ಸ್ಯಾನ್ ಪ್ರಾನ್ಸಿಸ್ಕೊ:ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟದಿಂದ ಎಲಾನ್ ಮಸ್ಕ್ ಕೆಳಗೆ ಇಳಿದಿದ್ದಾರೆ. 2022ರಲ್ಲಿ ಎಲಾನ್ ಮಸ್ಕ್ ನಿವ್ವಳ ಮೌಲ್ಯ 100 ಡಾಲರ್ ಶತಕೋಟಿ ಕುಸಿತಗೊಂಡಿರುವುದು ಇದಕ್ಕೆ ಕಾರಣ. ಅವರ ಬದಲು ಬರ್ನಾಡ್ ಅರ್ನಾಲ್ಟ್ ವಿಶ್ವದ ನಂಬರ್ 1 ಶ್ರೀಮಂತ ಆಗಿಹೊರ ಹೊಮ್ಮಿದ್ದಾರೆ.
ಐಷಾರಾಮಿ ಬ್ರಾಂಡ್ ಲೂಹಿಸ್ ವಿಟಾನ್ನ ಮಾತೃ ಸಂಸ್ಥೆ ಎಲ್ವಿಎಂಎಚ್ನ ಮುಖ್ಯ ಕಾರ್ಯ ನಿರ್ವಾಹಕ ಬರ್ನಾಡ್ ಅರ್ನಾಲ್ಟ್ ಆಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಮಸ್ಕ್ ಪ್ರಸ್ತುತ 168.5 ಶತಕೋಟಿ ಡಾಲರ್ ಒಡೆಯರಾದರೆ, ಅರ್ನಾಲ್ಟ್, ನಿವ್ವಳ ಮೊತ್ತ 172.9 ಶತಕೋಟಿ ಡಾಲರ್ ಆಗಿದೆ.
ಕಳೆದ ವಾರ ಅರ್ನಾಲ್ಟ್ ಮತ್ತು ಆತನ ಕುಟುಂಬ ಸದಸ್ಯರ ನಿವ್ವಳ ಮೊತ್ತ ಮೊದಲ ಬಾರಿ 185.4 ಬಿಲಿಯನ್ ಡಾಲರ್ ಆಗಿದ್ದು, ಇದು ಮಸ್ಕ್ 185.3 ಬಿಲಿಯನ್ ಡಾಲರ್ ಮೊತ್ತಕ್ಕಿಂತ ಹೆಚ್ಚಿತ್ತು. ಟೆಸ್ಲಾ ಸಿಇಒ ಮಸ್ಕ್ ಟ್ವಿಟರ್ ಖರೀದಿ ಬಳಿಕ ಅವರ ಸಂಪತ್ತಿನಲ್ಲಿ 44 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಮಸ್ಕ್ ನಿವ್ವಳ ಮೊತ್ತ 340 ಮಿಲಿಯನ್ ಡಾಲರ್ನಷ್ಟು ಹೆಚ್ಚಿತ್ತು. ಈ ವೇಳೆ ಟೆಸ್ಕಾ ಷೇರು ಕೂಡ 58ರಷ್ಟು ಜಿಗಿದಿತ್ತು. 2021ರಲ್ಲಿ ಮಸ್ಕ್ 185 ಬಿಲಿಯನ್ ಡಾಲರ್ ಹೊಂದುವ ಮೂಲಕ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದರು. ಇದಾದ ಬಳಿಕ ಟೆಸ್ಲಾ ಷೇರ್ ಕುಸಿಯಲಾರಂಭಿಸಿತ್ತು. ಶಾಂಘೈನಲ್ಲಿನ ತಮ್ಮ ಉತ್ಪನ್ನವನ್ನು ಡಿಸೆಂಬರ್ನಲ್ಲಿ ಶೇ 20 ರಷ್ಟನ್ನು ಕಡಿಮೆಗೊಳಿಸಿರುವುದು ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ.
ಇದನ್ನೂ ಓದಿ: ಟ್ವಿಟರ್ ಪದಗಳ ಮಿತಿ 280 ರಿಂದ 4000 ಕ್ಕೆ ಹೆಚ್ಚಳ: ಬಳಕೆದಾರರ ಪ್ರಶ್ನೆಗೆ ಹೌದು ಎಂದ ಎಲಾನ್ ಮಸ್ಕ್