ನವದೆಹಲಿ:ವಿಶ್ವದಲ್ಲಿ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಕ್ಯೂ 2) 175 ಮಿಲಿಯನ್ಗೂ ಅಧಿಕ ಹೊಸ 5ಜಿ ನೆಟ್ವರ್ಕ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿ ಈ ಅವಧಿಯಲ್ಲಿ ಅತ್ಯಧಿಕ ಏಳು ದಶಲಕ್ಷಕ್ಕೂ ಹೆಚ್ಚು ಹೊಸ 5ಜಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದು ಹೊಸ ವರದಿ ಮಂಗಳವಾರ ತಿಳಿಸಿದೆ. ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ 5 ಜಿ ಬಳಕೆದಾರರ ಸಂಖ್ಯೆ 1.3 ಬಿಲಿಯನ್ (130 ಕೋಟಿ)ಗೆ ತಲುಪಿದೆ.
ಎರಡನೇ ತ್ರೈಮಾಸಿಕದಲ್ಲಿ 40 ಮಿಲಿಯನ್ ಹೊಸ ಮೊಬೈಲ್ ಬಳಕೆದಾರರು ಸೃಷ್ಟಿಯಾಗಿದ್ದು, ಜಾಗತಿಕವಾಗಿ ಒಟ್ಟಾರೆ ಮೊಬೈಲ್ ಬಳಕೆದಾರರ ಸಂಖ್ಯೆ 8.3 ಬಿಲಿಯನ್ ಆಗಿದೆ. ಹಾಗೆಯೇ ಅನನ್ಯ ಮೊಬೈಲ್ ಬಳಕೆದಾರರ ಸಂಖ್ಯೆ 6.1 ಬಿಲಿಯನ್ ಆಗಿದೆ. ಈ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ಅಂದರೆ 7 ಮಿಲಿಯನ್ಗೂ ಅಧಿಕ ಹೊಸ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಚೀನಾ 5 ಮಿಲಿಯನ್ ಹಾಗೂ ಅಮೆರಿಕ 3 ಮಿಲಿಯನ್ ಹೊಸ ಮೊಬೈಲ್ ಬಳಕೆದಾರರ ಸೇರ್ಪಡೆಯೊಂದಿಗೆ ನಂತರದ ಸ್ಥಾನಗಳಲ್ಲಿವೆ.
"ವಿಶ್ವದಲ್ಲಿ ಸುಮಾರು 260 ಮೊಬೈಲ್ ಸಂಪರ್ಕ ಕಂಪನಿಗಳು (communications service providers -CSPs) ವಾಣಿಜ್ಯ 5 ಜಿ ಸೇವೆಗಳನ್ನು ಪ್ರಾರಂಭಿಸಿವೆ. ಸುಮಾರು 35 ಸಿಎಸ್ಪಿಗಳು ಸ್ವತಂತ್ರ 5 ಜಿ (ಎಸ್ಎ) ನೆಟ್ವರ್ಕ್ಗಳನ್ನು ಪ್ರಾರಂಭಿಸಿವೆ" ಎಂದು ವರದಿ ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಮೊಬೈಲ್ ಚಂದಾದಾರಿಕೆಯ ಬೆಳವಣಿಗೆ ಶೇಕಡಾ 105 ರಷ್ಟಿತ್ತು.