ಲಂಡನ್ (ಯುನೈಟೆಡ್ ಕಿಂಗ್ಡಮ್): ಮಾರ್ಚ್ 26 ರಂದು ಒನ್ವೆಬ್ ಉಪಗ್ರಹ ಸಂವಹನ ಕಂಪನಿಯು ಇಸ್ರೋದೊಂದಿಗೆ ಕೈ ಜೋಡಿಸಿ 36 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ಸಿದ್ಧವಾಗಿದೆ.
ಒನ್ವೆಬ್ ಉಪಗ್ರಹ ಸಂವಹನ ಕಂಪನಿಯು ಭಾರ್ತಿ ಎಂಟರ್ಪ್ರೈಸಸ್ನಿಂದ ಬೆಂಬಲಿತವಾಗಿದೆ. ಮಾರ್ಚ್ 26ರಂದು ಬೆಳಗ್ಗೆ 9 ಗಂಟೆಗೆ ಉಪಗ್ರಹ ಉಡಾವಣೆ ಆಗಲಿದೆ. ಕಂಪನಿ ನೀಡಿರುವ ಹೇಳಿಕೆಯ ಪ್ರಕಾರ, ಇದುವರೆಗೂ ಮಾಡಿದ ಉಡಾವಣೆಗಳಲ್ಲಿ ಈ ಉಡಾವಣೆಯು ಒನ್ವೆಬ್ನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲುಗಳಲ್ಲಿ ಒಂದಾಗಲಿದೆ. ಒನ್ವೆಬ್ ಪ್ಲೀಟ್ನಲ್ಲಿ ಹೆಚ್ಚುವರಿ 36 ಉಪಗ್ರಹಗಳನ್ನು ಜಾಗಿತಿಕ ಲೋ ಅರ್ಥ್ ಆರ್ಬಿಟ್ಗೆ ಸೇರಿಸುವ ಮೂಲಕ ಕಾರ್ಯಾಚರಣೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದೆ.
ಲಂಡನ್ ಮೂಲದ ಒನ್ವೆಬ್ ಕಂಪನಿಯು ಜಾಗತಿಕ ವ್ಯಾಪ್ತಿಯನ್ನ ಮತ್ತಷ್ಟು ವಿಕಸನ ಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದ್ದು, ಪ್ರಪಂಚದಾದ್ಯಂತ ಹೆಚ್ಚಿನ ವೇಗ ಮತ್ತು ಕಡಿಮೆ ಸುಪ್ತದ ಪರಿಹಾರದೊಂದಿಗೆ ಸಮುದಾಯಗಳು, ಉದ್ಯಮಗಳು ಮತ್ತು ಸರ್ಕಾರಗಳಿಗೆ ಇಂಟರ್ನೆಟ್ ಸಂಪರ್ಕ ನೀಡುವಲ್ಲಿ ಸಹಾಯ ಮಾಡುತ್ತದೆ. ಈ ಉಡಾವಣೆಯು ಭಾರತೊಂದಿಗಿನ ಎರಡನೇ ಯೋಜನೆಯಾಗಿದೆ. ಯುನೈಟೆಡ್ ಕಿಂಗ್ಡಮ್ ಮತ್ತು ಭಾರತೀಯ ಬಾಹಕಾಶ್ಯ ಉದ್ಯಮಗಳ ನಡುವಿನ ಸಹಯೋಗವನ್ನು ಎತ್ತಿ ತೋರಿಸುತ್ತದೆ.
ಒನ್ವೆಬ್ ಸಂವಹನ ಕಂಪನಿಯು ಕೇವಲ ಉದ್ಯಮಗಳಿಗೆ ಮಾತ್ರವಲ್ಲದೇ ಭಾರತದಾದ್ಯಂತ ದೇಶಾದ್ಯಂತ ತಲುಪಲು ಕಷ್ಟಕರವಾದ ಪ್ರದೇಶಗಳು ಸೇರಿದಂತೆ ಸಣ್ಣ ಪಟ್ಟಣಗಳು, ಹಳ್ಳಿಗಳು, ಶಾಲೆಗಳಿಗೆ ಸುರಕ್ಷಿತ ಪರಿಹಾರಗಳನ್ನು ತರುತ್ತದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಒನ್ವೆಬ್ ಕಂಪನಿಯು ಪ್ರಪಂಚದಾದ್ಯಂತದ ಪ್ರಮುಖ ಭೌಗೋಳಿಕತೆಗಳಲ್ಲಿ ಸಕ್ರಿಯವಾಗಿರುವ ಸಂಪರ್ಕ ಪರಿಹಾರಗಳನ್ನು ಹೊಂದಿದೆ ಮತ್ತು VEON, Orange, Galaxy Broadband, Paratus, Telespazio ಗಳನ್ನು ಒಳಗೊಂಡಂತೆ ಪ್ರಮುಖ ಪೂರೈಕೆದಾರರೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಹೊಸ ಆಯಾಮ ತರುತ್ತಿದೆ. ಮಾರ್ಚ್ 26ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಉಪಗ್ರಹಗಳ ಉಡಾವಣೆ ಮಾಡಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ವಿಭಾಗವಾದ NSIL ಇದನ್ನು ನಡೆಸಲಿದೆ.
ಸ್ಪೇಸ್ ಎಕ್ಸ್ ಸ್ಟಾರ್‌ಶಿಪ್ ಕಕ್ಷೆಗೆ ತಲುಪಿಸುವ ಯತ್ನ ಸಫಲತೆ ಸಾಧ್ಯತೆ ಶೇ 50ರಷ್ಟು ಮಾತ್ರ: ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ನೌಕೆಯ ಮೊದಲ ಕಕ್ಷೆಯ ಮಿಷನ್ ಯಶಸ್ವಿಯಾಗುವ ಸಾಧ್ಯತೆ ಕೇವಲ ಶೇಕಡಾ 50 ರಷ್ಟು ಮಾತ್ರ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಸ್ವತಃ ಹೇಳಿಕೊಂಡಿದ್ದಾರೆ. ಸ್ಟಾರ್‌ಶಿಪ್‌ನ ಪ್ರಥಮ ಕಕ್ಷೆಯ ಪರೀಕ್ಷಾ ಹಾರಾಟವು ಮುಂದಿನ ತಿಂಗಳಲ್ಲಿ ದಕ್ಷಿಣ ಟೆಕ್ಸಾಸ್‌ನಿಂದ ಪ್ರಾರಂಭವಾಗಲಿದೆ ಎಂದು ಮಸ್ಕ್ ಇದೇ ವೇಳೆ ತಿಳಿಸಿದ್ದಾರೆ. ಅದು ಕಕ್ಷೆಗೆ ತಲುಪುತ್ತದೆ ಎಂದು ನಾನು ಹೇಳುತ್ತಿಲ್ಲ, ಆದರೆ ಅದು ರೋಮಾಂಚನ ಮೂಡಿಸಲಿದೆ ಎಂಬುದು ಮಾತ್ರ ಪಕ್ಕಾ ಆಗಿದೆ ಎಂದು ಬುಧವಾರ ನಡೆದ ಮಾರ್ಗನ್ ಸ್ಟಾನ್ಲಿ ಕಾನ್ಫರೆನ್ಸ್‌ನಲ್ಲಿ ಮಸ್ಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮತ್ತಷ್ಟು ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್ಆ್ಯಪ್; ಏನಿದು ಟೆಕ್ಸ್ಟ್ ಡಿಟೆಕ್ಷನ್?