ನ್ಯೂಯಾರ್ಕ್, ಅಮೆರಿಕ : ಮನುಷ್ಯರ ದೇಹದಲ್ಲಿ ಅಥವಾ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ರೋಗಗಳು ಅಥವಾ ಸಮಸ್ಯೆಗಳು ಒಂದೆರೆಡಲ್ಲ. ಇತ್ತೀಚೆಗಂತೂ ಹೊಸ ಹೊಸ ರೀತಿಯ ರೋಗಗಳು, ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಕೆಲ ಅಸ್ವಸ್ಥತೆಗಳನ್ನು ಹೋಗಲಾಡಿಸಲು ತಂತ್ರಜ್ಞಾನವೂ ನೆರವಾಗುತ್ತಿದೆ.
ಕೆಲವರಲ್ಲಿ ಹೆಚ್ಚಾಗಿ ಊಟ ಮಾಡುವ ಅಭ್ಯಾಸವಿರುತ್ತದೆ. ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚಿಗೆ ತಿಂದರೆ ಅದನ್ನು ಅಸ್ವಸ್ಥತೆ ಅಥವಾ ಡಿಸಾರ್ಡರ್ (Eating disorder) ಎಂದು ಕರೆಯಲಾಗುತ್ತದೆ. ಈ ಡಿಸಾರ್ಡರ್ ಅನ್ನು ಕಡಿಮೆ ಮಾಡಲು ಚಾಟ್ಬೋಟ್ (Chatbot) ಅನ್ನು ನ್ಯೂಯಾರ್ಕ್ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅಂದಹಾಗೆ ಚಾಟ್ಬೋಟ್ ಎಂದರೆ ಒಂದು ರೀತಿಯ ಸಾಫ್ಟ್ವೇರ್ ಆಗಿದೆ.
ಹೆಚ್ಚಾಗಿ ತಿನ್ನುವ ಅಸ್ವಸ್ಥತೆಯನ್ನು ವೈದ್ಯಕೀಯ ಭಾಷೆಯಲ್ಲಿ ಬಿಂಜ್ ಡಿಸಾರ್ಡರ್ (Binge Disorder) ಎಂದು ಕರೆಯಾಗುತ್ತದೆ. ಈ ವಿಚಾರದಲ್ಲಿ ದೇಹದ ಗಾತ್ರ ಮತ್ತು ಆಕಾರದಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಸಲುವಾಗಿ ಈ ಚಾಟ್ಬೋಟ್ ಅನ್ನು ಅಬಿವೃದ್ಧಿಪಡಿಸಲಾಗಿದೆ ಎಂದು ಅಮೆರಿಕದ ತಂತ್ರಜ್ಞಾನ ವಿಚಾರಗಳಿಗೆ ಸಂಬಂಧಿಸಿದ 'ದ ವರ್ಜ್' ವೆಬ್ಸೈಟ್ ಉಲ್ಲೇಖಿಸಿದೆ.
ಡಿಜಿಟಲ್ ಮೂಲಕದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲ ಅಸ್ವಸ್ಥತೆಗಳನ್ನು ಸಂಪೂರ್ಣವಾಗಿ ದೂರಮಾಡಬಹುದಾಗಿದೆ. ಈಗ ರೂಪಿಸಿರುವ ಚಾಟ್ಬೋಟ್ ಸ್ವಯಂಚಾಲಿತವಾಗಿದೆ ಎಂದು ಅಮೆರಿಕದ ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ವಿಭಾಗದ ಮನಃಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿರುವ ಎಲ್ಲೆನ್ ಫಿಟ್ಜ್ಸಿಮ್ಮೋನ್ಸ್- ಕ್ರಾಫ್ಟ್ ಹೇಳಿದ್ದಾರೆ.