ನವದೆಹಲಿ:ಭಾರತದಲ್ಲಿ ಶಾರ್ಟ್ ವೀಡಿಯೊ ಪ್ಲಾಟ್ಫಾರ್ಮ್ ಬಳಕೆದಾರರ ಸಂಖ್ಯೆ 25 ಕೋಟಿ ತಲುಪಿದೆ. ಇವರಲ್ಲಿ ಸುಮಾರು 70 ಪ್ರತಿಶತದಷ್ಟು ಜನ ಶ್ರೇಣಿ -2 ನಗರಗಳು ಮತ್ತು ಇತರ ಅರೆ ನಗರ ಮತ್ತು ಗ್ರಾಮೀಣ ಕೇಂದ್ರಗಳಲ್ಲಿ ವಾಸಿಸುವವರಾಗಿದ್ದಾರೆ. ಇವರೆಲ್ಲರೂ ಹೆಚ್ಚಾಗಿ ಮಧ್ಯಮ ಮತ್ತು ಹೆಚ್ಚಿನ ಆದಾಯದ ಹಿನ್ನೆಲೆಯವರು ಎಂದು ಹೊಸ ವರದಿಯೊಂದು ಬುಧವಾರ ತೋರಿಸಿದೆ.
ಭಾರತೀಯ ಕಿರು ವೀಡಿಯೊ ಪ್ಲಾಟ್ಫಾರ್ಮ್ ಬಳಕೆದಾರರ ಪೈಕಿ ಸುಮಾರು 64 ಪ್ರತಿಶತದಷ್ಟು ಬಳಕೆದಾರರು 25 ವರ್ಷದವರಾಗಿದ್ದಾರೆ. ಇನ್ನು ಇದರಲ್ಲಿ ಶೇ 3ರಷ್ಟು ಬಳಕೆದಾರರು ಇನ್ನೂ ಚಿಕ್ಕವರು ಎಂದು ರೆಡ್ಸೀರ್ ವರದಿ ಹೇಳಿದೆ. ಯೂಸರ್-ಜನರೇಟೆಡ್ ಇನ್ಫ್ಲುಯೆನ್ಸರ್ ಪ್ಲಾಟ್ಫಾರ್ಮ್ಗಳು ದೇಶದಲ್ಲಿ ಶಾರ್ಟ್ ವೀಡಿಯೊ ಪ್ಲಾಟ್ಫಾರ್ಮ್ಗಳ ಬೆಳವಣಿಗೆಯ ಎಂಜಿನ್ ಆಗಿ ಕಾರ್ಯನಿರ್ವಹಿಸುವ 3.5 ಮಿಲಿಯನ್ ಇನ್ಫ್ಲುಯೆನ್ಸರ್ಗಳು ಅಥವಾ ಹೊಸ-ಯುಗದ ಸೆಲೆಬ್ರಿಟಿಗಳನ್ನು ತಯಾರಿಸಲು ಸಹಾಯ ಮಾಡಿವೆ.
2020 ರಲ್ಲಿ ಟಿಕ್ಟಾಕ್ ನಿಷೇಧದ ನಂತರ ಕೆಲ ಕಾಲ ಶಾರ್ಟ್ ವಿಡಿಯೋ ಕಂಟೆಂಟ್ ಸ್ತಬ್ಥವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಶಾರ್ಟ್ ವೀಡಿಯೊ ಪ್ಲಾಟ್ಫಾರ್ಮ್ಗಳು ಮತ್ತೆ ಬಳಕೆದಾರರ ಒಲವು ಗಳಿಸಿದವು. ಸದ್ಯ ಶೇ 40 ರಷ್ಟು ಬಳಕೆದಾರರು ಆನ್ಲೈನ್ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸುತ್ತಿರುವುದರಿಮದ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ಗಳಲ್ಲಿ ಹಣ ಗಳಿಸುವ ಅವಕಾಶಗಳು ಹೇರಳವಾಗುತ್ತಿವೆ.