಷನ್ ಬಳಕೆಗೆ ಓಪನ್ ಎಐ ಅನುಮತಿಸಿದೆ. ಈ ಹಿಂದೆ ಈ ಉದ್ದೇಶಗಳಿಗೆ ಎಐ ಬಳಕೆ ನಿಷೇಧಿಸಲಾಗಿತ್ತು. ಇದೀಗ ಈ ಭಾಷೆಯನ್ನು ತೆಗೆದು ಹಾಕಿದೆ, ಇದೀಗ ಮುಕ್ತವಾಗಿ ಮಿಲಿಟರಿ ಬಳಕೆಗಳಿಗೆ ಮುಕ್ತವಾಗಿದೆ ಎಂದು ಓಪನ್ ಎಐ ತಿಳಿಸಿದೆ.
ಓಪನ್ ಎಐ ನಿಯಮದಲ್ಲಿದ್ದ ಮಿಲಿಟರಿ ಮತ್ತು ಯುದ್ದ ಅಪ್ಲಿಕೇಷನ್ ಅನ್ನು ಷರತ್ತುಗಳನ್ನು ತೆಗೆದು ಹಾಕಿ ಇದೀಗ ಹೊಸ ಪಾಲಿಸಿ ಅಪ್ಡೇಟ್ ಮಾಡಿದೆ. ಈ ಬದಲಾವಣೆಯು ಗಮನಾರ್ಹವಾಗಿದ್ದು, ಇದು ಯುದ್ದ ಚಟುವಟಿಕೆಯಲ್ಲಿ ಮಿಲಿಟರಿ ಒಳಗೊಳ್ಳುವಿಕೆಯನ್ನು ಪರಿಗಣಿಸಿದೆ. ಅಲ್ಲದೇ ಮಿಲಿಟರಿ ಸಹಯೋಗ ಅವಕಾಶಗಳಿಗೆ ದಾರಿ ಒದಗಿಸಿದೆ. ಸಂಸ್ಥೆಯು ಈ ಹಿಂದೆ ತಮ್ಮ ಉತ್ಪನ್ನಗಳನ್ನು ಮಿಲಿಟರಿ ಮತ್ತು ಯುದ್ಧದ ಉದ್ದೇಶಗಳಿಗಾಗಿ ಬಳಸುವುದರ ವಿರುದ್ಧ ಸ್ಪಷ್ಟ ನಿಲುವು ಹೊಂದಿತ್ತು. ಇದೀಗ ತನ್ನ ನೀತಿಯನ್ನು ಮಾರ್ಪಡಿಸಿದೆ. ಇದೀಗ ಭಾಷೆಯನ್ನು ತೆಗೆದು ಹಾಕುವ ಮೂಲಕ ಅವಕಾಶ ನೀಡಿದ್ದು, ಇದು ಸಂಸ್ಥೆಯ ನೀತಿಯನ್ನು ಪರಿಶೀಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಯಾಮ್ ಆಲ್ಟಮನ್ ಸಂಸ್ಥೆ ಚಾಟ್ ಜಿಪಿಟಿಯ ವಕ್ತಾರ, ಸಾರ್ವತ್ರಿಕ ತತ್ವಗಳನ್ನು ಸುಲಭವಾಗಿ ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವಿಶೇಷವಾಗಿ ನಮ್ಮ ಸಾಧನವೂ ಜಾಗತಿಕವಾಗಿ ನಿತ್ಯ ಬಳಕೆಯಾಗುತ್ತಿದೆ. ಅವರೇ ಜಿಪಿಟಿಯನ್ನು ನಿರ್ಮಿಸಬಹುದಾಗಿದೆ ಎಂದರು.