ಕರ್ನಾಟಕ

karnataka

ETV Bharat / science-and-technology

ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್​ಫೋನ್​ಗೆ One UI 5 ಅಪ್ಡೇಟ್ ಬಿಡುಗಡೆ - ಸ್ಯಾಮ್‌ಸಂಗ್ ಕಂಪನಿಯು ತನ್ನ ಇತ್ತೀಚಿನ M ಸರಣಿಯ ಫೋನ್

ಈ ತಿಂಗಳ ಆರಂಭದಲ್ಲಿ ಸ್ಯಾಮ್‌ಸಂಗ್ ಕಂಪನಿಯು ತನ್ನ ಇತ್ತೀಚಿನ M ಸರಣಿಯ ಫೋನ್, ಗ್ಯಾಲಕ್ಸಿ M04 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬೆಲೆ ರೂ. 8,999 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್​ಫೋನ್​ಗೆ One UI 5 ಅಪ್ಡೇಟ್ ಬಿಡುಗಡೆ
One UI 5 update released for Samsung

By

Published : Dec 12, 2022, 12:17 PM IST

ನವದೆಹಲಿ: ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಗ್ಯಾಲಕ್ಸಿ M13 ಸ್ಮಾರ್ಟ್​ಫೋನ್​ಗಳಿಗಾಗಿ ಆ್ಯಂಡ್ರಾಯ್ಡ್​ 13 ಆಧಾರಿತ One UI 5 ಅಪ್ಡೇಟ್ ಬಿಡುಗಡೆ ಮಾಡಿದೆ. m13 ಅಪ್‌ಡೇಟ್ ಇದು ಹೊಸ ಫರ್ಮ್‌ವೇರ್ ಆವೃತ್ತಿ ಮತ್ತು ನವೆಂಬರ್ 2022 ರ ಭದ್ರತಾ ಪ್ಯಾಚ್‌ಗಳನ್ನು ಹೊಂದಿರುತ್ತದೆ. ಬಳಕೆದಾರರು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಸಾಫ್ಟ್‌ವೇರ್ ಅಪ್ಡೇಟ್ ಮೆನುಗೆ ನ್ಯಾವಿಗೇಟ್ ಮಾಡಿದ ನಂತರ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಅಪ್ಡೇಟ್ ಡೌನ್‌ಲೋಡ್ ಮಾಡಬಹುದು ಎಂದು ಸ್ಯಾಮ್ಸಂಗ್ ಹೇಳಿದೆ.

ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಸುಧಾರಿತ ಕಾರ್ಯಕ್ಷಮತೆ ಮತ್ತು ಸುರಕ್ಷತೆ, ಸಮಗ್ರ ಮತ್ತು ಕೇಂದ್ರೀಕೃತ ಲಾಕ್ ಸ್ಕ್ರೀನ್ ಆಯ್ಕೆಗಳು ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಬಳಕೆದಾರರು ಪಡೆಯಲಿದ್ದಾರೆ. ಜೊತೆಗೆ ಇಂಟರ್ನಲ್ ವಾಲ್‌ಪೇಪರ್‌ಗಳ ಹೆಚ್ಚಿನ ಸಂಗ್ರಹ ಮತ್ತು ಇನ್ನಷ್ಟು ವೈಶಿಷ್ಟ್ಯಗಳು ಸಿಗಲಿವೆ.

ಈ ತಿಂಗಳ ಆರಂಭದಲ್ಲಿ ಸ್ಯಾಮ್ಸಂಗ್ ಕಂಪನಿಯು ತನ್ನ ಇತ್ತೀಚಿನ M ಸರಣಿಯ ಫೋನ್, ಗ್ಯಾಲಕ್ಸಿ M04 ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬೆಲೆ ರೂ. 8,999 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಗ್ಯಾಲಕ್ಸಿ M04 ನವೀನ RAM ಪ್ಲಸ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ ಎಂದು ಉದ್ಯಮದ ಮೂಲಗಳು ತಿಳಿಸಿದ್ದು, ಬಳಕೆದಾರರಿಗೆ ಫೋನ್‌ನ RAM ಸಂಗ್ರಹಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. RAM ಪ್ಲಸ್ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಸ್ಯಾಮ್ಸಂಗ್ M04 ನಲ್ಲಿ 8GB RAM ಪಡೆಯಬಹುದು. ಇದು 10,000 ರೂಪಾಯಿ ಬೆಲೆಬಾಳುವ ಸ್ಮಾರ್ಟ್​ಫೋನ್​ಗಳ ಶ್ರೇಣಿಯಲ್ಲಿ ವಿಶಿಷ್ಟವಾಗಿದೆ. ಈ ಸ್ಮಾರ್ಟ್​ಫೋನ್ ಶಕ್ತಿಶಾಲಿ 5000 mah ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಲಾಂಚ್​ ಆಯ್ತು ಸ್ಯಾಮ್ಸಂಗ್ ಫೋಲ್ಡಿಂಗ್ ಫೋನ್; ಬೆಲೆ ಎಷ್ಟು?

ABOUT THE AUTHOR

...view details