ಕರ್ನಾಟಕ

karnataka

ETV Bharat / science-and-technology

ಹೊಸ ಪೀಳಿಗೆಯ ಗೇಮಿಂಗ್ Metaverse; 600 ಮಿಲಿಯನ್ ದಾಟಲಿದೆ ಬಳಕೆದಾರರ ಸಂಖ್ಯೆ

Metaverse: 2035 ರ ವೇಳೆಗೆ ಮೆಟಾವರ್ಸ್​ ತಂತ್ರಜ್ಞಾನವು $ 200 ಶತಕೋಟಿ ಉದ್ಯಮವಾಗುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನ ವರದಿ ಹೇಳಿದೆ.

Metaverse users to surpass over 600 mn
Metaverse users to surpass over 600 mn

By

Published : Jul 31, 2023, 5:40 PM IST

ನವದೆಹಲಿ:2026ರ ವೇಳೆಗೆ ಫೇಸ್​ಬುಕ್​ ಮೆಟಾವರ್ಸ್ ಬಳಕೆದಾರರ ಸಂಖ್ಯೆ 600 ಮಿಲಿಯನ್ ದಾಟುವ ನಿರೀಕ್ಷೆಯಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ (generative artificial intelligence -AI) ತಂತ್ರಜ್ಞಾನದ ಕಾರಣದಿಂದ ಮೆಟಾವರ್ಸ್​ ಹೆಚ್ಚು ಜನಪ್ರಿಯವಾಗುತ್ತಿದೆ. ಮೆಟಾವರ್ಸ್​ ಎಂಬುದು ಭೌತಿಕ ಮತ್ತು ಡಿಜಿಟಲ್ ಪ್ರಪಂಚಗಳು ಒಂದಾಗಿರುವ ಅನುಭವ ನೀಡುವ ವರ್ಚುವಲ್ 3D ಪರಿಸರವಾಗಿದೆ.

ಪ್ರಸ್ತುತ ಮೆಟಾವರ್ಸ್ ವಿಡಿಯೋ ಗೇಮ್‌ಗಳು ಮತ್ತು ವರ್ಚುವಲ್ ವರ್ಲ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ 300 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜನರೇಟಿವ್ AI ತಂತ್ರಜ್ಞಾನವು ತನ್ನ ಅದ್ಭುತ ಸಾಮರ್ಥ್ಯಗಳಿಂದಾಗಿ ಗಮನಾರ್ಹ ಪ್ರಖ್ಯಾತಿ ಗಳಿಸಿದೆ. ಸಾಂಪ್ರದಾಯಿಕ AI ಗೆ ವ್ಯತಿರಿಕ್ತವಾಗಿ ಜನರೇಟಿವ್ AI ಇದು ಸ್ಪಷ್ಟ ನಿಯಮಗಳನ್ನು ಆಧರಿಸಿದೆ. ಇದು ಕಂಟೆಂಟ್​, ಚಿತ್ರಗಳು, ಆಡಿಯೊ ಮತ್ತು ಸಂಪೂರ್ಣ ವರ್ಚುವಲ್ ಪ್ರಪಂಚಗಳನ್ನು ತಾನಾಗಿಯೇ ಸೃಷ್ಟಿಸಬಹುದು.

ಸಂವಾದಾತ್ಮಕ ಅಂಶಗಳು, ನಿಜಜೀವನ ಮಾದರಿಯ ಅವತಾರಗಳು ಮತ್ತು ತಲ್ಲೀನಗೊಳಿಸುವ ಅನುಭವಗಳೊಂದಿಗೆ (immersive experiences) ವರ್ಚುವಲ್ ಪರಿಸರವನ್ನು ನಿರ್ಮಿಸುವ ಮತ್ತು ಜನಪ್ರಿಯಗೊಳಿಸುವ ಜನರೇಟಿವ್ ಎಐನ ಸಾಮರ್ಥ್ಯವು ಮೆಟಾವರ್ಸ್ ಅಳವಡಿಕೆಯಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದು ವರದಿ ಹೇಳಿದೆ.

"ಜನರೇಟಿವ್ AI ಮೆಟಾವರ್ಸ್‌ನ ವಿಕಸನದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಇದು ಬಳಕೆದಾರರಿಗೆ ತಮ್ಮ ವರ್ಚುವಲ್ ಅನುಭವಗಳನ್ನು ಜೊತೆಯಾಗಿ ರಚಿಸಲು ಮತ್ತು ವೈಯಕ್ತೀಕರಿಸಲು ಅವಕಾಶ ನೀಡುತ್ತದೆ. ಕಲ್ಪನೆ ಮತ್ತು ವಾಸ್ತವತೆಯ ನಡುವಿನ ಅಂತರವನ್ನು ಇದು ಕಡಿಮೆ ಮಾಡುತ್ತದೆ. ನಾವು ಮೆಟಾವರ್ಸ್ ಅಪ್ಲಿಕೇಶನ್‌ಗಳಲ್ಲಿ ಅದರ ಏಕೀಕರಣವನ್ನು ವೀಕ್ಷಿಸುತ್ತೇವೆ. ಮೆಟಾವರ್ಸ್​ ಯಾವಾಗ, ಹೇಗೆ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾ ಗಲಿದೆ ಎಂಬ ಪ್ರಶ್ನೆ ಈಗಿಲ್ಲ" BanklessTimes Crypto ತಜ್ಞ ಆಲಿಸ್ ಲೀಥಮ್ ಹೇಳಿದರು.

ಇದಲ್ಲದೆ ಜನರೇಟಿವ್ AI ಮತ್ತು ಮೆಟಾವರ್ಸ್‌ನ ಸಂಯೋಜನೆಯು ಹಲವಾರು ಉದ್ಯಮಗಳಲ್ಲಿ ಭಾರಿ ಪರಿವರ್ತನೆ ತರಬಲ್ಲದು ಎಂದು ವರದಿಯು ಉಲ್ಲೇಖಿಸಿದೆ. ಉದಾಹರಣೆಗೆ ಹೆಚ್ಚಿನ ಬಳಕೆದಾರರು ಮೆಟಾವರ್ಸ್‌ಗೆ ಸೇರುವುದರಿಂದ ಸಾಂಪ್ರದಾಯಿಕ ಗೇಮಿಂಗ್​ ಹೆಚ್ಚು ಮುಕ್ತ, ಆಟಗಾರ-ಚಾಲಿತ ಅನುಭವವಾಗಿ ವಿಕಸನಗೊಳ್ಳಲು ಸಾಧ್ಯವಾಗುತ್ತಿದೆ. ಸಂಪೂರ್ಣ ವರ್ಚುವಲ್ ಆರ್ಥಿಕತೆಗಳು ಹೊರಹೊಮ್ಮಬಹುದು, ನೈಜ-ಪ್ರಪಂಚದ ಮೌಲ್ಯದೊಂದಿಗೆ ಡಿಜಿಟಲ್ ಇನ್-ಗೇಮ್ ಸ್ವತ್ತುಗಳ ರಚನೆ ಮತ್ತು ವಿನಿಮಯಕ್ಕೆ ಇದು ಅವಕಾಶ ನೀಡುತ್ತದೆ.

ಏತನ್ಮಧ್ಯೆ, ಭಾರತದಲ್ಲಿ ಮೆಟಾವರ್ಸ್​ ಮತ್ತು Web3 ಮಾರುಕಟ್ಟೆ ಅವಕಾಶವು ಸುಮಾರು 40 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು 2035 ರ ವೇಳೆಗೆ $ 200 ಶತಕೋಟಿ ಉದ್ಯಮವಾಗುವ ಸಾಮರ್ಥ್ಯ ಹೊಂದಿದೆ ಎಂದು ವರದಿ ತಿಳಿಸಿದೆ. ಮೆಟಾವರ್ಸ್ 2030 ರ ವೇಳೆಗೆ ಜಾಗತಿಕವಾಗಿ $13 ಟ್ರಿಲಿಯನ್ ಉದ್ಯಮವಾಗಲಿದೆ ಎಂದು ಅಂದಾಜಿಸಲಾಗಿದೆ. ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ ಸಿಮ್ಯುಲೇಶನ್ ಆಗಿದ್ದು, ಇದನ್ನು ಮನರಂಜನೆ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್‌ನಿಂದ ಹಿಡಿದು ಶಿಕ್ಷಣ ಮತ್ತು ವ್ಯಾಪಾರದವರೆಗೆ ವಿವಿಧ ಉದ್ದೇಶಗಳಿಗಾಗಿ ಬಳಸಬಹುದು.

ಇದನ್ನೂ ಓದಿ : Google Bard ವಿಶ್ವಾಸಾರ್ಹವಲ್ಲ; ಅಚ್ಚರಿ ಮೂಡಿಸಿದ ಗೂಗಲ್ ಮುಖ್ಯಸ್ಥರ ಹೇಳಿಕೆ​

ABOUT THE AUTHOR

...view details