ನವದೆಹಲಿ : ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಬ್ರಾಂಡ್ 'ನಥಿಂಗ್' ನ ಹೊಸ ಉಪ ಬ್ರಾಂಡ್ ಆಗಿರುವ ಸಿಎಂಎಫ್ ಮಂಗಳವಾರ ಭಾರತದಲ್ಲಿ ನೂತನ ವಾಚ್ ಪ್ರೊ ಮತ್ತು ಬಡ್ಸ್ ಪ್ರೊ ಅನ್ನು ಬಿಡುಗಡೆ ಮಾಡಿದೆ. ಮೆಟಾಲಿಕ್ ಗ್ರೇ ಮತ್ತು ಡಾರ್ಕ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ವಾಚ್ ಪ್ರೊ ಬೆಲೆ ಕ್ರಮವಾಗಿ 4,999 ಮತ್ತು 4,499 ರೂ. ಆಗಿದ್ದು, ಬಡ್ಸ್ ಪ್ರೊ ಬೆಲೆ 3,499 ರೂ. ಗಳಾಗಿದೆ. ಬಡ್ಸ್ ಪ್ರೊ ಡಾರ್ಕ್ ಗ್ರೇ, ಲೈಟ್ ಗ್ರೇ ಮತ್ತು ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿದೆ. ಈ ಆಕರ್ಷಕ ಸಾಧನಗಳನ್ನು ಸೆಪ್ಟೆಂಬರ್ 30 ರಿಂದ ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮಳಿಗೆಗಳಲ್ಲಿ ಖರೀದಿಸಬಹುದು.
"ಬಡ್ಸ್ ಪ್ರೊ, ವಾಚ್ ಪ್ರೊ ಮತ್ತು ಪವರ್ 65 ಡಬ್ಲ್ಯೂ ಜಿಎಎನ್ ಸೇರಿದಂತೆ ನಮ್ಮ ಆರಂಭಿಕ ಉತ್ಪನ್ನಗಳ ಮೂಲಕ ನಾವು ಉನ್ನತ ವಿನ್ಯಾಸವನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದ್ದೇವೆ" ಎಂದು ನಥಿಂಗ್ನ ಸಹ-ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಎಂಎಫ್ ವಾಚ್ ಪ್ರೊ 1.96 ಇಂಚಿನ ದೊಡ್ಡ ಅಮೋಲೆಡ್ ಡಿಸ್ಪ್ಲೇ, ಕಣ್ಸೆಳೆಯುವ ಬಣ್ಣಗಳು, ತಡೆರಹಿತ ನ್ಯಾವಿಗೇಷನ್ ಮತ್ತು 58 ಎಫ್ಪಿಎಸ್ ರಿಫ್ರೆಶ್ ರೇಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಫೀಚರ್ ಅನ್ನು ಸಹ ಒಳಗೊಂಡಿದೆ. 110 ಸ್ಪೋರ್ಟ್ ಮೋಡ್ಗಳನ್ನು ಇದು ಸಪೋರ್ಟ್ ಮಾಡುತ್ತದೆ. ನಿಖರವಾದ ಲೊಕೇಶನ್ ಡೇಟಾ ಒದಗಿಸಲು ಅಂತರ್ನಿರ್ಮಿತ ಜಿಪಿಎಸ್ ಅನ್ನು ಒಳಗೊಂಡಿದೆ. ಇದರ ಬ್ಯಾಟರಿ 13 ದಿನಗಳವರೆಗೆ ಬಾಳಿಕೆ ಬರುತ್ತದೆ.