ಕರ್ನಾಟಕ

karnataka

ETV Bharat / science-and-technology

ನೋಕಿಯಾ C32 ಸ್ಮಾರ್ಟ್​ಫೋನ್ ಲಾಂಚ್: ಬೆಲೆ ರೂ. 8,999 ರಿಂದ ಆರಂಭ

ನೋಕಿಯಾ ಭಾರತದಲ್ಲಿ ಮತ್ತೊಂದು ಬಜೆಟ್ ಸ್ಮಾರ್ಟ್​ ಫೋನ್ ಲಾಂಚ್ ಮಾಡಿದೆ. 5000 mAh ಬ್ಯಾಟರಿ ಹೊಂದಿರುವ ಹೊಸ ನೋಕಿಯಾ ಸಿ32 ಭಾರತದ ಮಾರುಕಟ್ಟೆಗೆ ಬಂದಿದೆ.

Nokia launches new budget smartphone 'C32' in India
Nokia launches new budget smartphone 'C32' in India

By

Published : May 23, 2023, 3:50 PM IST

ನವದೆಹಲಿ : ನೋಕಿಯಾ ಫೋನ್​ಗಳ ತಯಾರಕ ಕಂಪನಿ ಎಚ್​ಎಂಡಿ ಗ್ಲೋಬಲ್ ನೋಕಿಯಾದ ಮತ್ತೊಂದು ಬಜೆಟ್ ಸ್ಮಾರ್ಟ್​ಫೋನ್ ಲಾಂಚ್ ಮಾಡಿದೆ. 50MP ಡ್ಯೂಯೆಲ್ ಕ್ಯಾಮೆರಾ ಹೊಂದಿರುವ ಹೊಸ ನೋಕಿಯಾ C32 ಭಾರತದಲ್ಲಿ ಲಾಂಚ್ ಆಗಿದೆ. ನೋಕಿಯಾ C32 ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಚಾರ್ಕೋಲ್, ಬ್ರೀಜಿ ಮಿಂಟ್ ಮತ್ತು ಬೀಚ್ ಪಿಂಕ್ ಈ ಬಣ್ಣಗಳಲ್ಲಿ ಯಾವುದನ್ನಾದರೂ ನೀವು ಆರಿಸಿಕೊಳ್ಳಬಹುದು. 7GB + 64GB ಮತ್ತು 7GB + 128 GB ಸ್ಟೋರೇಜ್ ಮತ್ತು ಮೆಮೊರಿ ಕಾನ್ಫಿಗರೇಶನ್‌ ಹೊಂದಿರುವ ಮಾಡೆಲ್​ಗಳ ಬೆಲೆಗಳು ಕ್ರಮವಾಗಿ ರೂ 8,999 ಮತ್ತು ರೂ 9,499 ಆಗಿದೆ. ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್​ಗಳಲ್ಲಿ ಮಂಗಳವಾರದಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಭಾರತದಲ್ಲಿ ನೋಕಿಯಾ C-ಸರಣಿಯ ಯಶಸ್ಸು ಈ ವಿಭಾಗದಲ್ಲಿ ಉತ್ತಮ ಮೌಲ್ಯ ಮತ್ತು ನಾವೀನ್ಯತೆ ನೀಡುವುದನ್ನು ಮುಂದುವರಿಸಲು ನಮ್ಮನ್ನು ಪ್ರೇರೇಪಿಸಿದೆ. ಮೇಲಾಗಿ ಬೆಲೆಯ ಕಾರಣದಿಂದ ವಿನ್ಯಾಸದಲ್ಲಿ ರಾಜಿಯಾಗಬಾರದು ಎಂಬುದು ನಮ್ಮ ನಂಬುಗೆಯಾಗಿದೆ. ಸಾಮಾನ್ಯವಾಗಿ ಪ್ರೀಮಿಯಂ ವಿನ್ಯಾಸಗಳಲ್ಲಿ ಕಂಡುಬರುವ ಕಠಿಣ ಗಾಜಿನ ಫಿನಿಶ್ ಈ ಫೋನ್​ನಲ್ಲಿದೆ. ಇದು ಕಾಣಲು ಎಷ್ಟು ಚೆನ್ನಾಗಿದೆಯೋ ಇದು ಸೆರೆಹಿಡಿಯುವ ಚಿತ್ರಗಳು ಸಹ ಅಷ್ಟೇ ಉತ್ತಮವಾಗಿರುತ್ತವೆ ಎಂದು ಎಚ್​ಎಮಡಿ ಗ್ಲೋಬಲ್​ನ ಭಾರತ ಮತ್ತು ಎಪಿಎಸಿ ವೈಸ್ ಪ್ರೆಸಿಡೆಂಟ್ ರವಿ ಕುನ್ವಾರ್ ತಿಳಿಸಿದ್ದಾರೆ.

ಹೊಸ ನೋಕಿಯಾ C32 ಪ್ರಕಾಶಮಾನವಾದ 6.5-ಇಂಚಿನ HD+ ಡಿಸ್​ಪ್ಲೇ, ಟಫನ್ಡ್ ಗ್ಲಾಸ್ ಬ್ಯಾಕ್, ಡ್ಯುಯಲ್-ಟೋನ್ ಫಿನಿಶ್ ಮತ್ತು ಸೊಗಸಾದ ನೇರವಾದ ಸೈಡ್‌ವಾಲ್‌ಗಳನ್ನು ಒಳಗೊಂಡಿದೆ. 50MP AI ಡ್ಯುಯಲ್ ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವು ಹಾರ್ಡ್‌ವೇರ್‌ ಹಾಗೂ ಇಮೇಜಿಂಗ್ ಅಲ್ಗಾರಿದಮ್‌ಗಳನ್ನು ಹೊಂದಿದೆ. IP52-ರೇಟೆಡ್ ರಕ್ಷಣೆಯು Nokia C32 ಅನ್ನು ಗೀರುಗಳು, ನೀರು ಹನಿಗಳು ಮತ್ತು ದೈನಂದಿನ ಕಠಿಣ ಬಳಕೆಯಿಂದ ರಕ್ಷಿಸುತ್ತದೆ. ಹೊಸ C32 ಸುಗಮ ಅಪ್ಲಿಕೇಶನ್ ಬಳಕೆಗಾಗಿ ಮೆಮೊರಿ ವಿಸ್ತರಣೆಯೊಂದಿಗೆ 3GB ಹೆಚ್ಚುವರಿ ವರ್ಚುವಲ್ RAM ಹೊಂದಿದೆ. ಇದರಲ್ಲಿ ಶಕ್ತಿಶಾಲಿಯಾದ 5000 mAh ಬ್ಯಾಟರಿ ಇದೆ.

ನೋಕಿಯಾ ಕಾರ್ಪೊರೇಷನ್ 130 ದೇಶಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವ ಮೊಬೈಲ್ ಫೋನ್‌ಗಳ ವಿಶ್ವದ ಅತಿದೊಡ್ಡ ತಯಾರಕನಾಗಿದೆ. ನೋಕಿಯಾ ಕಂಪನಿಯನ್ನು ನಾಲ್ಕು ವ್ಯಾಪಾರ ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊಬೈಲ್ ಫೋನ್‌ಗಳು, ಮಲ್ಟಿಮೀಡಿಯಾ, ಎಂಟರ್‌ಪ್ರೈಸ್ ಪರಿಹಾರಗಳು ಮತ್ತು ನೆಟ್‌ವರ್ಕ್‌ಗಳು. ಮೊಬೈಲ್ ಫೋನ್‌ಗಳ ಗುಂಪು ಗ್ರಾಹಕ ಮತ್ತು ಕಾರ್ಪೊರೇಟ್ ಮಾರುಕಟ್ಟೆಗಳಲ್ಲಿ ವೈರ್‌ಲೆಸ್ ಧ್ವನಿ ಮತ್ತು ಡೇಟಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಮಲ್ಟಿಮೀಡಿಯಾ ವಿಭಾಗವು ಮೊಬೈಲ್ ಗೇಮಿಂಗ್ ಸಾಧನಗಳು, ಹೋಮ್ ಸ್ಯಾಟಲೈಟ್ ಸಿಸ್ಟಮ್‌ಗಳು ಮತ್ತು ಕೇಬಲ್ ಟೆಲಿವಿಷನ್ ಸೆಟ್-ಟಾಪ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತದೆ.

ಎಂಟರ್‌ಪ್ರೈಸ್ ಸೊಲ್ಯೂಷನ್ಸ್ ವಿಭಾಗವು ಕಾರ್ಪೊರೇಟ್ ವಲಯದಲ್ಲಿ ಬಳಕೆಗಾಗಿ ವೈರ್‌ಲೆಸ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ವೈರ್‌ಲೆಸ್ ಸ್ವಿಚಿಂಗ್ ಮತ್ತು ಟ್ರಾನ್ಸ್‌ಮಿಷನ್ ಉಪಕರಣಗಳನ್ನು ಕಂಪನಿಯ ನೆಟ್‌ವರ್ಕ್ ವಿಭಾಗದ ಮೂಲಕ ಮಾರಾಟ ಮಾಡಲಾಗುತ್ತದೆ. ನೋಕಿಯಾ ಒಂಬತ್ತು ದೇಶಗಳಲ್ಲಿ 15 ಉತ್ಪಾದನಾ ಸೌಲಭ್ಯಗಳನ್ನು ನಿರ್ವಹಿಸುತ್ತದೆ ಮತ್ತು 12 ದೇಶಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಹೊಂದಿದೆ.

ಇದನ್ನೂ ಓದಿ : ಇಸ್ರೊದ NVS-01 ನ್ಯಾವಿಗೇಷನ್ ಉಪಗ್ರಹ ಮೇ 29ರಂದು ಉಡಾವಣೆ

ABOUT THE AUTHOR

...view details