ಕರ್ನಾಟಕ

karnataka

ETV Bharat / science-and-technology

ಭಾರತದ 5G ಮೊಬೈಲ್ ಸಂಪರ್ಕಗಳ ಸಂಖ್ಯೆ 130 ಮಿಲಿಯನ್​ಗೆ ತಲುಪುವ ಅಂದಾಜು - etv bharat kannada

ಭಾರತ 5ಜಿ ಮೊಬೈಲ್ ಸಂಪರ್ಕಗಳ ಸಂಖ್ಯೆ ಈ ವರ್ಷ 130 ಮಿಲಿಯನ್​ಗೆ ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

5G mobile subscriptions in India to reach 130 mn in 2023
5G mobile subscriptions in India to reach 130 mn in 2023

By ETV Bharat Karnataka Team

Published : Nov 30, 2023, 4:13 PM IST

ನವದೆಹಲಿ: ಭಾರತದಲ್ಲಿ 2023 ರಲ್ಲಿ 5ಜಿ ಚಂದಾದಾರರ ಸಂಖ್ಯೆ 130 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಮತ್ತು 2029 ರ ವೇಳೆಗೆ 860 ಮಿಲಿಯನ್ ಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ. ಎರಿಕ್ಸನ್ ವರದಿ ಪ್ರಕಾರ, 2029ರ ಅಂತ್ಯದ ವೇಳೆಗೆ ಭಾರತದಲ್ಲಿ 5ಜಿ ಸಂಪರ್ಕಗಳ ಪ್ರಮಾಣ ಶೇಕಡಾ 68ಕ್ಕೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

"ನಮ್ಮ ಜಾಗತಿಕ ಕಾರ್ಯಾಚರಣೆ ಮತ್ತು ತಂತ್ರಜ್ಞಾನ ನಾಯಕತ್ವವು ಭಾರತವನ್ನು ಅದರ 5 ಜಿ ಪ್ರಯಾಣದಲ್ಲಿ ಬೆಂಬಲಿಸಲು ನಮಗೆ ಅನುವು ಮಾಡಿಕೊಟ್ಟಿದೆ. ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆ ಹೆಚ್ಚಿಸುವಲ್ಲಿ ಮೊಬೈಲ್ ನೆಟ್​ವರ್ಕ್​ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆ ಮೂಲಕ ದೇಶವನ್ನು ಡಿಜಿಟಲ್ ಸಶಕ್ತ ಸಮಾಜವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನ ಬೆಂಬಲಿಸುತ್ತದೆ" ಎಂದು ಎರಿಕ್ಸನ್ ಇಂಡಿಯಾದ ಮುಖ್ಯಸ್ಥ ನಿತಿನ್ ಬನ್ಸಾಲ್ ಹೇಳಿದರು.

ಆದಾಗ್ಯೂ 4 ಜಿ ಈಗಲೂ ಪ್ರಮುಖ ನೆಟ್​ವರ್ಕ್ ಆಗಿ ಮುಂದುವರೆದಿದೆ. ಚಂದಾದಾರರು 5 ಜಿಗೆ ವಲಸೆ ಹೋಗುತ್ತಿದ್ದಂತೆ 4 ಜಿ ಚಂದಾದಾರಿಕೆಗಳು 2023 ರಲ್ಲಿ 870 ಮಿಲಿಯನ್ ನಿಂದ 2029 ರ ವೇಳೆಗೆ 390 ಮಿಲಿಯನ್​ಗೆ ಇಳಿಯುವ ನಿರೀಕ್ಷೆಯಿದೆ. ಈ ಪ್ರದೇಶದ ಒಟ್ಟು ಮೊಬೈಲ್ ಚಂದಾದಾರಿಕೆಗಳು 2029 ರಲ್ಲಿ 1.27 ಬಿಲಿಯನ್​ಗೆ ಬೆಳೆಯಲಿವೆ ಎಂದು ಅಂದಾಜಿಸಲಾಗಿದೆ.

ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ಪ್ರತಿ ಸ್ಮಾರ್ಟ್​ಫೋನ್​ನ ಸರಾಸರಿ ಡೇಟಾ ಟ್ರಾಫಿಕ್ ಅತ್ಯಧಿಕವಾಗಿದೆ. ಇದು 2023 ರಲ್ಲಿ ತಿಂಗಳಿಗೆ 31 ಜಿಬಿಯಿಂದ 2029 ರಲ್ಲಿ ತಿಂಗಳಿಗೆ ಸುಮಾರು 75 ಜಿಬಿಗೆ ಬೆಳೆಯುವ ನಿರೀಕ್ಷೆಯಿದೆ. ಈ ಪ್ರಮಾಣ ಶೇಕಡಾ 16 ರಷ್ಟು ಸಿಎಜಿಆರ್ ಆಗಿದೆ. ಒಟ್ಟು ಮೊಬೈಲ್ ಡೇಟಾ ದಟ್ಟಣೆಯು 2023 ರಲ್ಲಿ ತಿಂಗಳಿಗೆ 26 ಇಬಿ (ಎಕ್ಸಾಬೈಟ್) ನಿಂದ 2029 ರಲ್ಲಿ ತಿಂಗಳಿಗೆ 73 ಇಬಿಗೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಇದು ಶೇಕಡಾ 19 ರಷ್ಟು ಸಿಎಜಿಆರ್​ನಲ್ಲಿ ಬೆಳೆಯುತ್ತಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿನ ಒಟ್ಟು ಮೊಬೈಲ್ ಚಂದಾದಾರರ ಪೈಕಿ ಸ್ಮಾರ್ಟ್​ಫೋನ್ ಚಂದಾದಾರರ ಶೇಕಡಾವಾರು ಪ್ರಮಾಣ 2023 ರಲ್ಲಿ ಶೇಕಡಾ 82 ಇದ್ದದ್ದು 2029 ರಲ್ಲಿ ಶೇಕಡಾ 93 ಕ್ಕೆ ಬೆಳೆಯುವ ನಿರೀಕ್ಷೆಯಿದೆ. ಜಾಗತಿಕವಾಗಿ 2023ರ ಕ್ಯಾಲೆಂಡರ್ ವರ್ಷದಲ್ಲಿ 610 ಮಿಲಿಯನ್ ಹೊಸ 5ಜಿ ಸಂಪರ್ಕಗಳು ಸೇರ್ಪಡೆಯಾಗಿವೆ. ಇದು 2022 ಕ್ಕೆ ಹೋಲಿಸಿದರೆ ಶೇಕಡಾ 63 ರಷ್ಟು ಹೆಚ್ಚಳವಾಗಿದೆ.

2023 ಮತ್ತು 2029 ರ ನಡುವಿನ ಆರು ವರ್ಷಗಳಲ್ಲಿ ಜಾಗತಿಕ 5ಜಿ ಸಂಪರ್ಕಗಳ ಸಂಖ್ಯೆ ಶೇಕಡಾ 330 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ ಈ ಪ್ರಮಾಣ 1.6 ಬಿಲಿಯನ್​ನಿಂದ 5.3 ಬಿಲಿಯನ್​ಗೆ ಏರಿಕೆಯಾಗಲಿದೆ. 2023 ರ ಅಂತ್ಯದ ವೇಳೆಗೆ ಜಾಗತಿಕ ಜನಸಂಖ್ಯೆಯ 45 ಪ್ರತಿಶತಕ್ಕೂ ಹೆಚ್ಚು ಮತ್ತು 2029 ರ ಅಂತ್ಯದ ವೇಳೆಗೆ 85 ಪ್ರತಿಶತದಷ್ಟು ಜನರಿಗೆ 5ಜಿ ಸಂಪರ್ಕ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಪ್ಲೇ ಸ್ಟೋರ್​ನಲ್ಲಿ 2023ರ ಬೆಸ್ಟ್​ ಆ್ಯಪ್ ಮತ್ತು ಗೇಮ್​ ಯಾವುದು? ಇಲ್ಲಿದೆ ಪಟ್ಟಿ

ABOUT THE AUTHOR

...view details